ಕೇವಲ 4,444 ರೂಪಾಯಿಗೆ ಖರೀದಿಸಿ ಐಫೋನ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Nov 2018, 4:56 PM IST
deals of the day get iphone 4s in just rs 4444 and samsung s9 plus with rs 13000 discount
Highlights

ನಿಮಗೂ ಐಫೋನ್ ಖರೀದಿಸಬೇಕೆಂಬ ಆಸೆ ಇದ್ದರೆ, ಸ್ನ್ಯಾಪ್‌ಡೀಲ್ ಮೂಲಕ ಈ ಇಚ್ಛೆಯನ್ನು ಪೂರ್ಣಗೊಳಿಸಬಹುದು. ಇದರ ಡೀಲ್ಸ್ ಆಫ್ ದ ಡೇನಲ್ಲಿ ನೀಡಲಾದ ಐಫೋನ್ 4ಎಸ್ ಕೇವಲ 4,444 ರೂಪಾಯಿಗೆ ಸಿಗುತ್ತಿದೆ.

ಒಂದು ವೇಳೆ ನೀವು ಇ-ಕಾಮರ್ಸ್ ಕಂಪೆನಿ ನಡೆಸಿದ್ದ ಫೆಸ್ಟಿವಲ್ ಸೇಲ್‌ನಲ್ಲಿ ನಿಮಗಿಷ್ಟವಾದ ವಸ್ತುಗಳನ್ನು ಖರೀದಿಸಲಾಗಿಲ್ಲವೆಂದು ಚಿಂತಿಸಬೇಡಿ. ಗ್ರ್ಯಾಂಡ್ ಸೇಲ್ ಹೊರತುಪಡಿಸಿ ಕಂಪೆನಿಗಳು ಡೀಲ್ಸ್ ಆಫ್ ದ ಡೇ ಮೂಲಕ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ಹೀಗಾಗಿ ನೀವು ಕೂಡಾ ನಿಮಗಿಷ್ಟವಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಹಾಗಾದ್ರೆ ಸದ್ಯ ಯಾವೆಲ್ಲ ವಸ್ತುಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು? ಇಲ್ಲಿದೆ ಉತ್ತರ..

4,444 ರೂಪಯಿಗೆ ಖರೀದಿಸಿ ಐಫೋನ್ 4ಎಸ್

ನಿಮಗೂ ಐಫೋನ್ ಖರೀದಿಸಬೇಕೆಂಬ ಆಸೆ ಇದ್ದರೆ, ಸ್ನ್ಯಾಪ್‌ಡೀಲ್ ಮೂಲಕ ಈ ಇಚ್ಛೆಯನ್ನು ಪೂರ್ಣಗೊಳಿಸಬಹುದು. ಇದರ ಡೀಲ್ಸ್ ಆಫ್ ದ ಡೇನಲ್ಲಿ ನೀಡಲಾದ ಐಫೋನ್ 4ಎಸ್ ಕೇವಲ 4,444 ರೂಪಾಯಿಗೆ ಸಿಗುತ್ತಿದೆ. ಇದು ಸರ್ಟಿಫೈಡ್ ಯೂಸ್ಡ್ ಪ್ರಾಡಕ್ಟ್ ಆಗಿದ್ದು, 6 ತಿಂಗಳ ವಾರಂಟಿ ಕೂಡಾ ಸಿಗುತ್ತದೆ. ಫೋನ್ ಸ್ಪೆಸಿಫಿಕೇಶನ್ ಕುರಿತಾಗಿ ನೋಡುವುದಾದರೆ ಇದರಲ್ಲಿ 16ಜಿಬಿ ಇಂಟರ್ನಲ್ ಮೆಮೊರಿ ಹಾಗೂ 512ಎಂಬಿ ರಾಮ್ ಕೂಡಾ ನೀಡಲಾಗುತ್ತಿದೆ. ಫೋನ್ ನಲ್ಲಿ 0.3 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮರಾ ಹಾಗೂ 5 ಮೆಗಾ ಪಿಕ್ಸೆಲ್‌ನ ರೇರ್ ಕ್ಯಾಮರಾ ಇದೆ. ಇದರ ಮೂಲ ಬೆಲೆ 31,500 ರೂಪಾಯಿ ಆಗಿದೆ.


ಸಾಮ್ಸಂಗ್ ಗ್ಯಾಲಕ್ಸಿ 9ಎಸ್ ಪ್ಲಸ್: 13 ಸಾವಿರ ಡಿಸ್ಕೌಂಟ್

ಅಮೆಜಾನ್ ಇಂದಿನ ಡೀಲ್ ನೋಡುವುದಾದರೆ ನೀವು ಇದರಲ್ಲಿ ಸಾಮ್ಸಂಗ್ ಗ್ಯಾಲಕ್ಸಿ 9ಎಸ್ ಪ್ಲಸ್‌ನ 6ಜಿಬಿ ರಾಮ್ ಹಾಗೂ 64 ಜಿಬಿ ಸ್ಟೋರೇಜ್ ಮೆಮೊರಿಯ ವೇರಿಯಂಟ್‌ನ್ನು 8100 ರೂಪಾಯಿಯ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು. ಈ ಫೋನ್ ಕೋರಲ್ ಬ್ಲೂ, ಮಿಡ್ ನೖಟ್ ಬ್ಲ್ಯಾಕ್ ಹಾಗೂ ಬರ್ಗಂಡಿ ರೆಡ್ ಬಣ್ಣಗಳಲ್ಲಿ ಲಭ್ಯವಿದೆ. ಇದನ್ನು ಹೊರತುಪಡಿಸಿ ನೀವು 64 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್‌ನ ಗೋಲ್ಡ್ ಕಲರ್‌ನ ಫೋನ್ 13,100 ರೂಪಾಯಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ.  

loader