Asianet Suvarna News Asianet Suvarna News

Active Mobile Subscribers: ಡಿಸೆಂಬರ್‌ನಲ್ಲಿ 100 ಕೋಟಿ ಸಕ್ರಿಯ ಮೊಬೈಲ್ ಬಳಕೆದಾರರು: ಏರ್‌ಟೆಲ್‌ಗೆ ಅಗ್ರಸ್ಥಾನ!

ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಈ ಹಿಂದೆ ಚೀನಾದ ನಾಲ್ಕು ವರ್ಷಗಳ ನಂತರ 2016 ರಲ್ಲಿ ಮೊದಲ ಬಾರಿಗೆ ಒಂದು ಶತಕೋಟಿ ಗಡಿಯನ್ನು ದಾಟಿತ್ತು. ಈ ಮಧ್ಯೆ ಡಿಸೆಂಬರ್‌ನಲ್ಲಿ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿಗಾಗಿ 8.54 ಮಿಲಿಯನ್ ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ವರದ ತಿಳಿಸಿದೆ

India Recorded 1 Billion Active Mobile Subscribers in December TRAI Report mnj
Author
Bengaluru, First Published Feb 26, 2022, 10:30 AM IST | Last Updated Feb 26, 2022, 10:30 AM IST

Tech Desk: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮಾಹಿತಿಯ ಪ್ರಕಾರ, ಡಿಸೆಂಬರ್ 2021 ರಲ್ಲಿ ಭಾರತವು ಒಂದು ಬಿಲಿಯನ್ ಸಕ್ರಿಯ ಮೊಬೈಲ್ ಚಂದಾದಾರನ್ನು ದಾಖಲಿಸಿದೆ. ವರದಿಯ ಪ್ರಕಾರ, ಏರ್‌ಟೆಲ್ 98 ಪ್ರತಿಶತದಷ್ಟು ಸಕ್ರಿಯ ವೈರ್‌ಲೆಸ್ ಚಂದಾದಾರರ ಗರಿಷ್ಠ ಅನುಪಾತವನ್ನು ಹೊಂದಿದೆ, ಆದರೆ ಎಂಟಿಎನ್‌ಎಲ್ ಅದೇ ಅವಧಿಯಲ್ಲಿ 18.58 ಪ್ರತಿಶತದಷ್ಟು ಕಡಿಮೆ ಪ್ರಮಾಣವನ್ನು ಹೊಂದಿದೆ. ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಈ ಹಿಂದೆ ಚೀನಾದ ನಾಲ್ಕು ವರ್ಷಗಳ ನಂತರ 2016 ರಲ್ಲಿ ಮೊದಲ ಬಾರಿಗೆ ಒಂದು ಶತಕೋಟಿ ಗಡಿಯನ್ನು ದಾಟಿತ್ತು. ಈ ಮಧ್ಯೆ ಡಿಸೆಂಬರ್‌ನಲ್ಲಿ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿಗಾಗಿ 8.54 ಮಿಲಿಯನ್ ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ವರದ ತಿಳಿಸಿದೆ

ಡಿಸೆಂಬರ್ 2021 ರ ಟೆಲಿಕಾಂ ಚಂದಾದಾರಿಕೆ ಡೇಟಾದ ಟ್ರಾಯ್ ವರದಿಯ ಪ್ರಕಾರ, ಡಿಸೆಂಬರ್‌ನಲ್ಲಿ ಭಾರತದಲ್ಲಿ ಒಟ್ಟು ಮೊಬೈಲ್ ಚಂದಾದಾರಿಕೆಗಳ ಸಂಖ್ಯೆ 1.155 ಬಿಲಿಯನ್ ಆಗಿದ್ದರೆ, ಡಿಸೆಂಬರ್‌ನಲ್ಲಿ ಒಂದು ದಿನದಲ್ಲಿ ಒಟ್ಟು ಸಕ್ರಿಯ ಮೊಬೈಲ್ ಚಂದಾದಾರರ ಸಂಖ್ಯೆ 1,00,06,30,000 ಆಗಿತ್ತು. ಭಾರತದಲ್ಲಿನ ಒಟ್ಟು ಮೊಬೈಲ್ ಚಂದಾದಾರಿಕೆಗಳ ಸಂಖ್ಯೆಯು ಮೊದಲ ಬಾರಿಗೆ 2016 ರಲ್ಲಿ ಒಂದು ಬಿಲಿಯನ್ ಬಳಕೆದಾರರ ಗಡಿಯನ್ನು ಮುಟ್ಟಿತು ಮತ್ತು 2026 ರ ವೇಳೆಗೆ ಒಂದು ಬಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Indian Smartphone Market: 2026ರ ಹೊತ್ತಿಗೆ ಭಾರತದಲ್ಲಿ 100 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು!

ಮೊಬೈಲ್ ನಂಬರ್ ಪೋರ್ಟಬಿಲಿಟಿ ಏರಿಕೆ:  ಡಿಸೆಂಬರ್‌ನಲ್ಲಿ ದೇಶದಲ್ಲಿ ಒಟ್ಟು ವೈರ್‌ಲೆಸ್ ಚಂದಾದಾರರ ಸಂಖ್ಯೆ 1,155 ಮಿಲಿಯನ್ ಆಗಿದ್ದು, ಚಂದಾದಾರಿಕೆಯಲ್ಲಿ 12.88 ಮಿಲಿಯನ್ ಇಳಿಕೆಯಾಗಿದೆ ಎಂದು ವರದಿ ಬಹಿರಂಗಪಡಿಸುತ್ತದೆ. ನಗರ ಪ್ರದೇಶಗಳಲ್ಲಿ 633 ಮಿಲಿಯನ್ ಮೊಬೈಲ್ ಬಳಕೆದಾರರಿದ್ದು, 132.68 ಪ್ರತಿಶತದಷ್ಟು ಟೆಲಿ-ಸಾಂದ್ರತೆ ಇದೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ 521 ಮಿಲಿಯನ್ ಮೊಬೈಲ್ ಚಂದಾದಾರರು ಮತ್ತು 58.28 ಪ್ರತಿಶತದಷ್ಟು ಟೆಲಿ-ಸಾಂದ್ರತೆಯಿದೆ ಎಂದು ವರದಿ ತಿಳಿಸಿದೆ. 

ಡಿಸೆಂಬರ್‌ನಲ್ಲಿ, ಒಟ್ಟು 8.54 ಮಿಲಿಯನ್ ಚಂದಾದಾರರು ಮೊಬೈಲ್ ನಂಬರ್ ಪೋರ್ಟಬಿಲಿಟಿಗಾಗಿ (MNP) ವಿನಂತಿಗಳನ್ನು ಸಲ್ಲಿಸಿದ್ದಾರೆ, 2010 ರಲ್ಲಿ ಎಮ್‌ಎನ್‌ಪಿಯನ್ನು ದೇಶದಲ್ಲಿ ಜಾರಿಗೆ ತಂದಾಗಿನಿಂದ ದೇಶದಲ್ಲಿ ಒಟ್ಟು ಪೋರ್ಟಿಂಗ್ ವಿನಂತಿಗಳನ್ನು 661.42 ಮಿಲಿಯನ್‌ಗೆ ತಲುಪಿದೆ. 

ಇದನ್ನೂ ಓದಿ: Cyber Crime: ಸೈಬರ್‌ ದಾಳಿ ಸರ್ಕಾರದ ಗಮನಕ್ಕೆ ತನ್ನಿ: ರಾಜೀವ್‌ ಚಂದ್ರಶೇಖರ್‌

ಟ್ರಾಯ್ ವರದಿಯ ಪ್ರಕಾರ, ರಿಲಯನ್ಸ್ ಜಿಯೋ 36 ಪ್ರತಿಶತದಷ್ಟು ಚಂದಾದಾರರ ಪಾಲನ್ನು ಹೊಂದಿದ್ದು, ಏರ್‌ಟೆಲ್ 30.81 ಪ್ರತಿಶತದೊಂದಿಗೆ ಎರಡನೇ ಸ್ಥಾನದಲ್ಲಿದೆ. ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಕ್ರಮವಾಗಿ 23 ಪ್ರತಿಶತ ಮತ್ತು 9.90 ರಷ್ಟು ಮಾರುಕಟ್ಟೆ ಪಾಲನ್ನು ಪಡೆದಿವೆ. 

100 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು: ಇನ್ನು 2026ರ ಹೊತ್ತಿಗೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನೂರು ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಣಲಿದೆ ಎಂದು Deloitteನ 2022ರ ಗ್ಲೋಬಲ್ ಟಿಎಂಟಿ (ಟೆಕ್ನಾಲಜಿ, ಮೀಡಿಯಾ ಮತ್ತು ಎಂಟರ್‌ಟೈನ್ಮೆಂಟ್, ಟೆಲಿಕಾಂ) ಈ  ಬಗ್ಗೆ ಭವಿಷ್ಯ ನುಡಿದಿದೆ. 

ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರ ಹೆಚ್ಚಳಕ್ಕೆ ಭಾರತದ ಗ್ರಾಮೀಣ ಬಳಕೆದಾರರು ಕಾರಣವಾಗಲಿದ್ದಾರೆ. ಅಂದರೆ, 2021ರಿಂದ 2026ರ ಅವಧಿಯಲ್ಲಿ ಗ್ರಾಮೀಣ ವಲಯದಲ್ಲಿನ ಬಳಕೆ ಹೆಚ್ಚಳ ಮತ್ತು ಸಂಯುಕ್ತ ವಾರ್ಷಿಕ ಬೆಳವಣಿಗೆ (CAGR) ದರವು ಶೇ.6 ಇರಲಿದೆ. ಇದೇ ವೇಳೆ ನಗರ ಬಳಕೆದಾರರ ಸಿಎಎಜಿಆರ್ ಪ್ರಮಾಣವು ಶೇ.2.5ರಷ್ಟಿರಲಿದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಅತಿ ಹೆಚ್ಚಿನ ಇಂಟರ್ನೆಟ್ ಅಳವಡಿಕೆಯು ಸ್ಮಾರ್ಟ್‌ಫೋನ್ ಬೇಡಿಕೆ ಹೆಚ್ಚಾಗಲು ಕಾರಣವಾಗಲಿದೆ.

ಇದರ ಪರಿಣಾಮ ಫಿನ್‌ಟೆಕ್ (Fintech), ಇ ಹೆಲ್ತ್ (e-Health), ಇ ಲರ್ನಿಂಗ್ (e-learning) ಬೇಡಿಕೆಯೂ ಹೆಚ್ಚಾಗಲಿದ್ದು, ಅದರಿಂದಲೂ ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಳಕ್ಕೆ ಕಾರಣವಾಗಲಿದೆ. ಸರ್ಕಾರ ಕೂಡ ಭಾರತ್ ನೆಟ್ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಗಳನ್ನು ಫೈಬರೈಜ್ ಮಾಡಲು ಮುಂದಾಗುತ್ತಿದೆ ಈ ಎಲ್ಲದರ ಪರಿಣಾಮ ಸ್ಮಾರ್ಟ್‌ಫೋನ್ ಬಳಕೆದಾರರ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. 

Latest Videos
Follow Us:
Download App:
  • android
  • ios