ಪ್ರಸ್ತುತ ಜಿಯೊ ನೆಟ್‌ವರ್ಕ್ ಬಳಸುತ್ತಿರುವ ಗ್ರಾಹಕರು ಸಹ ಜಿಯೊ ಪ್ರೈಮ್‌ಗೆ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ಇದಕ್ಕೆ ಎನ್‌ರೋಲ್ ಮಾಡಿಕೊಳ್ಳಲು ಮಾ.31 ಕೊನೆಯ ದಿನವಾಗಿರಲಿದೆ.

ಮುಂಬೈ(ಫೆ.28): ಮಾರುಕಟ್ಟೆಗೆ ಲಗ್ಗೆ ಇಡುವ ವೇಳೆ ಆಕರ್ಷಕ ‘ವೆಲ್‌ಕಮ್ ಆರ್’ ಮತ್ತು ಹೊಸ ವರ್ಷದ ಉಚಿತ ಕರೆ ಮತ್ತು ಡಾಟಾ ಆರ್‌ಗಳ ಮೂಲಕ 6 ತಿಂಗಳೊಳಗೆ ರಿಲಾಯನ್ಸ್ ಜಿಯೊ 10ಕೋಟಿಗೂ ಹೆಚ್ಚು ಗ್ರಾಹಕರನ್ನು ತನ್ನದಾಗಿಸಿಕೊಂಡಿದೆ. ಆದರೆ, ಗ್ರಾಹಕರಿಗೆ ಜಿಯೊ ನೆಟ್‌ವರ್ಕ್ ನೀಡಿದ್ದ ಉಚಿತ ಡಾಟಾ ಮತ್ತು ಕರೆಗಳ ಆರ್ ಏಪ್ರಿಲ್ 1ರಿಂದ ರದ್ದುಗೊಳ್ಳಲಿದ್ದು, ಇದರಿಂದ ಜಿಯೊ 5 ಕೋಟಿ ಗ್ರಾಹಕರನ್ನು ಕಳೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸ್ತುತ ಜಿಯೊ ನೆಟ್‌ವರ್ಕ್ ಬಳಸುತ್ತಿರುವ ಗ್ರಾಹಕರು ಸಹ ಜಿಯೊ ಪ್ರೈಮ್‌ಗೆ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ಇದಕ್ಕೆ ಎನ್‌ರೋಲ್ ಮಾಡಿಕೊಳ್ಳಲು ಮಾ.31 ಕೊನೆಯ ದಿನವಾಗಿರಲಿದೆ. ಆದರೆ ಈ ವೇಳೆಗೆ ಜಿಯೋ ಕರೆ ಗುಣಮಟ್ಟ ಸುಧಾರಿಸದೇ ಇದ್ದಲ್ಲಿ ಜಿಯೋಗೆ ಗುಡ್‌ಬೈ ಹೇಳುವುದಾಗಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.50ರಷ್ಟು ಜನ ತಿಳಿಸಿದ್ದಾರೆ.