ರಿಯಲ್ ಮಿ: ಎಲ್ಲರಿಗೊಪ್ಪುವ ಬೆಲೆ, ಎಲ್ಲಕ್ಕಿಂತ ಹೆಚ್ಚು ಸೌಲಭ್ಯ

how is new oppo realme smartphone a review
Highlights

ರಿಯಲ್‌ಮಿ ಡೈಮಂಡ್ ಕಟ್ ಎಂದೇ ಅದರ ಹೆಸರು. ಫೋನಿನ ಹಿಂಬದಿಯ ಕವರ್‌ನಲ್ಲಿ ಡೈಮಂಡ್ ಆಕಾರದ ವಿನ್ಯಾಸವಿದೆ. ಅದು ಬೆಳಕಿಗೆ ಹಲವು ವಿನ್ಯಾಸಗಳಲ್ಲಿ ಹೊಳೆಯುತ್ತದೆ ಅನ್ನುವುದು ಕೂಡ ಈ ಫೋನಿನ ವಿಶಿಷ್ಟತೆಗಳಲ್ಲಿ ಒಂದು. 
 

ಅಪ್ಪೋ ರಿಯಲ್‌ಮಿ ಫೋನ್ ಮಾರುಕಟ್ಟೆಗೆ ಬರುತ್ತಿದ್ದಂತೆ, ಫೋನ್‌ ಪಂಡಿತರು ಎಲ್ಲ ಅರ್ಥವಾದವರಂತೆ ಒಳಗೊಳಗೇ ನಸುನಕ್ಕು, ಈ ಫೋನ್ ಬಂದಿದ್ದೇ ರೆಡ್‌ಮಿ ನೋಟ್ 5 ಪ್ರೋ ಎಡಿಷನ್ನನ್ನು ಮಟ್ಟ ಹಾಕುವುದಕ್ಕೆ ಅಂತ ಮಾತಾಡಿಕೊಂಡರು. ಹಾಗಲ್ಲದೇ ಹೋದರೆ ಒಂಬತ್ತು ಸಾವಿರಕ್ಕೆ ಅಷ್ಟೊಂದು ಒಳ್ಳೆಯ ಫೋನ್ ಕೊಡೋದಕ್ಕೆ ಸಾಧ್ಯವಾ ಅನ್ನುವುದಕ್ಕಿಂತ ಹೆಚ್ಚಾಗಿ, ಅಷ್ಟೆಲ್ಲ ಫೀಚರ್‌ಗಳಿರುವ ಫೋನನ್ನು ಅಷ್ಟೊಂದು ಕಡಿಮೆ ಬೆಲೆಗೆ ಯಾಕಾದರು ಮಾರುತ್ತಾರೆ ಅನ್ನುವುದೇ ತರ್ಕಬದ್ಧ ಪ್ರಶ್ನೆಯಾಗಿತ್ತು. ಫುಲ್‌ಸ್ಕ್ರೀನ್ 18:9 ಡಿಸ್‌ಪ್ಲೇ ಇರುವ 6GB RAM, 128 GB ಸ್ಪೇಸ್ ಇರುವ, ಫೈಬರ್‌ಗ್ಲಾಸ್ ಬಾಡಿ ಇರುವ ಫೋನ್ ಆ ಬೆಲೆಗೆ ಸಿಗುತ್ತದೆ ಎಂದರೆ ಅದು ಕಾಲೇಜು ಹುಡುಗರನ್ನು ಸೆಳೆಯಲಿಕ್ಕೇ ಅನ್ನುವುದು ಮಿಕ್ಕ ಫೋನು ಕಂಪೆನಿಗಳ ಲೆಕ್ಕಾಚಾರ ಆಗಿತ್ತು. 

ಈಗ ಬರುತ್ತಿರುವ ಹೊಸ ಮಾಡೆಲ್‌ಗಳ ಮುಖ್ಯ ಉದ್ದೇಶವೇ ತರುಣ ತರುಣಿಯರನ್ನು ಸೆಳೆಯುವುದು. ಮೂವತ್ತು ದಾಟಿರುವ ನಲವತ್ತು ಮೀರಿರುವ ಮಂದಿಗೆ ಫೋನ್ ಅಂದರೆ ಬರೀ ಫೋನ್ ಅಷ್ಟೇ. ಆದರೆ ತರುಣರ ಪಾಲಿಗೆ ಫೋನ್ ಎಲ್ಲವೂ ಆಗಿಬಿಟ್ಟಿದೆ. ಅದೇ ಅವರ ಮನೆಯೆಂಬಂತೆ ಅವರು ಫೋನ್‌ಗಳಲ್ಲೇ ವಾಸಿಸುತ್ತಾರೆ. ಸೆಲ್ಫಿ ಅನ್ನೋದು ಕ್ರೇಜ್ ಆಗಿಬಿಟ್ಟಿದೆ. ಒಳ್ಳೆಯ ಫೋಟೋ, ತೆಗೆದ ಲಕ್ಷಾಂತರ ಪೋಟೋಗಳನ್ನು ಇಟ್ಟುಕೊಳ್ಳಲಿಕ್ಕೆ ಜಾಗ- ಅಷ್ಟಿದ್ದರೆ ಅದೇ ಬೆಸ್ಟ್ ಫೋನು.

ರಿಯಲ್‌ಮಿ ಡೈಮಂಡ್ ಕಟ್ ಎಂದೇ ಅದರ ಹೆಸರು. ಫೋನಿನ ಹಿಂಬದಿಯ ಕವರ್‌ನಲ್ಲಿ ಡೈಮಂಡ್ ಆಕಾರದ ವಿನ್ಯಾಸವಿದೆ. ಅದು ಬೆಳಕಿಗೆ ಹಲವು ವಿನ್ಯಾಸಗಳಲ್ಲಿ ಹೊಳೆಯುತ್ತದೆ ಅನ್ನುವುದು ಕೂಡ ಈ ಫೋನಿನ ವಿಶಿಷ್ಟತೆಗಳಲ್ಲಿ ಒಂದು. ಫೈಬರ್‌ಗ್ಲಾಸ್ ಮೈಯ ಒಂದೇ ಒಂದು ಸಮಸ್ಯೆಯೆಂದರೆ ಮುಟ್ಟಿದರೆ ಸಾಕು ಅದರ ಮೇಲೆ ಕೈಯ ಅಚ್ಚು ಉಳಿಯುತ್ತದೆ. ಹೀಗಾಗಿ ಅದನ್ನು ಆಗಾಗ ಒರೆಸುತ್ತಲೇ ಇರಬೇಕಾಗುತ್ತದೆ.

ಫುಲ್ ಸ್ಕ್ರೀನ್ ಡಿಸ್‌ಪ್ಲೇ ಥರ ಕಾಣಿಸುವ ಸ್ಕ್ರೀನ್ ಹೊಂದಿರುವ ಫೋನ್ ಇದು. ಸ್ಕ್ರೀನ್ ಟು ಬಾಡಿ ಅನುಪಾತ 84.75 ಆಗಿದ್ದರಿಂದ ಮೇಲಿನ ಮತ್ತು ಕೆಳಗಿನ ಪಟ್ಟಿ ಬಿಟ್ಟರೆ ಮಿಕ್ಕೆಲ್ಲ ಜಾಗವೂ ಸ್ಕ್ರೀನಿಗೇ ಮೀಸಲು. ಥಟ್ಟನೆ ನೋಡಿದರೆ ಅತ್ಯಾಧುನಿಕ ಫೋನಿನ ಹಾಗೆ ಕಾಣಿಸುತ್ತದೆ ಕೂಡ. ಒಂದೆರಡು ಸಾರಿ ಕೆಳಗೆ ಬಿದ್ದರೆ ಫೋನಿಗೆ ಪೆಟ್ಟಾಗುವುದಿಲ್ಲ ಅನ್ನೋದು ಕೂಡ ಅಳ್ಳಕ ಕೈಯ ಅಬಲೆಯರಿಗೆ ಒಳ್ಳೆಯ ಸುದ್ದಿಯೇ.

ರಿಯಲ್‌ಮಿ ಫೋನಿನಲ್ಲಿ ಏನೆಲ್ಲ ಅನುಕೂಲಗಳಿಗೆ ಎಂದು ನೋಡಿದರೆ ಅಚ್ಚರಿ ಕಾದಿದೆ. ಸ್ಯಾಮ್ಸಂಗ್ ಕಂಪೆನಿಯ ಹೈ ಎಂಡ್ ಫೋನ್ ಬಳಸುತ್ತಿದ್ದವರೊಬ್ಬರು, ಈ ಬೆಲೆಗೆ ಇಷ್ಟು ಸೌಲಭ್ಯಗಳನ್ನು ಹೇಗೆ ಕೊಡಲಿಕ್ಕೆ ಸಾಧ್ಯ? ಇದರ ಸ್ಪೀಡ್ ಚೆನ್ನಾಗಿದೆ, ಸ್ಟೈಲ್ ಸೊಗಸಾಗಿದೆ, ನನ್ನ ಅರುವತ್ತು ಸಾವಿರದ ಫೋನಿನಲ್ಲಿ ಇಲ್ಲದಂಥ ರಿಯಲ್ ಮಿ ಎಲ್ಲರಿಗೊಪ್ಪುವ ಬೆಲೆ, ಎಲ್ಲಕ್ಕಿಂತ ಹೆಚ್ಚು ಸೌಲಭ್ಯ ಎಷ್ಟೋ ಅನುಕೂಲಗಳು ಇದರಲ್ಲಿವೆ. ಅದಕ್ಕಿಂತ ಇದು ಸ್ಪೀಡ್ ಹೆಚ್ಚಿದೆ ಅನ್ನುತ್ತಾರೆ.

ಹೇಳಿಕೇಳಿ ಇದು ಫೀಚರ್ ವರ್ಸಸ್ ಬ್ರಾಂಡ್‌ಗಳ ನಡುವೆ ಯುದ್ಧ ಶುರುವಾಗಿರುವ ಕಾಲ. ದೊಡ್ಡ ಕಂಪೆನಿಗಳು ಬ್ರಾಂಡ್ ಮಾರಾಟದಲ್ಲಿ ತೊಡಗಿದ್ದರೆ, ಸಣ್ಣ ಮತ್ತು ಹೊಸದಾಗಿ ಬಂದಿರುವ ಕಂಪೆನಿಗಳು ತಮಗಿಲ್ಲದ ಬ್ರಾಂಡ್ ಬಲವನ್ನು ಹೆಚ್ಚು ಸೌಲಭ್ಯಗಳನ್ನು ಕೊಡುವ ಮೂಲಕ ತುಂಬಲು ನೋಡುತ್ತಿವೆ. ಅವರಿಗೆ ಕಾಲದ ಲಾಭವೂ ಇದೆ. ಐ ಫೋನ್ ಒಂದು ಫೋನ್ ಬಿಟ್ಟು ಮತ್ತೊಂದು ಬಿಡಲು ವರ್ಷ ತೆಗೆದುಕೊಂಡರೆ, ಸಣ್ಣ ಕಂಪೆನಿಗಳು ವರ್ಷಕ್ಕೆ ಮೂರು ಹೊಸ ಹೊಸ ಮಾಡೆಲ್‌ಗಳನ್ನು ಇಂಟ್ರಡ್ಯೂಸ್ ಮಾಡುತ್ತವೆ. ಐ ಫೋನಿನಲ್ಲಿಲ್ಲದ ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಇಲ್ಲಿದೆ. ಫಿಂಗರ್‌ಪ್ರಿಂಟ್ ಮಾಯವಾಗಿದೆ. ಅಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ೬೦ ಪ್ರಾಸೆಸರ್ ಹೊಂದಿದೆ. ಎಂಟ್ರಿ ಲೆವಲ್ ಫೋನ್ ಮಟ್ಟಿಗಂತೂ ಇದು ಬೆಸ್ಟ್ ಬೈ.

ರಿಯಲ್‌ಮಿ ಮೂರು ಮಾದರಿಗಳು ಲಭ್ಯ
1 3GB RAM 32GB ಸ್ಟೋರೇಜ್ - ₹8990
2 4GB RAM 64GB ಸ್ಟೋರೇಜ್ - ₹10990
3 6GB RAM 128GB ಸ್ಟೋರೇಜ್ - ₹13990

3410 ಎಮ್‌ಎಎಚ್ ಬ್ಯಾಟರಿ, ಕಲರ್ ಓಸ್ 5.0, ಆಂಡಾಯ್ಡ್ 8.1 ಓರಿಯೋ ಜೊತೆಗೆ ವೋಲ್ಟೆ, ವೈಫೈ, ಬ್ಲೂಟೂಥ್, ಎಫ್ಪೆಮ್- ಹೀಗೆ ಎಲ್ಲವೂ ಇಲ್ಲುಂಟು. ಆದರೆ 4G ಸ್ಪೀಡ್ ಒಮ್ಮೆಗೆ ಒಂದೇ ಸಿಮ್‌ಗೆ ಮಾತ್ರ ಮೀಸಲು. ಒಂದು 4G ಬಳಕೆಯಲ್ಲಿದ್ದಾಗ ಮತ್ತೊಂದು 3Gಯಲ್ಲಿರುತ್ತದೆ. 

ದಕ್ಷತೆಯ ಮಟ್ಟಿಗೆ ಇದರ ಬಗ್ಗೆ ಮೆಚ್ಚುಗೆಯ ಮಾತಾಡುವುದಕ್ಕೆ ಅಡ್ಡಿಯಿಲ್ಲ. ತುಂಬ ಹೊತ್ತು ಬಳಸಿದರೂ ಇದು ಬಿಸಿಯಾಗುವುದಿಲ್ಲ. ಗೇಮ್ಸ್ ಆಡುವುದಕ್ಕೂ  ಇದು ಹೇಳಿ ಮಾಡಿಸಿದಂತಿದೆ. ಇಲ್ಲಿ ಕ್ವಿಕ್ ಚಾರ್ಜಿಂಗ್ ಲಭ್ಯವಿಲ್ಲ. ಒಮ್ಮೆ ಖಾಲಿಯಾದರೆ ಮತ್ತೆ ತುಂಬಿಕೊಳ್ಳುವುದಕ್ಕೆ ಏನಿಲ್ಲವೆಂದರೂ ಮೂರು ಗಂಟೆ ಬೇಕು. 13ಎಂಪಿ ರೇರ್, 8 ಎಂಪಿ ಫ್ರಂಟ್ ಕೆಮರಾ ಇದೆ. ಈ ಕೆಮರಾ 296 ಫೇಸಿಯಲ್ ಪಾಯಿಂಟುಗಳನ್ನು ಗುರುತಿಸುತ್ತದೆ ಎಂಬುದು ಕಂಪೆನಿಯ ಹೆಗ್ಗಳಿಕೆ. ಸೆಲ್ಫೀ ಮೋಡ್ ಜೊತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇದೆ. ಹೀಗಾಗಿ ಫೋಟೋ ತೆಗೆಯುತ್ತಿರುವವರು ಹೆಣ್ಣೋ ಗಂಡೋ, ಬಿಳಿಯೋ ಕರಿಯೋ, ಲೈಟಿಂಗ್ ಹೇಗಿದೆ ಅನ್ನುವುದನ್ನೆಲ್ಲ ಅದೇ ಲೆಕ್ಕ ಹಾಕುತ್ತದೆ.
ಈ ಬೆಲೆಗೆ ಇಷ್ಟೊಂದು ತಾಂತ್ರಿಕ ಉನ್ನತಿ ಇರುವ ಫೋನ್ ಮತ್ತೊಂದು ಸಿಗಲಾರದು. 

ಇದನ್ನೂ ಓದಿ

ಭರ್ಜರಿ ಮಾನ್ಸೂನ್ ಹಂಗಾಮಾ ಪ್ರಕಟಿಸಿದ ಜಿಯೋ!

loader