. ಚಂಡೀಗಢದ ಸೆಕ್ಟರ್ 33-ಬಿ ಪ್ರದೇಶದಲ್ಲಿ ಇರುವ ಮಾಡೆಲ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ 12ನೇ ತರಗತಿ ಓದುತ್ತಿರುವ ಹರ್ಷಿತ್ ಶರ್ಮಾಗೆ ಈ ಭಾಗ್ಯ ಲಭಿಸಿದೆ. ಗ್ರಾಫಿಕ್ ವಿಭಾಗದಲ್ಲಿ ಹರ್ಷಿತ್‌ಗೆ ನೌಕರಿ ದೊರಕಿದೆ. ಈತ 12ನೇ ಕ್ಲಾಸ್‌ನಲ್ಲಿ ಮಾಹಿತಿ ತಂತ್ರಜ್ಞಾನವನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಯಾಗಿದ್ದಾನೆ.

ನವದೆಹಲಿ(ಆ.01): ಈತ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಆದರೆ ಈತ ಕೆಲಸ ಮಾಡುವುದು ಹೆಸರಾಂತ ಗೂಗಲ್ ಕಂಪನಿಯಲ್ಲಿ. ಈತನ ಸಂಬಳ ವಾರ್ಷಿಕ 1.44 ಕೋಟಿ ರುಪಾಯಿ!

ಹೌದು.. ಅಚ್ಚರಿ ಎನ್ನಿಸಿಸದರೂ ಸತ್ಯ. ಚಂಡೀಗಢದ ಸೆಕ್ಟರ್ 33-ಬಿ ಪ್ರದೇಶದಲ್ಲಿ ಇರುವ ಮಾಡೆಲ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ 12ನೇ ತರಗತಿ ಓದುತ್ತಿರುವ ಹರ್ಷಿತ್ ಶರ್ಮಾಗೆ ಈ ಭಾಗ್ಯ ಲಭಿಸಿದೆ. ಗ್ರಾಫಿಕ್ ವಿಭಾಗದಲ್ಲಿ ಹರ್ಷಿತ್‌ಗೆ ನೌಕರಿ ದೊರಕಿದೆ. ಈತ 12ನೇ ಕ್ಲಾಸ್‌ನಲ್ಲಿ ಮಾಹಿತಿ ತಂತ್ರಜ್ಞಾನವನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಯಾಗಿದ್ದಾನೆ.

ಈಗ 1 ವರ್ಷದ ಮಟ್ಟಿಗೆ ತರಬೇತಿ ಉದ್ಯೋಗಿಯಾಗಿ ಈತ ನೇಮಕಗೊಂಡಿದ್ದು, ಮಾಸಿಕ 4 ಲಕ್ಷ ರು. ಪಡೆಯಲಿದ್ದಾನೆ. 1 ವರ್ಷದ ನಂತರ ಮಾಸಿಕ 12 ಲಕ್ಷ ರು. ವೇತನ ಲಭ್ಯವಾಗಲಿದೆ.

ಸಣ್ಣವಯಸ್ಸಿಗೇಉದ್ಯೋಗಹೇಗೆ?:

10ನೇ ವಯಸ್ಸಿಗೇ ನನಗೆ ಡಿಸೈನಿಂಗ್‌ನಲ್ಲಿ ಆಸಕ್ತಿ ಬೆಳೆಯಿತು. ಆಗಿನಿಂದಲೇ ಗೂಗಲ್‌ನಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ಉಂಟಾಯಿತು. ಗೌಪ್ಯವಾಗಿ ನಾನು ನನ್ನ ಚಿಕ್ಕಪ್ಪನ ಬಳಿಯಿಂದ ತರಬೇತಿ ಪಡೆದೆ. ಈಗ ಗೂಗಲ್ ಕಂಪನಿ ನನ್ನ ಸಾಧನೆಯನ್ನು ಗಮನಿಸಿ ನೌಕರಿ ನೀಡಿದೆ. ನನಗೆ ಗ್ರಾಫಿಕ್ ಡಿಸೈನರ್ ಹುದ್ದೆ ನೀಡಿರುವುದು ಎಲ್ಲಿಲ್ಲದ ಸಂತೋಷ ತರಿಸಿದೆ ಎಂದು ಹರ್ಷಿತ್ ಹರ್ಷಿಸುತ್ತಾನೆ.