Asianet Suvarna News Asianet Suvarna News

Elon Musk Starlinkಗೆ ಕೇಂದ್ರ ಸರ್ಕಾರ ಚಾಟಿ: ಪ್ರಿ ಆರ್ಡರ್‌ ಹಣ ವಾಪಸ್ ನೀಡಲಿರುವ ಕಂಪನಿ !

ಕೇಂದ್ರ ಸರ್ಕಾರದ ಸೂಚನೆಗಳನ್ನು ಅನುಸರಿಸಿ, ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಕಂಪನಿಯು ಮುಂಗಡ-ಆರ್ಡರ್‌ಗಳನ್ನು ಬುಕ್ ಮಾಡಿದ ಬಳಕೆದಾರರಿಗೆ ಮರುಪಾವತಿ ಮಾಡಲಿದೆ. ಕಂಪನಿಯೂ ಇದನ್ನು ಗ್ರಾಹಕರಿಗೆ ಖಚಿತಪಡಿಸಿದ್ದೂ ಗ್ರಾಹಕರಿಗೆ ಕಳುಹಿಸಲಾದ ಇ-ಮೇಲ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ.

Elon Musk Starlink to Refund Pre Orders for Satellite Internet Service in India After Government Order mnj
Author
Bengaluru, First Published Jan 4, 2022, 7:32 PM IST

Tech Desk: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್‌ಗೆ (Elon Musk) ಭಾರತ ಸರ್ಕಾರ ದೊಡ್ಡ ಹೊಡೆತ ನೀಡಿದೆ. ಎಲಾನ್ ಮಸ್ಕ್ ಒಡೆತನದ ಸ್ಯಾಟಲೈಟ್ ಇಂಟರ್ ನೆಟ್ ಸೇವೆ ಒದಗಿಸುವ ಸ್ಟಾರ್ ಲಿಂಕ್ (Star Link)ಗೆ ಭಾರತೀಯರ ಹಣವನ್ನು ವಾಪಸ್ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕಂಪನಿಯು ತನ್ನ ಉಪಗ್ರಹ ಇಂಟರ್ನೆಟ್ ಸೇವೆಗಾಗಿ ಪ್ರಿ-ಆರ್ಡರ್‌ಗಾಗಿ (Pre Order) ಭಾರತೀಯರಿಂದ ದೊಡ್ಡ ಮೊತ್ತವನ್ನು ಠೇವಣಿ ಪಡೆದಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಪ್ರಿ-ಆರ್ಡರ್ ಮೊತ್ತವನ್ನು ಮರುಪಾವತಿಸಲು ಕಂಪನಿಗೆ ಆದೇಶಿಸಿದೆ. ಭಾರತದಲ್ಲಿ ಪರವಾನಗಿ ಪಡೆಯುವವರೆಗೆ ಭಾರತದಲ್ಲಿ ಯಾವುದೇ ರೀತಿಯ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಟಾರ್‌ಲಿಂಕ್ ಕಂಪನಿಗೆ ಕೇಂದ್ರ ಸ್ಪಷ್ಟಪಡಿಸಿದೆ.

ಪ್ರತಿ ಗ್ರಾಹಕರಿಂದ 7,200 ರೂ ಮುಂಗಡ ಹಣ!

ಕೇಂದ್ರ ಸರ್ಕಾರದ ಸೂಚನೆಗಳನ್ನು ಅನುಸರಿಸಿ, ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಯು ಮುಂಗಡ-ಆರ್ಡರ್‌ಗಳನ್ನು ಬುಕ್ ಮಾಡಿದ ಬಳಕೆದಾರರಿಗೆ ಮರುಪಾವತಿ ಮಾಡಲಿದೆ. ಕಂಪನಿಯೂ ಇದನ್ನು ಗ್ರಾಹಕರಿಗೆ ಖಚಿತಪಡಿಸಿದೆ. ಕಂಪನಿಯು ಗ್ರಾಹಕರಿಗೆ ಕಳುಹಿಸಲಾದ ಇ-ಮೇಲ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. ಸ್ಟಾರ್‌ಲಿಂಕ್ ಎಲೋನ್ ಮಸ್ಕ್‌ನ ಏರೋಸ್ಪೇಸ್ ಕಂಪನಿ ಸ್ಪೇಸ್‌ಎಕ್ಸ್‌ನ ಅಂಗಸಂಸ್ಥೆಯಾಗಿದೆ. 

ಸ್ಟಾರ್‌ಲಿಂಕ್ ಶೀಘ್ರದಲ್ಲೇ ಭಾರತದಲ್ಲಿ ತನ್ನ ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಕಂಪನಿಯು ಭಾರತದಲ್ಲಿ ಮುಂಗಡ ಬುಕ್ಕಿಂಗ್ ಆರಂಭಿಸಿತ್ತು. ಕಂಪನಿಯು ಇಲ್ಲಿಯವರೆಗೆ ಸುಮಾರು 5000 ಮುಂಗಡ-ಆದೇಶಗಳನ್ನು ಸ್ವೀಕರಿಸಿದೆ. ಕಂಪನಿಯು ತನ್ನ ಸೇವೆಗಳಿಗಾಗಿ ಬಳಕೆದಾರರಿಂದ ಸುಮಾರು 7,200 ರೂ ಮುಂಗಡ ಹಣವಾಗಿ ಪಡೆದಿದೆ. ಆದರೆ ಈಗ  ಕಂಪನಿಯು ಭಾರತದಲ್ಲಿ ಪರವಾನಗಿಯನ್ನು ತೆಗೆದುಕೊಂಡ ನಂತರವೇ ಯಾವುದೇ ಬುಕಿಂಗ್ ಮಾಡಲು ಸಾಧ್ಯವಾಗಲಿದೆ.

ಇದನ್ನೂ ಓದಿ: Tesla Autopilot ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ ಭಾರತೀಯ Ashok Elluswamy: ಎಲಾನ್‌ ಮಸ್ಕ್

 "ಭಾರತದಲ್ಲಿ ಕಾರ್ಯನಿರ್ವಹಿಸಲು ಪರವಾನಗಿಗಳನ್ನು ಪಡೆಯುವ ಟೈಮ್‌ಲೈನ್ (Timeline) ಬಗ್ಗೆ "ಪ್ರಸ್ತುತ ತಿಳಿದಿಲ್ಲ" ಮತ್ತು ಕಂಪನಿಯು ಭಾರತದಲ್ಲಿ ಸ್ಟಾರ್‌ಲಿಂಕ್ ಅನ್ನು ನಿರ್ವಹಿಸಲು ಅನುಮತಿಸಲು ಪರವಾನಗಿ ಚೌಕಟ್ಟಿನೊಳಗೆ "ಹಲವಾರು ಸಮಸ್ಯೆಗಳು" ಪರಿಹರಿಸಬೇಕಾಗಿದೆ" ಎಂದು ಗ್ರಾಹಕರಿಗೆ ಕಳುಹಿಸಿದ ಇಮೇಲ್‌ನಲ್ಲಿ ಸ್ಟಾರ್‌ಲಿಂಕ್ ತಿಳಿಸಿದೆ.

ವೇಗದ ಇಂಟರ್ನೆಟ್ ಸಂಪರ್ಕದ ಭರವಸೆ!

ಸ್ಟಾರ್‌ಲಿಂಕ್ ಕಂಪನಿಯು ಅನೇಕ ದೇಶಗಳಲ್ಲಿ ವೇಗದ ಇಂಟರ್ನೆಟ್ (Fast Internaet) ಸಂಪರ್ಕದ ಸೌಲಭ್ಯವನ್ನು ಒದಗಿಸುತ್ತದೆ. ಅದೇ ಸಮಯದಲ್ಲಿ, ಕಂಪನಿಯು ಭಾರತದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ. ಸ್ಟಾರ್‌ಲಿಂಕ್ ಉಪಗ್ರಹವು ಲೋ ಅರ್ಥ್‌ ಆರ್ಬಿಟ್‌ ನೆಟ್‌ವರ್ಕ್‌ ಒದಗಿಸಲಿದ್ದು ಇದು ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಕಂಪನಿಯು ತನ್ನ ಇಂಟರ್ನೆಟ್ ಸೇವೆಗಳು ಅತ್ಯುತ್ತಮ ಮತ್ತು ವೇಗವಾಗಿರುತ್ತದೆ ಎಂದು ಹೇಳಿಕೊಂಡಿದೆ.

ಭಾರತದಲ್ಲಿ 200,000 ಸ್ಟಾರ್‌ಲಿಂಕ್ ಸಾಧನಗಳು

ಡಿಸೆಂಬರ್‌ನಲ್ಲಿ, ಸ್ಟಾರ್‌ಲಿಂಕ್ ಕಂಟ್ರಿ ಡೈರೆಕ್ಟರ್ ಸಂಜಯ್ ಭಾರ್ಗವ (Sanjay Bhargava) ಕಂಪನಿಯು ಜನವರಿ 31 ಅಥವಾ ಅದಕ್ಕಿಂತ ಮೊದಲು ವಾಣಿಜ್ಯ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಆಶಿಸುತ್ತಿದೆ ಎಂದು ಹೇಳಿದ್ದಾರೆ. ಭಾರ್ಗವ ಅವರು ತಳಿಸಿದ ಪ್ರಕಾರ ಕಂಪನಿಯು ಡಿಸೆಂಬರ್ 2022 ರ ವೇಳೆಗೆ ಭಾರತದಲ್ಲಿ 200,000 ಸ್ಟಾರ್‌ಲಿಂಕ್ ಸಾಧನಗಳನ್ನು ಹೊಂದುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: Space X Satellites: ಚೀನಾ ಬಾಹ್ಯಾಕಾಶ ಕೇಂದ್ರಕ್ಕೆ ಮಸ್ಕ್‌ ಉಪಗ್ರಹ ಡಿಕ್ಕಿ ಭೀತಿ! 

ಸ್ಟಾರ್‌ಲಿಂಕ್ ಈ ಹಿಂದೆ ನವೆಂಬರ್‌ನಲ್ಲಿ ದೇಶದಲ್ಲಿ ತನ್ನ ವ್ಯವಹಾರವನ್ನು ನೋಂದಾಯಿಸಿದೆ. Starlink Satellite Communications Private Limited ಕಂಪನಿಯು ಭಾರತದಲ್ಲಿನ ಬಳಕೆದಾರರಿಗೆ ಸೇವೆಗಳನ್ನು ಒದಗಿಸುವ ಮೊದಲು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. 

Follow Us:
Download App:
  • android
  • ios