Asianet Suvarna News Asianet Suvarna News

Password Safety: ಇಂಟರ್ನೆಟ್ ಬ್ರೌಸರ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಸೇವ್‌ ಮಾಡುವುದು ಎಷ್ಟು ಸೇಫ್?

Chrome ಮತ್ತು Mozilla Firefox ನಂತಹ ಬ್ರೌಸರ್‌ಗಳು ವೆಬ್‌ಸೈಟ್‌ಗಳನ್ನು ತಕ್ಷಣವೇ ಪ್ರವೇಶಿಸಲು ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ನಿಮ್ಮ ಲಾಗಿನ್ ಮಾಹಿತಿಯನ್ನು ಸೇವ್‌ ಮಾಡುವುದು  ಸುರಕ್ಷಿತವೇ? ಇಲ್ಲಿದೆ ಡಿಟೇಲ್ಸ್‌

Is it safe to store your passwords on Chrome or other Internet browsers mnj
Author
Bengaluru, First Published Dec 30, 2021, 11:47 AM IST

Tech Desk: ಅಂತರ್ಜಾಲದ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂಟರನೆಟ್‌ ಬಳಸಬೇಕಾದರೆ ಕನಿಷ್ಟ ಯೂಸರ್‌ ನೇಮ್‌, ಇ-ಮೇಲ್‌ ಐಡಿ ಅತ್ಯಗತ್ಯ. ಇವುಗಳನ್ನು ಹೊರತುಪಡಿಸಿ ಕೆಲ ವೆಬ್‌ಸೈಟ್‌ಗಳು ಮೊಬೈಲ್‌ ನಂಬರ್, ಜನ್ಮ ದಿನಾಂಕ ಸೇರಿದಂತೆ ಹಲವು ಮಾಹಿತಿಗಳನ್ನು ಕೇಳುತ್ತವೆ.  ಇತ್ತೀಚಿನ ದಿನಗಳಲ್ಲಿ ವಿವಧ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ ಬಳಸಬೇಕಾದರೆ ಬಳಕೆದಾರರು 10 ರಿಂದ 12 ಅಥವಾ ಅದಕ್ಕೂ ಹೆಚ್ಚು ಆನ್‌ಲೈನ್ ಖಾತೆಗಳನ್ನು ತೆರೆಯಬೇಕಾಗುತ್ತದೆ. ಆದರೆ ಇಷ್ಟೇಲ್ಲಾ ಖಾತೆಗಳ ಯುಸರ್‌ ನೇಮ್‌ ಹಾಗೂ ಪಾಸವರ್ಡ್‌ ನೆನಪಿಟ್ಟುಕೊಳ್ಳುವುದು ಸಾಧ್ಯವೇ? 

ಹಾಗಾಗಿ ನಿಮ್ಮ ಲಾಗಿನ್ ವಿವರಗಳನ್ನು  ಸರ್ವರ್‌ಗಳಲ್ಲಿ ಸೇವ್‌ ಮಾಡುವ ಮೂಲಕ  ಗೂಗಲ್‌ ಕ್ರೋಮ್‌   ನಿಮಗೆ ಸಹಾಯ ಮಾಡುತ್ತವೆ.  ಕ್ರೋಮ್ ಸೇರಿದಂತೆ ಮೊಜಿಲ್ಲಾ ಫೈರ್‌ಫಾಕ್ಸ್‌ನಂತಹ ಇತರ ಬ್ರೌಸರ್‌ಗಳು ವೆಬ್‌ಸೈಟ್‌ಗಳನ್ನು ತಕ್ಷಣವೇ ಪ್ರವೇಶಿಸಲು ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ನಿಮ್ಮ ಪಾಸ್‌ವರ್ಡ್‌ಗಳನ್ನು Chrome, Google ಅಥವಾ ಯಾವುದೇ ಇತರ ಬ್ರೌಸರ್‌ಗೆ ಸೇವ್‌ ಮಾಡುವುದು ಸುರಕ್ಷಿತ ಅಥವಾ ಅಪಾಯಕಾರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ಇಂಟರ್ನೆಟ್ ಬ್ರೌಸರ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಸೇವ್‌ ಮಾಡುವುದು ಎಷ್ಟು ಸೇಫ್? ಇಲ್ಲಿದೆ ಡಿಟೇಲ್ಸ್‌

ಕ್ರೋಮ್ ಅಥವಾ ಇತರ ಬ್ರೌಸರ್‌ಗಳಲ್ಲಿ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುವುದು ಸುರಕ್ಷಿತವೇ?

ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್ ಮಾತ್ರ ತಿಳಿದಿರುವ "ರಹಸ್ಯ ಕೀ" ಯೊಂದಿಗೆ ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ಕ್ರೋಮ್ ಎನ್‌ಕ್ರಿಪ್ಟ್ ಮಾಡುತ್ತದೆ ಎಂದು ಗೂಗಲ್ ಹೇಳುತ್ತದೆ. ಜತೆಗೆ ಗೂಗಲ್ ಸರ್ವರ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸುವ ಮೊದಲು ಈ ಪ್ರಕ್ರಿಯೆ ನಡೆಯುತ್ತದೆ. ಅಂದರೆ ಗೂಗಲ್ ಸೇರಿದಂತೆ ಯಾರೂ ನಿಮ್ಮ ಬಳಕೆದಾರ‌ ಹೆಸರು (User Name) ಅಥವಾ ಪಾಸ್‌ವರ್ಡ್ (Password) ಅನ್ನು  ಆ್ಯಕ್ಸಸ್‌ ಪಡೆಯಲು ಸಾಧ್ಯವಿಲ್ಲ.

ನಿಮ್ಮ ಗೂಗಲ್ ಖಾತೆಯ ಪಾಸ್‌ವರ್ಡ್ ನಿರ್ವಾಹಕ‌ (Password Manager) ವಿಭಾಗಕ್ಕೆ ನೀವು ಭೇಟಿ ನೀಡಿದರೆ, ನಿಮ್ಮ ಐಡಿ ಅಥವಾ ಪಾಸ್‌ವರ್ಡ್‌ ಆ್ಯಕ್ಸಸ್‌ ಪಡೆಯಲು ನಿಮಗೂ ಸಹ ಸಾಧ್ಯವಿಲ್ಲ. ಹೌದು!‌ ನಿಮ್ಮ ಪಾಸ್‌ವರ್ಡ್ ಮ್ಯಾನೆಜ್‌ ಮಾಡಲು ಟೆಕ್ ದೈತ್ಯ ಮೊದಲು ನಿಮ್ಮ ಜಿಮೇಲ್ ಖಾತೆಯ ಪಾಸ್‌ವರ್ಡ್ ಅನ್ನು ನಮೂದಿಸಲು ಕೇಳುತ್ತದೆ, ಅದರ ನಂತರ ನೀವು ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಗೂಗಲ್‌ ಸೇವ್‌ ಮಾಡಿದ ಪಾಸವರ್ಡ್‌ ಪರಿಶೀಲಿಸುವುದು ಹೇಗೆ?

ನೀವು ಅಥವಾ, ಉದಾಹರಣೆಗೆ, ಬೇರೊಬ್ಬರು ನಿಮ್ಮ ಪಾಸ್‌ವರ್ಡ್‌ಗಳನ್ನುಆ್ಯಕ್ಸಸ್‌ ಪಡೆಯಲು ಪ್ರಯತ್ನಿಸಿದಾಗ ಗೂಗಲ್ ಎಂದಿಗೂ ಎಚ್ಚರಿಕೆಯನ್ನು ಕಳುಹಿಸುವುದಿಲ್ಲ. ಇನ್ನೂ ನೀವು ಎಲ್ಲಾ ಪಾಸ್‌ವರ್ಡ್‌ಗಳಿಗೆ ಒಂದೇ ಬಾರಿಗೆ ಆ್ಯಕ್ಸಸ್‌ ಪಡೆಯಲು ಗೂಗಲ್‌ ಅವಕಾಶ ನೀಡಿಲ್ಲ. ಉದಾಹರಣೆಗೆ, ನಿಮ್ಮ ಫೇಸ್‌ಬುಕ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನುನೀವು ಪರಿಶೀಲಿಸಲು ಬಯಸಿದರೆ, ನೀವು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಜಿಮೇಲ್ ಪಾಸ್‌ವರ್ಡ್ ಅನ್ನು ನಮೂದಿಸಿ. ನಂತರ ನೀವು ಲಾಗಿನ್ ಮಾಹಿತಿಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.‌ ಬೇರೆ ಅಪ್ಲಿಕೇಶನ್‌ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನೀವು ಪರಿಶೀಲಿಸಲು ಇನ್ನೊಮ್ಮ ಪಾಸವರ್ಡ್‌ ನಮೂದಿಸುವುದು ಅತ್ಯಗತ್ಯ. 

ಫೈರ್‌ಫಾಕ್ಸ್‌ನಲ್ಲಿನ ನಿಮ್ಮ ಡೇಟಾ ಎಷ್ಟು ಸೇಫ್? 

ಇದು ಉತ್ತಮ ಸೆಕ್ಯೂರಿಟಿ ಫೀಚರ್‌, ಆದರೆ ಇದಕ್ಕಾಗಿ ನೀವು ವಿಶೇಷ ನೋಟಿಫಿಕೇಶನ್ ಪಡೆಯುವುದಿಲ್ಲ. ಫೈರ್‌ಫಾಕ್ಸ್‌ನಂತಹ ಬ್ರೌಸರ್‌ಗಳು ಈ ಅಭ್ಯಾಸವನ್ನು ಅನುಸರಿಸುವುದಿಲ್ಲ ಮತ್ತು ನೀವು ಅದರ ಸರ್ವರ್‌ಗಳಲ್ಲಿ ಸಂಗ್ರಹಿಸುವ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ರಕ್ಷಿಸಲು ಭದ್ರತಾ ಪಿನ್ ಅನ್ನು ಸೇರಿಸಲು ಯಾವುದೇ ಮಾರ್ಗವಿಲ್ಲ. ಫೈರ್‌ಫಾಕ್ಸ್ ನಿಮ್ಮ ಡೇಟಾ "ಸುರಕ್ಷಿತವಾಗಿದೆ" ಎಂದು ಹೇಳಿದೆ, ಆದರೆ ನಿಮ್ಮ ಲ್ಯಾಪ್‌ಟಾಪ್ ಅನ್ನು ಸರಳವಾಗಿ ತೆರೆಯಬಹುದು ಅಥವಾ ಹ್ಯಾಕ್ ಮಾಡಬಹುದು ಅಥವಾ ಸೆಟ್ಟಿಂಗ್‌ಗಳು > ಗೌಪ್ಯತೆ ಮತ್ತು ಭದ್ರತೆ > ಲಾಗಿನ್‌ಗಳು ಮತ್ತು ಪಾಸ್‌ವರ್ಡ್‌ಗಳಿಂದ ಲಾಗಿನ್ ಮಾಹಿತಿಗಳನ್ನು ಪಡೆಯಬಹದುದು.

ಗೂಗಲ್‌ ಖಾತೆ ಹ್ಯಾಕ್‌ ಆದರೆ ಏನು ಕಥೆ?

ಇನ್ನು ಯಾವುದೇ ಸಂದರ್ಭದಲ್ಲಿ ಕ್ರೋಮ್ ಸೇರಿದಂತೆ ಯಾವುದೇ ಬ್ರೌಸರ್‌ನಲ್ಲಿ ಲಾಗ್ ಇನ್ ವಿವರಗಳನ್ನು ಸಂಗ್ರಹಿಸುವುದು ಸುರಕ್ಷಿತವಲ್ಲ. ಏಕೆಂದರೆ ಇದರಿಂದ ನೀವು ಯಾವಾಗಲೂ ಸಂಪೂರ್ಣ ರಕ್ಷಣೆಯನ್ನು ಪಡೆಯುವುದಿಲ್ಲ ಮತ್ತು ಇದು ಅಪಾಯಗಳು ಒಳಗೊಂಡಿರುತ್ತವೆ. ಉದಾಹರಣೆಗೆ, ನಿಮ್ಮ ಲ್ಯಾಪ್‌ಟಾಪ್ ಹ್ಯಾಕ್‌ ಆದರೆ ನಿಮ್ಮ ಡೇಟಾವು ರಾಜಿಯಾಗಬಹುದು. ನಿಮ್ಮ ಜಿಮೇಲ್ ಖಾತೆ ಹ್ಯಾಕ್ ಆಗಿದ್ದರೆ, ಆ ವ್ಯಕ್ತಿ ನೀವು ಗೂಗಲ್ ಸರ್ವರ್‌ಗಳಲ್ಲಿ ಸಂಗ್ರಹಿಸಿದ ಯಾವುದೇ ಖಾತೆ ಅಥವಾ ಸೈಟ್‌ಗೆ ಸುಲಭವಾಗಿ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಹೊಸ ಸಾಧನದಲ್ಲಿ ಒಮ್ಮೆ ನೀವು ಜಿಮೇಲ್ಗೆ ಲಾಗ್ ಇನ್ ಮಾಡಿದರೆ, ನೀವು Play Store ಅಥವಾ Chrome ಅಥವಾ Google Photos ಅಥವಾ ಡ್ರೈವ್‌ಗೆ ಮತ್ತೊಮ್ಮೆ ಲಾಗ್ ಇನ್ ಮಾಡುವ ಅಗತ್ಯವಿಲ್ಲ ಎಂದು ನೀವು ಗಮನಿಸಿರಬಹುದು. ಕೇವಲ ಜಿಮೇಲ್ಗೆ ಲಾಗ್ ಇನ್ ಮಾಡುವ ಮೂಲಕ ನೀವು ಎಲ್ಲವನ್ನೂಇತರ ಗೂಗಲ್‌ ಅಪ್ಲಿಕೇಶನ್‌ಗಳಲ್ಲಿ ಸುಲಭವಾಗಿ ಲಾಗಿನ್‌ ಮಾಡಬಹುದು. 

ಪಾಸವರ್ಡ್‌ ಸೇಫಾಗಿಡಲು ಈ ಮಾರ್ಗಗಳನ್ನು ಅನುಸರಿಸಿ!

ನಿಮ್ಮ Facebook, Outlook, ಬ್ಯಾಂಕ್ ಮತ್ತು ಇತರ ಖಾತೆಯ ಪಾಸ್‌ವರ್ಡ್‌ಗಳನ್ನು ಗೂಗಲ್‌ನಲ್ಲಿ ಸೇವ್‌ ಮಾಡಿದ್ದರೆ, ನೀವು ತಕ್ಷಣ ಅವುಗಳನ್ನು ತೆಗೆದುಹಾಕುವುದು ಉತ್ತಮ. ಹಲವಾರು ಬ್ಯಾಂಕಿಂಗ್ ಸೈಟ್‌ಗಳು ಎರಡು-ಹಂತದ ಪರಿಶೀಲನಾ  (Two-Factor Authentication) ವ್ಯವಸ್ಥೆಯನ್ನು ಹೊಂದಿದ್ದರೂ ಮತ್ತು ಕೆಲವು ಭದ್ರತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತವೆ, ಆದ್ದರಿಂದ ಹ್ಯಾಕರ್‌ಗೆ ಭೇದಿಸಲು ಕಷ್ಟವಾಗಬಹುದು. ಆದರೂ ಯಾವುದೇ ಖಾತೆಯ ಲಾಗ್ ಇನ್ ಮಾಹಿತಿಯನ್ನು ಸೇವ್ ಮಾಡದಿರುವುದು ಒಳ್ಳೆಯದು.‌ ಅಷ್ಟು ಮುಖ್ಯವಲ್ಲದ ಸೈಟ್‌ಗಳು ಅಥವಾ ಖಾತೆಗಳು ಪಾಸ್‌ವರ್ಡ್‌ಗಳನ್ನು ತೀರಾ ಅವಶ್ಯಕತೆ ಇದ್ದಲ್ಲಿ ಸೇವ್‌ ಮಾಡಬಹುದು.

2FA ಸಕ್ರಿಯಗೊಳಿಸಲು ಕೂಡ ಕಾರಣವಿದೆ. ಇಲ್ಲಿ ನಿಮಗೆ ಪಾಸ್‌ವರ್ಡ್ ಅನ್ನು ನಮೂದಿಸುವುದು ಮಾತ್ರವಲ್ಲದೆ ಯಾರಿಗೂ ತಿಳಿದಿಲ್ಲದ ದ್ವಿತೀಯ ಪಾಸ್‌ವರ್ಡ್, ಪಿನ್ ಅಥವಾ OTP ಅನ್ನು ನಮೂದಿಸುವ ಅಗತ್ಯವಿದೆ. 2FA ಸಂಪೂರ್ಣವಾಗಿ ಹ್ಯಾಕ್-ಪ್ರೂಫ್ ಎಂದು ಅರ್ಥವಲ್ಲ. ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯ ಮತ್ತು ಸೈಬರ್‌ ಸೆಕ್ಯುರಿಟಿ ಸಂಸ್ಥೆ ಪಾಲೊ ಆಲ್ಟೊ ನೆಟ್‌ವರ್ಕ್ಸ್‌ನ ಸಂಶೋಧಕರು ಮ್ಯಾನ್-ಇನ್-ದಿ-ಮಿಡಲ್ (MITM) ದಾಳಿಯಂತಹ ಕೆಲವು "ಫಿಶಿಂಗ್ ಟೂಲ್‌ಕಿಟ್‌ಗಳು" ಇದನ್ನೂ ಹ್ಯಾಕ್‌ ಮಾಡಬಹುದು ಎಂದು ಕಂಡುಹಿಡಿದಿದ್ದಾರೆ. 

ಪ್ರತಿ ತಿಂಗಳು ಪಾಸ್‌ವರ್ಡ್‌ಗಳನ್ನು ಬದಲಾಯಿಸಿ!

ಬಳಕೆದಾರರು ಇದರ ಬಗ್ಗೆ ಹೆಚ್ಚೇನು ಮಾಡಲು ಸಾಧ್ಯವಾಗದಿದ್ದರೂ, ಡೇಟಾವನ್ನು ಪ್ರವೇಶಿಸಲು ಹ್ಯಾಕರ್‌ಗಳಿಗೆ ಸುಲಭವಾಗದಂತೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬಹುದು. ನೀವು ಹೊಂದಿರುವ ಪ್ರತಿಯೊಂದು ಆನ್‌ಲೈನ್ ಖಾತೆಗೆ 2FA ಅನ್ನು ಸಕ್ರಿಯಗೊಳಿಸುವುದು ಉತ್ತಮ ಹಾಗೂ ಮತ್ತು ಪ್ರತಿ ತಿಂಗಳು ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿದ್ದರೆ ಸೇಫ್‌ ಆಗಿರಬಹುದು.

ಸಾಧ್ಯವಾದಷ್ಟು ಯೂನಿಕ್ ಪಾಸ್‌ವರ್ಡ್‌ಗಳನ್ನು ಸೆಟ್‌ ಮಾಡಲು ಪ್ರಯತ್ನಿಸಿ ಹಾಗೂ ಇದರೊಂದಿಗೆ ದ್ವಿತೀಯ ಪಾಸ್‌ವರ್ಡ್‌ಗಳು ಅಥವಾ ಪಿನ್ ಕೋಡ್‌ಗಳನ್ನು ಸೇರಿಸಿ. ನಿಮ್ಮ ಗೂಗಲ್ ಖಾತೆಗಾಗಿ 2FA ಅನ್ನು ಬಳಸುವುದು ಮತ್ತು ಅದೇ ಖಾತೆಗೆ ರಿಕವರಿ ಇಮೇಲ್ ಅನ್ನು ಸೇರಿಸುವುದು ಬಹಳ ಮುಖ್ಯ. ಆದ್ದರಿಂದ, ನಿಮ್ಮ ಖಾತೆಯು ಹ್ಯಾಕ್ ಆಗಿದ್ದರೆ, ನಿಮ್ಮ ರಿಕವರಿ ಇಮೇಲ್ ಖಾತೆಯನ್ನು ಬಳಸಿಕೊಂಡು ನೀವು ಅದನ್ನು ತಕ್ಷಣವೇ ಮರುಪಡೆಯಬಹುದು.‌

Chrome ನಿಂದ ಪಾಸ್‌ವರ್ಡ್‌ಗಳನ್ನು ತೆಗೆದುಹಾಕುವುದು ಹೇಗೆ?

ನಿಮ್ಮ ಬ್ರೌಸರ್‌ನಲ್ಲಿ "Google ಪಾಸ್‌ವರ್ಡ್ ನಿರ್ವಾಹಕ" ಎಂದು ಟೈಪ್ ಮಾಡಿ ಮತ್ತು ಅದು ಮೇಲ್ಭಾಗದಲ್ಲಿ Google ನ ಅಧಿಕೃತ ಸೈಟ್ ಅನ್ನು ಪ್ರದರ್ಶಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಕ್ರೋಮ್ ತನ್ನ ಸರ್ವರ್‌ಗಳಲ್ಲಿ ಇರಿಸಿಕೊಳ್ಳಲು ನೀವು ಬಯಸದ ಯಾವುದೇ ಸೈಟ್ ಅಥವಾ ಖಾತೆಯನ್ನು ಆಯ್ಕೆಮಾಡಿ.  ನಂತರ ನಿಮ್ಮ Gmail ಪಾಸ್‌ವರ್ಡ್ ಅನ್ನು ನಮೂದಿಸಲು ನಿಮ್ಮನ್ನು ಗೂಗಲ್ ಕೇಳುತ್ತದೆ, ನಂತರ ನೀವು ಅದನ್ನು ಡಿಲೀಟ್‌ ಮಾಡಿ.

ಇದನ್ನೂ ಓದಿ:

1) Military Clothing System: -50ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯಬಲ್ಲ ಸೇನಾ ಉಡುಪು ಭಾರತದಲ್ಲೇ ಅಭಿವೃದ್ಧಿ!

2) 3D Printed Burgers: ಇಸ್ರೇಲ್‌ನ ಕಸ್ಟಮೈಸಡ್ ಪ್ರಿಂಟೆಡ್‌ ಬರ್ಗರ್‌ 6 ನಿಮಿಷದಲ್ಲಿ ಸವಿಯಲು ಸಿದ್ಧ!

3) Amazon's Best Phone: ಐಫೋನ್ 13 ಅಮೆಜಾನ್ ಗ್ರಾಹಕರ ಆಯ್ಕೆಯ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್!

Follow Us:
Download App:
  • android
  • ios