ನವದೆಹಲಿ (ಡಿ.23): ಮೊಬೈಲ್ ಇಂಟರ್ನೆಟ್ ಬಳಕೆಯಲ್ಲಿ ವಿಶ್ವದಲ್ಲೇ ಭಾರತ ನಂ.1 ಸ್ಥಾನವನ್ನುಪಡೆದುಕೊಂಡಿದೆ. ಒಟ್ಟು 150 ಕೋಟಿ ಗಿಗಾಬೈಟ್ ಮೊಬೈಲ್ ಡೇಟಾವನ್ನು ಒಂದು ತಿಂಗಳಿಗೆ ಭಾರತೀಯರು ಖರ್ಚು ಮಾಡುತ್ತಾರೆ. ಇದರಿಂದ ವಿಶ್ವದಲ್ಲೇ  ಹೆಚ್ಚು ಮೊಬೈಲ್ ಡೇಟಾ ಬಳಸುವ ದೇಶ ಎನಿಸಿಕೊಂಡಿದೆ.

ಈ ಬಗ್ಗೆ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮಾಹಿತಿ ನೀಡಿದ್ದಾರೆ. ಇದೊಂದು ಅಚ್ಚರಿಯ ವಿಚಾರವೇ ಆಗಿದೆ. ಚೀನಾ ಹಾಗೂ ಅಮೆರಿಕವನ್ನು ಒಟ್ಟಿಗೆ ಸೇರಿಸಿದಾಗ ಆಗುವ ಅಂಕಿ ಅಂಶಕ್ಕಿಂತಲೂ ನಮ್ಮ ದೇಶದ ಬಳಕೆ ಪ್ರಮಾಣ ಹೆಚ್ಚಿದೆ ಎಂದು ಹೇಳಿದ್ದಾರೆ.