ಜಿಯೋನಿಂದ ಹೊಸ ವರ್ಷದ ಧಮಾಕಾ... ಬೆರಳತುದಿಯಲ್ಲೇ ಹೊಸ ಸೌಲಭ್ಯ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Jan 2019, 7:14 PM IST
JioRail App for JioPhone and JioPhone2 Users Launched By Reliance Jio
Highlights

ಮೊಬೈಲ್ ಕಂಪನಿಗಳು ಈಗ ಕರೆ/ಮೆಸೇಜ್‌ಗಳಿಗೆ ಅಥವಾ ಇಂಟರ್ನೆಟ್ ಡೇಟಾಗೆ ಸೀಮಿತವಾಗಿಲ್ಲ. ಅವುಗಳ ಹೊರತಾಗಿ ಇನ್ನೂ ಹಲವು ಸೇವೆ-ಸೌಲಭ್ಯಗಳನ್ನು ಈ ಕಂಪನಿಗಳು ನೀಡುತ್ತಿವೆ. ಜನಪ್ರಿಯ ಮೊಬೈಲ್ ಕಂಪನಿ ಜಿಯೋ ಕೂಡಾ, ತನ್ನ ಬಳಕೆದಾರರಿಗೆ ಇದೀಗ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದೆ.

ಮುಂಬೈ: ತನ್ನ ಬಳಕೆದಾರರ ಅನುಕೂಲಕ್ಕಾಗಿ Reliance Jio  ಹೊಸ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.  ಜಿಯೋ ರೈಲ್ ಎಂಬ ಆ್ಯಪ್‌ವೊಂದನ್ನು ಬಿಡುಗಡೆ ಮಾಡಿರುವ ಜಿಯೋ, ಬಳಕೆದಾರರಿಗೆ  IRCTC ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆಗೆ ಚಾಲನೆ ನೀಡಿದೆ.  

ಜಿಯೋ ಆ್ಯಪ್ ಸ್ಟೋರಿನಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ಜಿಯೋ ರೈಲ್ ಆ್ಯಪ್ ಲಭ್ಯವಿದ್ದು, ಜಿಯೋ ಫೋನ್ ಮತ್ತು ಜಿಯೋ ಪೋನ್ 2 ಬಳಕೆದಾರರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ರೈಲು ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಿದೆ. 

ಇದನ್ನೂ ಓದಿ: ALERT: ಪ್ಲೇಸ್ಟೋರ್‌ನಿಂದ ಮತ್ತೆ 85 ಆ್ಯಪ್‌ ಡಿಲೀಟ್! ಫೋನ್ ಎತ್ತಿ ಚೆಕ್ ಮಾಡಿ....

ವಿಶೇಷವೆಂದರೆ, IRCTC ಆಕೌಂಟ್ ಇಲ್ಲದೆ ಇರುವವರು ಕೂಡಾ ಈ ಆ್ಯಪ್ ಮೂಲಕ ಆಕೌಂಟ್ ಕ್ರಿಯೇಟ್ ಮಾಡಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದಲ್ಲದೇ ಈ ಆ್ಯಪ್ ಮೂಲಕ ಜಿಯೋ ಫೋನ್ ಬಳಕೆದಾರರು PNR ಸ್ಟೇಟಸ್ ಪರಿಶೀಲಿಸುವ ಅವಕಾಶವೂ ಇದೆ. ಜೊತೆಗೆ, ಟ್ರೈನ್ ಎಲ್ಲಿದೇ ಎಂದು ನೋಡುವ ಸೌಲಭ್ಯವೂ ಈ ಆ್ಯಪ್‌ನಲ್ಲಿದೆ. 

ರೈಲು ಪ್ರಯಾಣದಲ್ಲಿ ಊಟ-ತಿಂಡಿ ಇಲ್ಲದಿದ್ದರೆ ಹೇಗೆ? ಎಂಬುವುದನ್ನು ಯೋಚಿಸುತ್ತಿದ್ದೀರಾ? ಡೋಂಟ್ ವರಿ, ಈ ಆ್ಯಪ್ ನಲ್ಲಿ ಫುಡ್ ಆರ್ಡರ್ ಮಾಡುವ ವ್ಯವಸ್ಥೆಯೂ ಇದೆ!

ಈ ಆ್ಯಪ್ ಬಳಕೆಯಿಂದಾಗಿ ಜಿಯೋ ಫೋನ್ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ, ಒಂದೇ ಕ್ಲಿಕ್‌ನಲ್ಲಿ ಟಿಕೆಟ್ ಪಡೆಯುವುದರೊಂದಿಗೆ ಉದ್ದದ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.  

ಇದನ್ನೂ ಓದಿ: ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

ಜನವರಿ 15ರಿಂದ ಮಾರ್ಚ್ 4ರವರೆಗೆ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಭೇಟಿ ನೀಡುವ ಕೋಟ್ಯಾಂತರ ಭಕ್ತರಿಗೆ ಅನುಕೂಲ ಕಲ್ಪಿಸಲು Reliance Jio   ‘ಕುಂಭ ಜಿಯೋಫೋನ್‌’ ಆ್ಯಪ್‌ನ್ನು ಬಿಡುಗಡೆ ಮಾಡಿತ್ತು.

loader