ರೈಲು ಆಗಮನ, ನಿರ್ಗಮನ ಮತ್ತು ಸೀಟು ಕಾಯ್ದಿರಿಸುವಿಕೆ ಸೇವೆಯನ್ನು ಒದಗಿಸುತ್ತಿದ್ದ ಪ್ರಮುಖ Appನ್ನು ಸಾಫ್ಟ್ ವೇರ್ ದೈತ್ಯ ಗೂಗಲ್ ತನ್ನ ತೆಕ್ಕೆ ಗೆ ಹಾಕಿಕೊಂಡಿದೆ. Where Is My Train ಎಂಬ, ರೈಲಿನ ಲೊಕೇಶನ್ ತಿಳಿಸುವ ಜನಪ್ರಿಯ Appನ್ನು ಗೂಗಲ್ ತನ್ನ ಜೋಳಿಗೆಗೆ ಇಳಿಸಿದೆ.

ಸುಮಾರು 10 ಮಿಲಿಯನ್ ಡೌನ್ ಲೋಡ್ ಆಗಿರುವ ಈ Appನಲ್ಲಿ ರೈಲು ಪ್ರಯಾಣಿಕರು, ಬಳಕೆದಾರರು ರೈಲಿನ ಆಗಮನ ಮತ್ತು ನಿರ್ಗಮನದ ಮುಂತಾದ ವಿಒವರಗಳ ಜೊತೆಗೆ ಟಿಕೆಟ್ ಕಾಯ್ದಿರಿಸಬಹುದು. 

ಇದನ್ನೂ ಓದಿ: ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?

ಪ್ರತಿನಿತ್ಯ ಸುಮಾರು 14,000 ರೈಲುಗಳು ಓಡುವ ದೇಶದಲ್ಲಿ ಇಂತಹ App ನಿರ್ವಹಿಸುವುದು ಸುಲಭಕಾರ್ಯವಲ್ಲ.  ಈ Where Is My Train App ನಿಧಾನಗತಿ ಇಂಟರ್ನೆಟ್ ಇರುವಲ್ಲೂ ಕಾರ್ಯನಿರ್ವಹಿಸುತ್ತದೆ ಮತ್ತು ದೇಶದ 8 ಭಾಷೆಗಳಲ್ಲಿ ಸೇವೆಯನ್ನು ಒದಗಿಸುತ್ತದೆ. 

ಈ ಡೀಲ್ ಬಗ್ಗೆ ಗೂಗಲ್ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಇಕಾನಮಿಕ್ಸ್ ಟೈಮ್ಸ್ ಪ್ರಕಾರ ಡಾಲರ್ $30-40 ಮಿಲಿಯನ್ ಡೀಲ್ ಇದು! ಸಿಗ್ಮಂಡ್ ಲ್ಯಾಬ್ಸ್ ಎಂಬ ಸಂಸ್ಥೆ ಈ Appನ್ನು 2013ರಲ್ಲಿ ಅಭಿವೃದ್ಧಿಪಡಿಸಿದ್ದು,  ಸುಮಾರು 10 ಮಂದಿ ಉದ್ಯೋಗಿಗಳನ್ನು ಹೊಂದಿದೆ.

ಇದನ್ನೂ ಓದಿ: ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ Xiaomi! ಹೇಗಿದೆ ನೋಡಿ...

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಗೂಗಲ್/ ಮಾತೃ ಸಂಸ್ಥೆ ಆಲ್ಫಾಬೆಟ್ ನೀಡದ ಸೇವೆಯಿಲ್ಲ ಎಂಬಂತಾಗಿದೆ. ಗೂಗಲ್ 2015ರಲ್ಲಿ ತನ್ನ ಹೆಸರನ್ನು ಆಲ್ಪಾಬೆಟ್ ಬದಲಾಯಿಸಿಕೊಂಡು, ಇನ್ನೂ ಹಲವು ತಂತ್ರಾಜ್ಞಾನಾಧರಿತ ಕ್ಷೇತ್ರಗಳಿಗೂ ಕೈಹಾಕಿದೆ.   ಹೆಸರಿನಂತೆ ಆಲ್ಫಾಬೆಟ್, ಇಂಗ್ಲೀಷ್ ಭಾಷೆಯ A ಯಿಂದ ಹಿಡಿದು Zವರೆಗೆ ಬಹುತೇಕ ಎಲ್ಲಾ ಅಕ್ಷರಗಳಲ್ಲಿ ಆರಂಭವಾಗುವ ಕಂಪನಿಗಳನ್ನು ಹೊಂದಿದೆ. ತನ್ನ ಸುದೀರ್ಘ ವ್ಯವಹಾರದಲ್ಲಿ ಆಲ್ಪಾಬೆಟ್ ಹಲವಾರು ಕಂಪನಿಗಳನ್ನು ಸ್ವಾಧೀನಪಡಿಸುತ್ತಾ ಬಂದಿದೆ.