ಕೈಗೆಟಕುವ ದರದಲ್ಲಿ ಆ್ಯಂಡ್ರಾಯಿಡ್ ಫೋನ್  |  ಶಾರ್ಪ್ ಕ್ಲಿಕ್ ತಂತ್ರಜ್ಞಾನ | ಸ್ಪೆಷಲ್ ಲಾಂಚ್ ಆಫರ್ ಜೊತೆ ಜಿಯೋ ಕ್ಯಾಶ್ ಬ್ಯಾಕ್ ಆಫರ್ !

ಲಾವಾ ಅತಿ ಕಡಿಮೆ ಬೆಲೆಗೆ ಅಂದರೆ, 4949 ರು. ಗೆ ತನ್ನ Z ಸೀರಿಸ್‌ನ Z60 ಮೊಬೈಲ್‌ಅನ್ನು ಮಾರುಕಟ್ಟೆಗೆ ತಂದಿದೆ. 

ಕಡಿಮೆ ಬೆಲೆ ಎನ್ನುವುದರ ಜೊತೆಗೆ ಕ್ಯಾಮರಾ ಪ್ರಿಯರಿಗಾಗಿ ಶಾರ್ಪ್ ಕ್ಲಿಕ್ (ವೇಗವಾಗಿ ಫೋಟೋ ಸೆರೆಹಿಡಿಯುವುದು) ತಂತ್ರಜ್ಞಾನ, 5 ಎಂಪಿ ಆಟೋಫೋಕಸ್ ಫ್ರಂಟ್ ಕ್ಯಾಮರಾ, 5 ಎಂಪಿ ಹೈ ಎಂಡ್ ಕ್ಯಾಮರಾ, 1 ಜಿಬಿ RAM, 16 ಜಿಬಿ ROM ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ. 

ಇದರ ಜೊತೆಗೆ 8.1 ಓರಿಯೋ ಆ್ಯಂಡ್ರಾಯ್ಡ್, 2500 mAh ಸಾಮರ್ಥ್ಯದ ಪಾಲಿಮರ್ ಬ್ಯಾಟರಿ ಇದೆ.

ಫೋನನ್ನು ನವೆಂಬರ್ 15ರ ಒಳಗೆ ಕೊಂಡರೆ ಸ್ಪೆಷಲ್ ಲಾಂಚ್ ಆಫರ್ ಎಂದು ಒಂದು ಬಾರಿ ಸ್ಕ್ರೀನ್ ಬದಲಾವಣೆಯ ಅವಕಾಶವನ್ನು ಕಂಪನಿ ನೀಡಿದೆ.

ಇದರ ಜೊತೆಗೆ ಲಾವಾ Z60 ಕೊಳ್ಳುವುದರೊಂದಿಗೆ 2200 ರು. ಜಿಯೋ ಕ್ಯಾಶ್ ಬ್ಯಾಕ್ ಆಫರ್ ಅನ್ನೂ ಪಡೆಯುವ ಅವಕಾಶವಿದೆ.