Agni Prime Test Successful: ಭಾರತದ ಹೊಸ ತಲೆಮಾರಿನ ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
*ಅಗ್ನಿ ಪ್ರೈಮ್ (Agni Prime) ಕ್ಷಿಪಣಿಯ ಎರಡನೇ ಪರೀಕ್ಷೆ
*ಜೂನ್ 28 ರಂದು ಅದೇ ಸ್ಥಳದಲ್ಲಿ ಮೊದಲ ಪರೀಕ್ಷ ಯಶಸ್ವಿ
*ಬಾಲಸೋರ್‌ನ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ Test-Fire
ಒಡಿಶಾ(ಡಿ. 18): ಒಡಿಶಾದ ಬಾಲಾಸೋರ್‌ನ ಕರಾವಳಿಯಲ್ಲಿ ಭಾರತ ಶನಿವಾರ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಅಗ್ನಿ-ಪಿ (Agni P) ಅಗ್ನಿ ವರ್ಗದ ಕ್ಷಿಪಣಿಗಳ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಇದು 1,000 ಮತ್ತು 2,000 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಯಾನಿಸ್ಟರೈಸ್ಡ್ ಕ್ಷಿಪಣಿಯಾಗಿದೆ (Canisterised Missile). ಇದು ಅಗ್ನಿ ಪ್ರೈಮ್ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದೆ. ಬಾಲಸೋರ್‌ನ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಿಗ್ಗೆ 11 ಗಂಟೆಗೆ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಪರಮಾಣು ಸಾಮರ್ಥ್ಯದ ಕಾರ್ಯತಂತ್ರದ ಕ್ಷಿಪಣಿ ಅಗ್ನಿ ಪ್ರೈಮ್‌ಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಎಂದು ಎಎನ್‌ಐ ವರದಿ ತಿಳಿಸಿದೆ.
ರಾಜನಾಥ್ ಸಿಂಗ್ ಅಭಿನಂದನೆ!
"ಕ್ಷಿಪಣಿ ಪರೀಕ್ಷೆಯು ಅದರ ಎಲ್ಲಾ ಮಿಷನ್ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ" ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ. ಮೊದಲ ಪರೀಕ್ಷೆಯನ್ನು ಜೂನ್ 28 ರಂದು ಅದೇ ಸ್ಥಳದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯಶಸ್ವಿ ಹಾರಾಟ ಪರೀಕ್ಷೆಗಾಗಿ ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO) ಯನ್ನು ಅಭಿನಂದಿಸಿದರು ಮತ್ತು ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಯೋಜನೆಯಂತೆ ಸರಿಯಾದ ಪಥದಲ್ಲಿ ಕಾರ್ಯಾಚರಣೆ!
“ಡಿಆರ್‌ಡಿಒ ಬೆಳಿಗ್ಗೆ 11.06 ಕ್ಕೆ ಪರೀಕ್ಷೆ ನಡೆಸಿತು. ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಸ್ಟೇಷನ್‌ಗಳು ಮತ್ತು ಡೌನ್‌ರೇಂಜ್ ಹಡಗುಗಳು ಪೂರ್ವ ಕರಾವಳಿಯುದ್ದಕ್ಕೂ ಕ್ಷಿಪಣಿ ಪಥ ಮತ್ತು ಪ್ಯಾರಾಮೀಟರ್‌ಗಳನ್ನು ಟ್ರ್ಯಾಕ್ ಮಾಡಿದ್ದೂ ಮೇಲ್ವಿಚಾರಣೆ ನಡೆಸಿವೆ. ಕ್ಷಿಪಣಿಯು ಯೋಜನೆಯಂತೆ ಸರಿಯಾದ ಪಥವನ್ನು ಅನುಸರಿಸಿತು, ಉನ್ನತ ಮಟ್ಟದ ನಿಖರತೆಯೊಂದಿಗೆ ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸಿದೆ, ”ಎಂದು DRDO ಹೇಳಿಕೆಯಲ್ಲಿ ತಿಳಿಸಿದೆ.
ದೇಶಾದ್ಯಂತ ಸಾಗಿಸಬಹುದಾದ ಕ್ಷೀಪಣಿ!
ಬ್ಯಾಲಿಸ್ಟಿಕ್ ಕ್ಷಿಪಣಿಯು ಅಗ್ನಿ 3 (Agni 3) ಗಿಂತ 50 ಪ್ರತಿಶತ ಕಡಿಮೆ ತೂಗುತ್ತದೆ ಮತ್ತು ರೈಲು ಮತ್ತು ರಸ್ತೆಯಿಂದ ಉಡಾವಣೆ ಮಾಡಬಹುದು. ಜತೆಗೆ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು ಮತ್ತು ಕಾರ್ಯಾಚರಣೆಯ ಅಗತ್ಯತೆಗಳಿಗೆ ಅನುಗುಣವಾಗಿ ದೇಶಾದ್ಯಂತ ಸಾಗಿಸಬಹುದು. ಡಿಸೆಂಬರ್ 7 ರಂದು, ದೇಶವು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ವಾಯು ಆವೃತ್ತಿಯನ್ನು (Air Version) ಯಶಸ್ವಿಯಾಗಿ ಪರೀಕ್ಷಿಸಿತು, ಇದನ್ನು ರಕ್ಷಣಾ ಸಚಿವಾಲಯವು ಬ್ರಹ್ಮೋಸ್ ಅಭಿವೃದ್ಧಿಯಲ್ಲಿ 'ಪ್ರಮುಖ ಮೈಲಿಗಲ್ಲು' ಎಂದು ಬಣ್ಣಿಸಿದೆ.
ಅಗ್ನಿ ಪ್ರೈಮ್ ಕ್ಷಿಪಣಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ:
•DRDO ಪ್ರಕಾರ, ಇದು ಡ್ಯುಯಲ್ ರಿಡಂಡೆಂಟ್ ನ್ಯಾವಿಗೇಷನ್ ಮತ್ತು ಗೈಡನ್ಸ ವ್ಯವಸ್ಥೆಯನ್ನು ಹೊಂದಿರುವ ಎರಡು-ಹಂತದ ಕ್ಯಾನಿಸ್ಟರೈಸ್ಡ್ (two-stage canisterised) ಸಾಲಿಡ್-ಪ್ರೊಪೆಲ್ಲೆಂಟ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.
•ಅಗ್ನಿ ಪಿ ಡಿಆರ್‌ಡಿಒ ಉಡಾವಣೆ ಮಾಡಲಿರುವ ಅಗ್ನಿ ಕ್ಷಿಪಣಿಯ ಹೊಸ ವರ್ಗದ ಮೊದಲನೆಯ ಕ್ಷಿಪಣಿಯಾಗಿದೆ. ಇದು ಅಗ್ನಿ 3 ಗಿಂತ ಶೇಕಡಾ 50 ರಷ್ಟು ಕಡಿಮೆ ತೂಗುತ್ತದೆ ಮತ್ತು ಹೊಸ ಮಾರ್ಗದರ್ಶನ ಮತ್ತು ಹೊಸ ತಲೆಮಾರನ ಪ್ರೊಪಲ್ಷನ್ ಹೊಂದಿದೆ.
•ಅಗ್ನಿ ಪಿ ಅನ್ನು ಡಬ್ಬಿಯಲ್ಲಿ (Container) ಹಾಕಲಾಗಿರುವುದರಿಂದ, ಇದನ್ನು ರೈಲು ಮತ್ತು ರಸ್ತೆಯಿಂದ ಉಡಾವಣೆ ಮಾಡಬಹುದು. ಇದನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು ಮತ್ತು ಕಾರ್ಯಾಚರಣೆಯ ಅಗತ್ಯತೆಗಳ ಪ್ರಕಾರ ದೇಶಾದ್ಯಂತ ಸಾಗಿಸಬಹುದು.
•ಇದು ಕ್ಷಿಪಣಿಯ ಎರಡನೇ ಹಾರಾಟ ಪರೀಕ್ಷೆಯಾಗಿದೆ ಮತ್ತು ಯೋಜನೆಯಲ್ಲಿ ನಿಗದಿಪಡಿಸಿದಂತೆ ಎಲ್ಲಾ ಸುಧಾರಿತ ತಂತ್ರಜ್ಞಾನಗಳ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ ಎಂದು DRDO ಹೇಳಿದೆ. ಈ ವರ್ಷದ ಜೂನ್‌ನಲ್ಲಿ ಮೊದಲ ಪರೀಕ್ಷೆ ನಡೆದಿತ್ತು.
• ಕ್ಷಿಪಣಿಯು 1000km ನಿಂದ 2000km ವರೆಗಿನ ವ್ಯಾಪ್ತಿಯನ್ನು ಹೊಂದಿದೆ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಶತ್ರು ನೌಕಾಪಡೆಗಳನ್ನು ಗುರಿಯಾಗಿಸಲು ಬಳಸಬಹುದು.
ಇದನ್ನೂ ಓದಿ:
1) Water Discovered in Mars: ಮಂಗಳನ ವ್ಯಾಲೆಸ್ ಮ್ಯಾರಿನೆರಿಸ್ ಕಣಿವೆಯಲ್ಲಿ ಪತ್ತೆಯಾಯಿತು ಜೀವಜಲ!
2) Plants Respond to Pain: ಪ್ರಾಣಿಗಳಷ್ಟೇ ಅಲ್ಲ, ನೋವಾದಾಗ ಸಸ್ಯಗಳೂ ಕಿರುಚುತ್ತವೆ ಗೊತ್ತಾ?
3) IVHM Technology: ವಿಮಾನ ಹಾರಾಟದಲ್ಲಿರುವಾಗಲೇ ದುರಸ್ತಿ ಮಾಡಬಹುದು!