- ಈಗಾಗಲೇ ಸರಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ ಲಿಂಕ್ ಕಡ್ಡಾಯಗೊಳಿಸಿದ ಸರಕಾರ.- ಫೇ‌ಸ್‌ಬುಕ್ ಖಾತೆ ತೆರೆಯುವಾಗಲೂ ಆಧಾರ್ ಹೆಸರು ನಮೂದಿಸಲು ಕೇಳಿದ ಬಗ್ಗೆ ಪೋಸ್ಟ್ ಮಾಡಿದ ವ್ಯಕ್ತಿ.
ಬೆಂಗಳೂರು: ಸರಕಾರ ವಿವಿಧ ಯೋಜನೆಗಳನ್ನು ಪಡೆಯುವ ಫಲಾನುಭವಿಗಳು, ಬ್ಯಾಂಕ್ ಹಾಗೂ ಸಿಮ್ಗೆ ಆಧಾರ್ ಲಿಂಕ್ ಮಾಡೋದನ್ನು ಸರಕಾರ ಕಡ್ಡಾಯಗೊಳಿಸಿದೆ. ಆದರೆ, ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಹಾಗೂ ಟ್ವೀಟರ್ಗೆ ಆಧಾರ್ ಲಿಂಕ್ ಕಡ್ಡಾಯವಾದರೆ?
ಟ್ವೀಟರ್ಗಲ್ಲ, ಫೇಸ್ಬುಕ್ ಸದ್ಯಕ್ಕೆ ಆಧಾರ್ನಲ್ಲಿ ನಮೂದಾಗಿರುವ ಹೆಸರನ್ನು ನೀಡಲು ಸೂಚಿಸುತ್ತಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಮತ್ತೊಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದಕ್ಕೆ, ಪ್ರತಿಕ್ರಿಯೆ ನೀಡಿರುವ ಎಫ್ಬಿ ಸಂಸ್ಥಾಪಕ ಜುಗರ್ರ್ಬರ್ಗ್, 'ಬಹು ಹಾಗೂ ನಕಲಿ ಖಾತೆಗಳನ್ನು ತೆರೆಯುವುದನ್ನು ನಿಯಂತ್ರಿಸುವ ಉದ್ದೇಶದಿಂದ ಇಂಥದ್ದೊಂದು ಕ್ರಮಕ್ಕೆ ಫೇಸ್ಬುಕ್ ಮುಂದಾಗಿದೆ,' ಎಂದು ಸಂಸ್ಥಾಪಕ ಜುಗರ್ರ್ಬರ್ಗ್ ಸ್ಪಷ್ಟಪಡಿಸಿದ್ದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಸದ್ಯಕ್ಕೆ ಆಧಾರ್ನಲ್ಲಿ ನಮುದಾಗಿರುವಂತೆ ಮೊದಲ ಹಾಗೂ ಎರಡನೇ ಹೆಸರನ್ನು ತಿಳಿಸಲು ಫೇಸ್ಬುಕ್ ಕೋರುತ್ತಿದ್ದು, ಮುಂದೆ ಸಂಖ್ಯೆಯನ್ನೂ ಲಿಂಕ್ ಮಾಡಲು ಕೇಳಬಹುದೇನೋ?
