Space X Satellites: ಚೀನಾ ಬಾಹ್ಯಾಕಾಶ ಕೇಂದ್ರಕ್ಕೆ ಮಸ್ಕ್ ಉಪಗ್ರಹ ಡಿಕ್ಕಿ ಭೀತಿ!
* ಎರಡು ಬಾರಿ ಸಮೀಪದಲ್ಲೇ ಹಾದು ಹೋದ ಉಪಗ್ರಹ
* ಎಲಾನ್ ಮಸ್ಕ್ ಕಂಪನಿ ವಿರುದ್ಧ ಚೀನಾ ದೂರು ಸಲ್ಲಿಕೆ
* ಚೀನಾ ಬಾಹ್ಯಾಕಾಶ ಕೇಂದ್ರಕ್ಕೆ ಮಸ್ಕ್ ಉಪಗ್ರಹ ಡಿಕ್ಕಿ ಭೀತಿ!
ಬೀಜಿಂಗ್(ಡಿ.29): ಅಮೆರಿಕಾದ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಉಪಗ್ರಹಗಳು ಚೀನಾದ ಬಾಹ್ಯಾಕಾಶ ಸಂಸ್ಥೆಯ ಪಕ್ಕದಲ್ಲೇ ಹಾದು ಹೋಗಿದ್ದು ಡಿಕ್ಕಿ ಸಂಭವಿಸುವ ಭೀತಿ ಎದುರಾಗಿತ್ತು ಎಂದು ಚೀನಾ ಆರೋಪಿಸಿದೆ.
ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆ ಯೋಜನೆಯ ಭಾಗವಾಗಿ ಹಾರಿಬಿಟ್ಟಿರುವ ಉಪಗ್ರಹಗಳು ಕಳೆದ ಜುಲೈ ಹಾಗೂ ಅಕ್ಟೋಬರ್‌ನಲ್ಲಿ ಚೀನಾದ ಬಾಹ್ಯಾಕಾಶ ಕೇಂದ್ರದ ಬಳಿಯೇ ಹಾದು ಹೋಗಿವೆ. ಯಾವುದೇ ಸಂಭವನೀಯ ಅಪಾಯವನ್ನು ತಪ್ಪಿಸಲು ಚೀನಾದ ಬಾಹ್ಯಾಕಾಶ ಯಾತ್ರಿಗಳು ಅಗತ್ಯ ಕ್ರಮದ ಮೂಲಕ ಅವಘಡವನ್ನು ತಪ್ಪಿಸಿದರು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.
ಅಲ್ಲದೆ ಈ ಸಂಬಂಧ ಔಟರ್ ಸ್ಪೇಸ್ ಒಪ್ಪಂದದ ನಿಯಮಗಳನ್ನು ಎಲಾನ್ ಮಸ್ಕ್ ಉಲ್ಲಂಘಿಸಿದ್ದಾರೆ ಎಂದು ಡಿ.2 ರಂದೇ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಗೆ ಸಚಿವಾಲಯಕ್ಕೆ ದೂರು ಎಂದು ಅವರು ತಿಳಿಸಿದ್ದಾರೆ.
ಸ್ಪೇಸ್ ಎಕ್ಸ್ ಸಂಸ್ಥೆ ಸ್ಥಾಪನೆ ಉದ್ದೇಶವೇನು?
ಭಾರತದ ಬಾಹ್ಯಾಕಾಶ ಮತ್ತು ಬಾಹ್ಯಾಕಾಶ ಆಧಾರಿತ ಸಂವಹನದ ನೆಟ್‌ವರ್ಕ್ನಲ್ಲಿ ತೊಡಗಿಸಿಕೊಳ್ಳಲು ಅಮೆರಿಕ ಸೇರಿದಂತೆ ಜಾಗತಿಕ ಮತ್ತು ದೇಶೀಯ ಬಾಹ್ಯಾಕಾಶ ಸಂಸ್ಥೆಗಳು ಮುಂದೆ ಬರುತ್ತಿವೆ. ಇಂಥ ಮಹತ್ವದ ಸಂದರ್ಭದಲ್ಲಿ ಬಾಹ್ಯಾಕಾಶ ಮತ್ತು ಉಪಗ್ರಹ ಕಂಪನಿಗಳನ್ನು ಒಟ್ಟಿಗೆ ಸೇರಿಸಲಿರುವ ಈ ಐಎಸ್‌ಪಿಎ ಒಕ್ಕೂಟವು, ಭಾರತೀಯ ಬಾಹ್ಯಾಕಾಶ ಉದ್ಯಮದ ಧ್ವನಿಯಾಗಲಿದೆ.
ಯಾರೆಲ್ಲಾ ಸದಸ್ಯರು
ಹೊಸ ಸಂಸ್ಥೆಯಲ್ಲಿ ಇಸ್ರೋ, ಮ್ಯಾಪ್ ಮೈಇಂಡಿಯಾ, ವಾಲ್‌ಚಂದ್‌ನಗರ್ ಇಂಡಸ್ಟ್ರೀಸ್, ಅನಂತ್ ಟೆಕ್ನಾಲಜಿ ಲಿ., ಬಿಇಎಲ್, ಸೆಂಟ್ರಾನ್, ಭಾರ್ತಿ ಏರ್ಟೆಲ್ ಮತ್ತು ಲಾರ್ಸೆನ್ ಅಂಡ್ ಟ್ಯೂಬ್ರೋ, ನೆಲ್ಕೋ ಸೇರಿದಂತೆ ಇನ್ನಿತರ ಕಂಪನಿಗಳು ಸದಸ್ಯರಾಗಿವೆ.
ಸಂಸ್ಥೆ ಮಹತ್ವವೇನು?
ಹಲವು ಅಂತಾರಾಷ್ಟ್ರೀಯ ಮತ್ತು ಭಾರತೀಯ ಕಂಪನಿಗಳು ಮುಂದಿನ ದಿನಗಳಲ್ಲಿ ಭಾರೀ ವೇಗದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ನೀಡಲು ಭಾರೀ ಪೈಪೋಟಿ ಒಡ್ಡುತ್ತಿವೆ. ಇದಕ್ಕೆ ಪೂರಕವಾಗಿ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್, ಸುನಿಲ್ ಭಾರ್ತಿ ಮಿತ್ತಲ್ ಅವರ ಒನ್‌ವೆಬ್ ಸೇರಿದಂತೆ ಇನ್ನಿತರ ಕಂಪನಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗೆ ಮುಂದಾಗಿವೆ. 2022ರ ವೇಳೆಗೆ ಒನ್‌ವೆಬ್ ಸಂಸ್ಥೆಯು ಭಾರತದಲ್ಲೂ ಸೇವೆ ಒದಗಿಸುವ ಸಾಧ್ಯತೆಯಿದೆ. ಅಲ್ಲದೆ ಸ್ಪೇಸ್‌ಎಕ್ಸ್ ಸಹ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಾಗಿ 12 ಸಾವಿರ ಉಪಗ್ರಹ ನೆಟ್‌ವರ್ಕ್ಗಳ ಸ್ಥಾಪನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಐಎಸ್‌ಪಿಎ ಹೆಚ್ಚು ಮಹತ್ವ ಪಡೆದಿದೆ.
2022ರಿಂದ ಸ್ಪೇಸ್ ಎಕ್ಸ್‌ನಿಂದ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ
ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ ಅಧೀನ ಸಂಸ್ಥೆ ಸ್ಟಾರ್‌ಲಿಂಕ್ ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ ಸರ್ಕಾರದಿಂದ ಅನುಮತಿ ಕೋರಿದೆ.
‘ಸ್ಪೇಸ್ ಎಕ್ಸ್ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ ಪ್ರೈ.ಲಿ (ಎಸ್‌ಎಸ್‌ಸಿಪಿಎಲ್) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ. ನಾವು ಇನ್ಮುಂದೆ ಪರವಾನಗಿ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದು’ ಕಂಪನಿಯ ಭಾರತದ ನಿರ್ದೇಶಕ ಸಂಜಯ್ ಭಾರ್ಗವ ತಿಳಿಸಿದ್ದಾರೆ.
ಭಾರತದಿಂದ ಈಗಾಗಲೇ ಸುಮಾರು 5000 ಬ್ರಾಡ್‌ಬ್ಯಾಂಡ್ ಆರ್ಡರ್ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಕಂಪನಿಯು ಸೆಕೆಂಡಿಗೆ 50ರಿಂದ 150 ಮೆಗಾ ಬೈಟ್ ವೇಗದಲ್ಲಿ ಡೇಟಾ ಸೌಲಭ್ಯ ಒದಗಿಸಲು ಪ್ರತಿ ಗ್ರಾಹಕರಿಂದ 7,350 ರು. ಡೆಪಾಸಿಟ್ ಶುಲ್ಕ ಪಡೆಯಲಿದೆ. ಈ ಮೂಲಕ ಈಗಾಗಲೇ ಭಾರತದಲ್ಲಿ ಅಸ್ತಿತ್ವದಲ್ಲಿರುವ ರಿಲಯನ್ಸ್, ಜಿಯೋ, ಭಾರತಿ ಏರ್‌ಟೆಲ್, ವಡಾಫೋನ್ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಪೈಪೋಟಿ ನೀಡಲಿದೆ.