ಒಬ್ಬಂಟಿ ಪುರುಷರಿಗೆ ಗುಡ್ ನ್ಯೂಸ್; ಮಾರುಕಟ್ಟೆಗೆ ಬಂದ ರೊಮ್ಯಾಂಟಿಕ್ ಆಗಿ ವರ್ತಿಸುವ ಎಐ ಪ್ರೇಯಸಿ!
ಒಂಟಿತನ ನಿವಾರಿಸಲು AI ರೋಬೋಟ್ 'ಆರಿಯಾ' ಲಭ್ಯ. ಈ ರೋಬೋಟ್ ಮಾನವನಂತೆ ವರ್ತಿಸುತ್ತದೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತದೆ ಎಂದು ರಿಯಲ್‌ಬೋಟಿಕ್ಸ್ ಹೇಳಿಕೊಂಡಿದೆ.
ಒಬ್ಬಂಟಿ ಪುರುಷರು ಹಾಗೂ ಯುವಕರು ನನಗೆ ಹುಡುಗಿಯರು ಸಿಕ್ತಿಲ್ಲ ಎಂದು ಗೋಳಾಡುವವರಿಗೆ ಇದೀಗ ಹುಡುಗಿಯರಂತೆಯೇ ಅತ್ಯಂತ ರೊಮ್ಯಾಂಟಿಕ್ ಆಗಿ ವರ್ತಿಸುವ ಎಐ ರೋಬಾಟ್ ಮಾರುಕಟ್ಟೆಗೆ ಬಂದಿದೆ. ಅಮೆರಿಕ ಮೂಲದ ಟೆಕ್ ಕಂಪನಿ ರಿಯಲ್ ಬೊಟಿಕ್ಸ್ (Realbotics) ಈ ಕ್ರಾಂತಿಕಾರಿ ಆವಿಷ್ಕಾರ ಮಾಡಿದೆ. ಈ ಕಂಪನಿ ತಯಾರಿಸಿದ AI ರೋಬೋಟ್ ಮಾನವನ ರೀತಿಯಲ್ಲಿ ಅಭಿವ್ಯಕ್ತಿಗಳನ್ನು ತೋರ್ಪಡಿಸುತ್ತದೆ. ಈ ರೋಬೋಟ್‌ಗಳು ಮಾನವರ ರೀತಿಯಲ್ಲಿಯೇ ಕೆಲಸ ಮಾಡಲಿವೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಟೆಕ್ ಕಂಪನಿಯು ಆರಿಯಾ ಎಂಬ ಹೆಸರಿನ AI ರೋಬೋಟ್‌ಗೆ ಗೆಳತಿಯನ್ನು ನೀಡಿದೆ. ಈ ರೋಬೋಟ್ ಒಂಟಿ ಪುರುಷರಿಗೆ ಪ್ರೇಮಿಯಂತೆ ಸಹಕರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಜನವರಿ ಮೊದಲ ವಾರದಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆದ 2025ರ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋನಲ್ಲಿ ರಿಯಲ್‌ಬೋಟಿಕ್ಸ್ ಆರಿಯಾಳನ್ನು ಜಗತ್ತಿಗೆ ಪರಿಚಯಿಸಿತು. ಈ AI ಪ್ರಿಯತಮೆಯ ಬೆಲೆ ರೂ 1.5 ಕೋಟಿ ($175,000) ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನು ಜಾಗತಿಕ ಮಟ್ಟದಲ್ಲಿ ಪುರುಷರು ಎದುರಿಸುವ ಒಂಟಿತನವನ್ನು ಹೋಗಲಾಡಿಸುವ ಉದ್ದೇಶದಿಂದ ಇಂತಹ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ರಿಯಲ್ ಬೊಟಿಕ್ಸ್ ಸಿಇಒ ಆಂಡ್ರ್ಯೂ ಕಿಗ್ವಾಲ್. AI ತಂತ್ರಜ್ಞಾನದ ಮತ್ತೊಂದು ಹಂತವನ್ನು ನಾವು ಪ್ರವೇಶಿಸುತ್ತಿದ್ದೇವೆ. ಪ್ರೀತಿ ಮಾಡುವ ಹುಡುಗಿಯಂತೆ ರೊಮ್ಯಾಂಟಿಕ್ ಆಗಿ ವರ್ತಿಸುವ ಈ ರೋಬೋಟ್ ತನ್ನ ಪ್ರೀತಿ ಪಾತ್ರ ವ್ಯಕ್ತಿಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಿಗ್ವಾಲ್ ಹೇಳಿದ್ದಾರೆ. ಆದ್ದರಿಂದ, ನಾವು ವಿಶ್ವದ ಅತ್ಯಂತ ನೈಜ ರೋಬೋಟ್‌ಗಳನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಎಲ್ಲಾ ಕಂಪೆನಿಗಳು ಮಕಾಡೆ ಮಲಗಿದ್ರು, ಕೇವಲ ಒಂದು ವಾರದಲ್ಲಿ 60,169 ಕೋಟಿ ಲಾಭ ಗಳಿಸಿದ ಟಾಟಾ ಕಂಪೆನಿ!
ಆರಿಯಾ ಎಐ ರೋಬೋಟ್ ನಿರ್ಮಾಣದ ವೇಳೆ ಇದನ್ನು ಖರೀದಿ ಮಾಡುವ ವ್ಯಕ್ತಿಯೊಂದಿಗೆ ಹೇಗೆ ಪ್ರೀತಿಯಿಂದ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳಬೇಕು ಅದಕ್ಕೆ ಸರಿ ಹೊಂದುವ ಮುಖಭಾವ ಹೇಗೆ ವ್ಯಕ್ತಪಡಿಸಬೇಕು ಎಂಬುದರ ಮೇಲೆ ಕೇಂದ್ರೀಕರಿಸಿದ್ದಾರೆ. ಅದರಂತೆ ರೋಬೋಟ್ ಯಂತ್ರದ ಮುಖಭಾದ ಬದಲಾವಣೆ ಮಾಡುವುದರಲ್ಲಿ ಯಶಸ್ಸನ್ನೂ ಸಾಧಿಸಿದ್ದೇವೆ ಎಂದು ಕಿಗುಯಲ್ ಹೇಳಿದರು. ಆರಿಯಾ ಎಐ ರೋಬೋಟ್ ಮತ್ತು ಅದರ ಮುಖಭಾವದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ನೋಡುಗರು ತಂತ್ರಜ್ಞಾನದ ಬೆಳವಣಿಗೆಗೆ ಬೆರಗಾಗಿದ್ದರೂ, ಇಂತಹ ಆವಿಷ್ಕಾರಗಳು ಭಯ ಹುಟ್ಟಿಸುವಂತಿವೆ ಎಂಬ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಮಾನವರು ಮತ್ತು ರೋಬೋಟ್‌ಗಳ ನಡುವಿನ ಯುದ್ಧ ನಡೆಯುತ್ತಿದೆ. ಮಾನವ ಜನಾಂಗಕ್ಕೆ ಭವಿಷ್ಯದಲ್ಲಿ ರೋಬೋಟ್‌ಗಳಿಂದಲೇ ಅಪಾಯವಿದೆ ಎಂಬುದನ್ನು ಹಲವು ತಜ್ಞರು ಹೇಳುತ್ತಿದ್ದಾರೆ. ಆದರೆ, ಇದು ಚಲನಚಿತ್ರದ ವಿಷಯವಾಗಿದೆಯೇ ಹೊರತು ವಿಜ್ಞಾನಿಗಳು ಮಾತ್ರ ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಹೊಸ ರೋಬಾಟ್‌ಗಳ ಆವಿಷ್ಕಾರ ಮುಂದುವರೆಸಿದ್ದಾರೆ. ಈಗಾಗಲೇ AI ತಂತ್ರಜ್ಞಾನದ ಕ್ರಾಂತಿಕಾರಿ ಬೆಳವಣಿಗೆಯೊಂದಿಗೆ, ಮಾನವರು ಮಾಡಬೇಕಾದ ಅನೇಕ ಕೆಲಸಗಳ ಸ್ಥಾನವನ್ನು ರೋಬೋಟ್‌ಗಳು ಪಡೆದುಕೊಂಡಿವೆ. ಇದನ್ನು ತಂತ್ರಜ್ಞಾನದ ಕ್ರಾಂತಿಕಾರಿ ಬೆಳವಣಿಗೆ ಎಂದು ಬಣ್ಣಿಸಬಹುದಾದರೂ, ಭವಿಷ್ಯದಲ್ಲಿ ಇದು ಹುಟ್ಟುಹಾಕುವ ಸವಾಲುಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಲೇ ಇದೆ.
ಇದನ್ನೂ ಓದಿ: ಶಾಪಿಂಗ್ ಮಾಲ್‌ಗೆ ನುಗ್ಗಿದ ಕೋತಿ, ಸುಂದರ ಯುವತಿಗೆ ಮಾಡಿದ್ದೇನು? ಆಕೆಯ ಕೆನ್ನೆ, ಕಾಲು ಜಸ್ಟ್ ಮಿಸ್!