ನಾಸಾ ಪ್ರಧಾನ ಕಚೇರಿಯಲ್ಲಿ ಹಾಲಿವುಡ್ ನಟ ಬ್ರ್ಯಾಡ್ ಪಿಟ್| ಗಗನಯಾತ್ರಿ ನಿಕ್ ಹಗ್ಯೂ ಅವರೊಂದಿಗೆ ಬ್ರ್ಯಾಡ್ ಪಿಟ್ ವಿಡಿಯೋ ಸಂವಾದ| ವಿಕ್ರಮ್ ಲ್ಯಾಂಡರ್ ಕುರಿತು ಮಾಹಿತಿ ಪಡೆದ ಹಾಲಿವುಡ್ ನಟ| ಚಂದ್ರನ ಅಂಗಳದಲ್ಲಿರುವ ವಿಕ್ರಮ್ ಲ್ಯಾಂಡರ್ ಕಾಣಿಸುತ್ತಿದೆಯೇ ಎಂದು ಕೇಳಿದ ನಟ|

ವಾಷಿಂಗ್ಟನ್(ಸೆ.18): ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್ ನಟ ಬ್ರ್ಯಾಡ್ ಪಿಟ್ ಇತ್ತೀಚಿಗೆ, ನಾಸಾ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಷಿಂಗ್ಟನ್‌ನಲ್ಲಿರುವ ನಾಸಾದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಬ್ರ್ಯಾಡ್ ಪಿಟ್, ನಾಸಾದ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಪಡೆದರು.

ಈ ವೇಳೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ನಿಕ್ ಹಗ್ಯೂ ಅವರೊಂದಿಗೆ ಬ್ರ್ಯಾಡ್ ಪಿಟ್ ವಿಡಿಯೋ ಸಂವಾದ ನಡೆಸಿದರು. ಭಾರತದ ಇಸ್ರೋ ಚಂದ್ರಯಾನ-2 ಯೋಜನೆಯ ಹಿನ್ನಡೆಯ ಕುರಿತು ಮಾಹಿತಿ ಪಡೆದರು. ವಿಕ್ರಮ್ ಲ್ಯಾಂಡರ್ ಕುರಿತು ಏನಾದರೂ ಮಾಹಿತಿ ಲಭ್ಯವಿದೆಯಾ ಎಂದು ನಿಕ್ ಅವರನ್ನು ಕೇಳಿದರು.

Scroll to load tweet…

ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇರುವುದನ್ನು ನೀವು ನೋಡಬಲ್ಲಿರಾ ಎಂದು ಬ್ರ್ಯಾಡ್ ಪಿಟ್ ಗಗನಯಾತ್ರಿ ನಿಕ್ ಅವರನ್ನು ಕೇಳಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಚಂದ್ರನ ಅಂಗಳ ಕಾಣುವುದಿಲ್ಲ ಎಂದು ನಿಕ್ ಪ್ರತ್ಯುತ್ತರ ನೀಡಿದರು.

ತಮ್ಮ ಮುಂದಿನ ಚಿತ್ರದ ಪ್ರಚಾರಕ್ಕಾಗಿ ನಾಸಾ ಕೇಂದ್ರಕ್ಕೆ ಭೇಟಿ ನೀಡಿದ್ದ ಬ್ರ್ಯಾಡ್ ಪಿಟ್, ಬಾಹ್ಯಾಕಾಶ ನಿಲ್ದಾಣದಲ್ಲಿನ ಜೀವನ ಕ್ರಮದ ಕುರಿತು ಮಾಹಿತಿ ಪಡೆದರು.