ಜಿಯೋದ ಹೊಸ ರೂ 555 ಮತ್ತು ರೂ 2,999 ಯೋಜನೆಗಳು ಜಿಯೋನ ಅಸ್ತಿತ್ವದಲ್ಲಿರುವ ಕ್ರಿಕೆಟ್ ಯೋಜನೆಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಜಿಯೋ ಕ್ರಿಕೆಟ್ ಯೋಜನೆಗಳಲ್ಲಿ  ರೂ. 499 ರಿಂದ ರೂ. 3,119 ವರೆಗೆ ಯೋಜನೆಗಳು ಲಭ್ಯವಿವೆ.

IPL 2022: ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್‌ ಹಬ್ಬ ಮಾರ್ಚ್‌ 26ರಿಂದ ಆರಂಭವಾಗಲಿದೆ. 65 ದಿನಗಳ ಕಾಲ ಕ್ರಿಕೆಟ್‌ ರಸದೌತಣ ಅಭಿಮಾನಿಗಳಿಗೆ ಸಿಗಲಿದೆ. ಈ ಬಾರಿ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿದ್ದು ಒಟ್ಟು 10 ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಈ ನಡುವೆ ಐಪಿಎಲ್ ಫ್ಯಾನ್ಸ್‌ಗೆ ಜಿಯೋ ಗುಡ್‌ ನ್ಯೂಸ್ ನೀಡಿದ್ದು ಉಚಿತ ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ತನ್ನ ಕ್ರಿಕೆಟ್ ಯೋಜನೆಗಳ ಪಟ್ಟಿಗೆ ಹೊಸ ಪ್ಲ್ಯಾನ್ಸ್‌ ಸೇರ್ಪಡೆ ಮಾಡಿದೆ. 

ರಿಲಯನ್ಸ್ ಜಿಯೋ ತನ್ನ ಚಂದಾದಾರರಿಗಾಗಿ ಎರಡು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ್ದು ಐಪಿಎಲ್ 2022 ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ನೀಡುತ್ತದೆ. ಕಂಪನಿಯು OTT ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನ ಸಹಭಾಗಿತ್ವದಲ್ಲಿ ರೂ 555 ಮತ್ತು ರೂ 2999 ಬೆಲೆಯ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ.

ಇದನ್ನೂ ಓದಿ:IPL 2022: ಟೂರ್ನಿ ಆರಂಭಕ್ಕೂ ಮುನ್ನ ಈ ಬಾರಿ ತಂಡಗಳ ಬಲಾಬಲ ಹೇಗಿದೆ?

ಜಿಯೋದ ಹೊಸ ರೂ 555 ಮತ್ತು ರೂ 2,999 ಯೋಜನೆಗಳು ಜಿಯೋನ ಅಸ್ತಿತ್ವದಲ್ಲಿರುವ ಕ್ರಿಕೆಟ್ ಯೋಜನೆಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಜಿಯೋ ಕ್ರಿಕೆಟ್ ಯೋಜನೆಗಳಲ್ಲಿ ರೂ. 499 ರಿಂದ ರೂ. 3,119 ಯೋಜನೆಗಳು ಲಭ್ಯವಿವೆ. ಹೊಸ ರೂ 555 ಮತ್ತು ರೂ 2999 ಪ್ಲಾನ್‌ಗಳನ್ನು ಕಳೆದ 28 ದಿನಗಳಿಂದ ನಿರಂತರವಾಗಿ ಯಾವುದೇ ಜಿಯೋ ಸಕ್ರಿಯ ಪ್ಲಾನ್‌ನಲ್ಲಿರುವವರು ಮಾತ್ರ ಪಡೆಯಬಹುದು. ಪ್ರಿಪೇಯ್ಡ್ ಜಿಯೋ ಚಂದಾದಾರರಿಗೆ ಈ ಯೋಜನೆಗಳು ಲಭ್ಯವಿವೆ.

Jio Rs 555 Plan: ರೂ 555 ಜಿಯೋ ಯೋಜನೆಯು ಮೂಲತಃ ಡೇಟಾ-ಆನ್ ಯೋಜನೆಯಾಗಿದೆ, ಅಂದರೆ ಇದು ನಿಮ್ಮ ಪ್ರಸ್ತುತ ಪ್ರಸ್ತುತ ಯೋಜನೆಯ ಮೇಲೆ ಹೆಚ್ಚುವರಿ ಡೇಟಾವನ್ನು ನೀಡುತ್ತದೆ ಮತ್ತು ಇದು ಯಾವುದೇ ಕರೆ ಅಥವಾ ಎಸ್‌ಎಮ್‌ಎಸ್ ಪ್ರಯೋಜನಗಳನ್ನು ಒಳಗೊಂಡಿಲ್ಲ. ಈ ಯೋಜನೆಯು ಮುಖ್ಯವಾಗಿ ಕ್ರಿಕೆಟ್ ವೀಕ್ಷಣೆಗಾಗಿ ನೀಡಲಾಗಿದ್ದು ಇದನ್ನು ಪಡೆಯಲು ನೀವು ಬೇರೆ ಯೋಜನೆಯನ್ನು ಹೊಂದಿರಬೇಕು ಎಂದು ಜಿಯೋ ತಿಳಿಸಿದೆ. 

ಇದನ್ನೂ ಓದಿ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿವೆ ಹಲವು ವಿಶೇಷತೆಗಳು..!

ಹೊಸ ಪ್ಲಾನ್ ಏನನ್ನು ನೀಡುತ್ತದೆ ಎಂಬುದರ ಕುರಿತು ಹೇಳುವುದಾದರೆ, 55 ದಿನಗಳವರೆಗೆ ದಿನಕ್ಕೆ 1GB ಡೇಟಾವನ್ನು ಜತೆಗ ನೀವು ಜಿಯೋ ಅಪ್ಲಿಕೇಶನ್‌ಗಳು ಮತ್ತು ಡಿಸ್ನಿಪ್ಲಸ್ ಹಾಟ್‌ಸ್ಟಾರ್ 12 ತಿಂಗಳವರೆಗೆ ಚಂದಾದಾರಿಕೆ ಪಡೆಯುತ್ತೀರಿ. ನಿಮ್ಮ ದೈನಂದಿನ ಡೇಟಾ ಮಿತಿಯನ್ನು ನೀವು ಖಾಲಿ ಮಾಡಿದ ನಂತರ ನಿಮ್ಮ ಡೌನ್‌ಲೋಡ್ ವೇಗವು 64Kbos ಗೆ ಕಡಿಮೆಯಾಗುತ್ತದೆ. ಆದಾಗ್ಯೂ, ಹಾಟ್‌ಸ್ಟಾರ್ ಚಂದಾದಾರಿಕೆಯು ಮೊಬೈಲ್ ವೀಕ್ಷಣೆಗೆ ಮಾತ್ರ ಲಭ್ಯವಿದ್ದು ಟಿವಿ ಅಥವಾ ಲ್ಯಾಪ್‌ಟಾಪ್‌ಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. 

Jio Rs 2999 Plan: ಜಿಯೋ ರೂ 2999 ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ವಾರ್ಷಿಕ ಯೋಜನೆಯಾಗಿದೆ. ಯೋಜನೆಯು ದಿನಕ್ಕೆ 2.5GB ಡೇಟಾವನ್ನು ಅನಿಯಮಿತ ಧ್ವನಿ ಕರೆ ಪ್ರಯೋಜನಗಳು, ದಿನಕ್ಕೆ 100 SMS ಮತ್ತು ಜೀಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯೊಂದಿಗೆ ನೀಡುತ್ತದೆ. ಈ ಯೋಜನೆಯು ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಇದು ಮೊಬೈಲ್ ಚಂದಾದಾರಿಕೆ ಯೋಜನೆಯಾಗಿದೆ.

ಟಿವಿ ಹಾಗೂ ಲ್ಯಾಪ್‌ಟಾಪ್‌ ಪ್ಲ್ಯಾನ್ಸ್: ನೀವು IPL 2022 ಅನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಬಯಸಿದರೆ, Jio 1499 ರೂ ಮತ್ತು 4199 ರೂ ಯೋಜನೆಗಳನ್ನು ಸಹ ಹೊಂದಿದೆ. ಇವುಗಳು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ದೊಡ್ಡ ಪರದೆಯ ಮೇಲೆ ನೀಡುತ್ತವೆ. ರೂ 1,499 ನಿಮಗೆ ದಿನಕ್ಕೆ 2GB, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಗಳನ್ನು 84 ದಿನಗಳವರೆಗೆ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ಗೆ ಒಂದು ವರ್ಷದ ಪ್ರೀಮಿಯಂ ಚಂದಾದಾರಿಕೆ ನೀಡುತ್ತದೆ. ರೂ 4199 ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು SMS ಪ್ರಯೋಜನಗಳೊಂದಿಗೆ ದಿನಕ್ಕೆ 3GB ನೀಡುತ್ತದೆ. ಈ ಯೋಜನೆಯು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ದೊಡ್ಡ ಪರದೆಗಳಲ್ಲಿ ಒಂದು ವರ್ಷಕ್ಕೆ ನೀಡುತ್ತದೆ.