ಮುಂಬೈ  (ಜ. 04)  ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವುದರ ಒಂದು  ಭಾಗವಾಗಿ ಬಾಯ್ಕಾಟ್ ಜಿಯೋ ಅಭಿಯಾನ ಸಹ ಶುರುವಾಗಿದೆ.  ಜಿಯೋ ಮೇಲೆ ಕೆಂಡ ಕಾರಿದ್ದ ದುಷ್ಕರ್ಮಿಗಳು ಪಂಜಾಬ್ ಮತ್ತು ಹರ್ಯಾಣದಲ್ಲಿ ಟವರ್ ಗಳನ್ನು ಧ್ವಂಸ ಮಾಡಿದ್ದರು. ಇದೀಗ  ನ್ಯಾಯಕ್ಕಾಗಿ ಕಂಪನಿ ನ್ಯಾಯಾಲಯದ ಮೊರೆ ಹೋಗಿದೆ.

ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್​ಜೆಐಎಲ್) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಜನವರಿ 4ರಂದು ಅರ್ಜಿ ಸಲ್ಲಿಸಲಿದ್ದು, ದುಷ್ಕರ್ಮಿಗಳು ಕಂಪನಿಯ ಆಸ್ತಿ ಹಾನಿ ಮಾಡಿದ್ದಾರೆ ಎಂದು ದೂರು ಸಲ್ಲಿಸಿದೆ.  ಸರ್ಕಾರ ಮಧ್ಯ ಪ್ರವೇಶ ಮಾಡಿ ದುಷ್ಕರ್ಮಿಗಳಿಗೆ ತಡೆ ಹಾಕಬೇಕು. ರಿಲಯನ್ಸ್ ಫ್ರೆಶ್ ಮಳಿಗೆ ಬಂದ್ ಮಾಡಿಸುವ ಕೆಲಸಕ್ಕೂ ಬ್ರೇಕ್ ಹಾಕಬೇಕು ಎಂದು  ಕೋರಿದೆ.

ಜಿಯೋದಿಂದ ಬಂಪರ್ ಕೊಡುಗೆ..ಇನ್ನು ಮುಂದೆ ಎಲ್ಲವೂ ಉಚಿತ

ಒಂದು ವಾರದಲ್ಲಿ ಪಂಜಾಬ್‌ನಲ್ಲಿ ಜಿಯೋ ಒಡೆತನದ ಸುಮಾರು 1,500 ಮೊಬೈಲ್ ಟವರ್‌ಗಳು ಮತ್ತು ಟೆಲಿಕಾಂ  ಆಸ್ತಿಗಳನ್ನುಧ್ವಂಸ ಮಾಡಲಾಗಿದೆ.  ಕೃಷಿ ಕಾನೂನುಗಳು ಕಾರ್ಪೊರೇಟ್ ಸಂಸ್ಥೆಗಳಿಒಗೆ ಲಾಭದಾಯಕವಾಗಿದೆ ಎಂಬ  ಕಾರಣಕ್ಕೆ ಇಂಥ ಕೆಲಸ ಮಾಡಲಾಗಿದೆ.

ಯಾವುದಕ್ಕೂ ಸಂಬಂಧವಿಲ್ಲದ ನಮ್ಮ ಸಂಸ್ಥೆಯ ಆಸ್ತಿ ನಷ್ಟ ಮಾಡಲಾಗುತ್ತಿದ್ದು ಜನರಿಗೆ ಸೇವೆ ನೀಡುವುದು ನಮ್ಮ ಧ್ಯೇಯ ಎಂದಿರುವ ಕಂಪನಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಿದೆ.