ಬಣ್ಣಗಳಲ್ಲಿ ನಿಚ್ಚಳತೆ, ಅತ್ಯಧಿಕ ರೆಸಲ್ಯೂಶನ್ ಮತ್ತು ತಲ್ಲೀನಗೊಳಿಸುವ ವಿಶ್ಯುವಲ ಎಫೆಕ್ಟ್- ಹೈಯರ್ ಹೊಸ ಎಲ್ಇಡಿ ಟಿವಿಯ ಪ್ಲಸ್ ಪಾಯಿಂಟ್

ಸ್ಲಿಮ್ ಹಾಗೂ ಪ್ಲಾಟ್ ಡಿಸೈನ್‌ ಎರಡು ಕ್ವಾಂಟಂ ಡಾಟ್ 4ಕೆ ಎಲ್ಇಡಿ ಟಿವಿಯನ್ನು ಹೈಯರ್ ಇಂಡಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದರಲ್ಲಿ ಎರಡು ಸರಣಿ ವಿನ್ಯಾಸದ ಟಿವಿಗಳಿವೆ. ಕ್ವಾಂಟಂ ಡಾಟ್ 4ಕೆ ಸ್ಲಿಮ್ ಎಲ್ಇಡಿ ಟೀವಿ ಸರಣಿಯಲ್ಲಿ 65 ಹಾಗೂ 55 ಇಂಚಿನ ಎಕ್ಸ್7000QUAG ಟಿವಿಗಳು ಬರುತ್ತವೆ. 

ಕ್ವಾಂಟಂ ಡಾಟ್ 4ಕೆ ಕರ್ವ್ಡ್ ಎಲ್ಇಡಿ ಟೀವಿ ಸೀರೀಸ್ ನಲ್ಲಿ Q9800QUAG 65 ಇಂಚು ಹಾಗೂ 55 ಇಂಚಿನ ಟಿವಿಗಳಿವೆ. 

ಕ್ವಾಂಟಂ ಡಾಟ್ ನ ವಿಶೇಷತೆಯೆಂದರೆ ಬಣ್ಣಗಳಲ್ಲಿರುವ ನಿಚ್ಚಳತೆ. ಇದರಿಂದಾಗಿ ಟಿವಿಯಲ್ಲಿನ ದೃಶ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತವೆ. 

ಅತ್ಯಧಿಕ ರೆಸಲ್ಯೂಶನ್ ಅಂದರೆ 3840X2160 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವುದು ಇನ್ನೊಂದು ಪ್ಲಸ್ ಪಾಯಿಂಟ್. 

ಗುಣಮಟ್ಟ ಹಾಗೂ ತಲ್ಲೀನಗೊಳಿಸುವ ವಿಶ್ಯುವಲ ಎಫೆಕ್ಟ್ ಇರುವುದು ಈ ಟಿವಿಗಳ ಹೆಚ್ಚುಗಾರಿಕೆ.