Asianet Suvarna News Asianet Suvarna News

ಟ್ವಿಟರ್ ಖರೀದಿಗೆ ತಾತ್ಕಾಲಿಕ ಬ್ರೇಕ್? ಎಲಾನ್ ಮಸ್ಕ್ ಲೇಟೆಸ್ಟ್‌ ಟ್ವೀಟ್‌ನಲ್ಲಿ ಹೇಳಿದ್ದೇನು?

ಟ್ವಿಟರ್ ಒಪ್ಪಂದವನ್ನು ತಡೆಹಿಡಿಯಲಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಮಸ್ಕ್ ಇದನ್ನು ಗಂಭೀರವಾಗಿ ಹೇಳಿದ್ದಾರೋ ಅಥವಾ ಅವರು ತಮಾಷೆ ಮಾಡುತ್ತಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ. ಕಳೆದ 20 ದಿನಗಳಿಂದ ಅವರು ಟ್ವೀಟ್ ಮಾಡುತ್ತಿರುವ ರೀತಿಯನ್ನು ಗಮನಿಸಿದರೆ ಈ ಹೊಸ ಟ್ವೀಟ್‌ ಅಸ್ಪಷ್ಟವಾಗಿದೆ.

Deal to buy twitter is temporarily on hold says Elon Musk mnj
Author
Bengaluru, First Published May 13, 2022, 5:33 PM IST | Last Updated May 13, 2022, 5:37 PM IST

Elon Musk Latest News: ಟೆಸ್ಲಾ ಸಿಇಓ ಹಾಗೂ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಎಲಾನ್‌ ಮಸ್ಕ್‌ ಇತ್ತೀಚೆಗೆ ಟ್ವಿಟರ್ ಖರೀದಿ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಆದರೆ ಎಲಾನ್ ಮಸ್ಕ್ ಟ್ವಿಟರ್ ಖರೀದಿಸದಿರುವ ಸಾಧ್ಯತೆಗಳಿವೆ. ಮಸ್ಕ್ ತಮ್ಮ ಇತ್ತೀಚಿನ ಟ್ವೀಟ್‌ವೊಂದರಲ್ಲಿ $44 ಶತಕೋಟಿ ಟ್ವಿಟರ್ ಒಪ್ಪಂದವು "ಹೋಲ್ಡ್" ನಲ್ಲಿದೆ ಎಂದು ಹೇಳಿದ್ದಾರೆ. ಮಸ್ಕ್ ಜನಪ್ರಿಯ ಮೈಕ್ರೋಬ್ಲಾಗಿಂಗ್ ವೇದಿಕೆಯನ್ನು ಕಳೆದ ತಿಂಗಳು $44 ಶತಕೋಟಿಗೆ ಖರೀದಿಸಲು ಮುಂದಾಗಿದ್ದರು. ಇದು ತಜ್ಞರು ಮತ್ತು ಟ್ವಿಟರ್ ಬಳಕೆದಾರರಿಗೆ ಆಶ್ಚರ್ಯವನ್ನುಂಟು ಮಾಡಿದೆ ಅಲ್ಲದೇ ಸಾಕಷ್ಟು ಊಹಾಪೋಹಗಳಿಗೂ ಕಾರಣವಾಗಿದೆ. 

ಟ್ವಿಟ್ಟರನ್ನು  $44 ಬಿಲಿಯನ್‌ಗೆ ಖರೀದಿಸಲು  ಮಸ್ಕ್ ಮುಂದಾಗಿದ್ದಾರೆ ಮತ್ತು ಮುಂಬರುವ ತಿಂಗಳುಗಳಲ್ಲಿ ಒಪ್ಪಂದವನ್ನು ಮುಕ್ತಾಯಗೊಳಿಸಲು ಮಸ್ಕ್ ಮತ್ತು ಟ್ವಿಟರ್ ಸಿದ್ಧವಾಗಿವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಮಸ್ಕ್‌ ಈ ಒಪ್ಪಂದದಿಂದ ಹಿಂದೆ ಸರಿಯಬಹುದು ಎಂಬ ಕೆಲವು ಊಹಾಪೋಹಗಳಿವೆ.

ಈಗ, ಮಸ್ಕ್ ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ, "Twitter deal temporarily on hold pending details supporting the calculation that spam/fake accounts do indeed represent less than 5 per cent of users" ಎಂದು ಮಸ್ಕ್‌ ಬರೆದಿದ್ದಾರೆ. ಈ ಮೂಲಕ ಟ್ಬೀಟರ್‌ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಟ್ವಿಟರ್‌ನಿಷೇಧ ಹಿಂಪಡೆಯುತ್ತೇನೆ ಎಂದ ಟೆಸ್ಲಾ ಸಿಇಓ ಎಲಾನ್ ಮಸ್ಕ್

ಆದರೆ ಮಸ್ಕ್ ಇದನ್ನು ಗಂಭೀರವಾಗಿ ಹೇಳಿದ್ದಾರೋ ಅಥವಾ ಅವರು ತಮಾಷೆ ಮಾಡುತ್ತಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ. ಕಳೆದ 20 ದಿನಗಳಿಂದ ಅವರು ಟ್ವೀಟ್ ಮಾಡುತ್ತಿರುವ ರೀತಿಯನ್ನು ಗಮನಿಸಿದರೆ ಈ ಹೊಸ ಟ್ವೀಟ್‌ ಅಸ್ಪಷ್ಟವಾಗಿದೆ. ಅಲ್ಲದೇ ತಮ್ಮ ಮೂಲ ಟ್ವೀಟ್‌ಗೆ "ಇನ್ನೂ ಒಪ್ಪಂದಕ್ಕೆ ಬದ್ಧವಾಗಿದ್ದೇನೆ" ಎಂದು ಮಸ್ಕ್‌ ರಿಪ್ಲೈ ಮಾಡಿದ್ದಾರೆ

 

 

ಆದಾಗ್ಯೂ, ಈ ಸಂದರ್ಭದಲ್ಲಿ, ಖಾಸಗಿ ಆಂತರಿಕ ಡೇಟಾದ ಬದಲಿಗೆ ಟ್ವಿಟರ್‌ನ ನಿಯಂತ್ರಕ ಫೈಲಿಂಗ್ ಅವಲಂಬಿಸಿರುವ ರಾಯಿಟರ್ಸ್‌ನ ಹೊಸ ವರದಿಯು $ 44 ಬಿಲಿಯನ್ ಒಪ್ಪಂದವನ್ನು ಮಸ್ಕ್ ತಡೆಹಿಡಿಯಲು ಕಾರಣ ಎಂದು  ತಿಳಿದುಬಂದಿದೆ. ಅಲ್ಲದೆ, ರಾಯಿಟರ್ಸ್ ವರದಿಯು ವಾಸ್ತವವಾಗಿ ಟ್ವಿಟರ್‌ಗೆ ಸಕಾರಾತ್ಮಕ ವರದಿಯಾಗಿದೆ ಏಕೆಂದರೆ, ಅನೇಕರು ನಿರೀಕ್ಷಿಸುವ ಅಥವಾ ಭಾವಿಸಿದ್ದಕ್ಕಿಂತ ಭಿನ್ನವಾಗಿ, ಟ್ವಿಟರ್ ಬಳಕೆದಾರರಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಜನರು ಸ್ಪ್ಯಾಮ್ ಬಾಟ್‌ಗಳಿವೆ ಎಂದು ವರದಿಯ ತಿಳಿಸಿದೆ. 

ಟ್ವೀಟರ್‌ನ ಸಕಾರಾತ್ಮಕ ವರದಿಯ ಹೊರತಾಗಿಯೂ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ತಮಾಷೆಯಾಗಿ ಕಾಣುತ್ತದೆ ಎಂದು ವಿಶ್ಲೇಷಕರ ಅಭಿಪ್ರಾಯ. ಆದರೆ ಎಲಾನ್‌ ಮಸ್ಕ್‌ ಟ್ವೀಟರ್‌ ಒಪ್ಪಂದ ಮಾಡದಿರುವ ಸಾಧ್ಯತೆ ಕೂಡ ಇದೆ. ಒಪ್ಪಂದವನ್ನು "ಹೋಲ್ಡ್" ನಲ್ಲಿ ಇರಿಸಲಾಗಿದೆ ಎಂದು ಹೇಳುವ ಮೂಲಕ ಮಸ್ಕ್  ಟ್ವಿಟರ್ ನಡುವಿನ ಒಪ್ಪಂದವು ಇನ್ನೂ ಪೂರ್ಣಗೊಂಡಿಲ್ಲ ಎಂದು ಮಸ್ಕ್ ತಿಳಿಸಿದ್ದಾರೆ. 

ಇದನ್ನೂ ಓದಿ: Elon Musk: ತಾಜಮಹಲ್ ಸೊಬಗಿಗೆ ಬೆರಗಾಗಿದ್ದ ಎಲಾನ್ ಮಸ್ಕ್

ಮಸ್ಕ್ ಟ್ವಿಟ್ಟರ್ ಖರೀದಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟೆಸ್ಲಾ ಮಸ್ಕ್‌ ಅವರ ಮೊದಲ ಆದ್ಯತೆಯಾಗಿದೆ, ಹೀಗಾಗಿ ಮಸ್ಕ್, ಪೂರ್ಣಗೊಳಿಸುವ ಮೊದಲು ಟ್ವಿಟರ್ ಒಪ್ಪಂದದಿಂದ ಹೊರಬರುತ್ತಾರೆ ಎಂದು ಕೆಲವು ವರದಿಗಳು ಹೇಳಿವೆ. ಏಕೆಂದರೆ ಟ್ವೀಟರ್‌ ಒಪ್ಪಂದದ ಸುದ್ದಿಯ ಬಳಿಕ  ಈಗಾಗಲೇ ಟೆಸ್ಲಾ ಸ್ಟಾಕ್ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ ಮತ್ತು ಮಸ್ಕ್‌ ಸಂಪತ್ತನ್ನು ದುರ್ಬಲಗೊಳಿಸಿದೆ.

ಟೆಸ್ಲಾ ಉಳಿಸಲು ಟ್ವೀಟರ್‌ಗೆ ನಕಾರ?: ಇನ್ನು ಮಸ್ಕ್, ಟ್ವಿಟರ್ ಸ್ಟಾಕ್ ಹೇಗೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ಗಮನಿಸಿ, ಟ್ವಿಟರ್ ಖರೀದಿಯನ್ನು ಮರುಸಂಧಾನ ಮಾಡಲು ಮತ್ತು ಕಡಿಮೆ ಬೆಲೆಗೆ ಖರೀದಿ ಮಾಡಲು ಬಯಸುತ್ತಿದ್ದಾರೆ ಎಂಬ ಚರ್ಚೆ ಇದೆ. 

ಅಲ್ಲದೇ  ತಾವು ನಿರ್ಧರಿಸಿದ ಬೆಲೆಗೆ ಒಪ್ಪಂದವಾಗಿದ್ದರೆ, ಮಸ್ಕ್‌ ಇದರಿಂದ  ದೂರ ಸರಿಯಬಹುದು ಎಂದು ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ  ತಿಳಿಸಿದೆ. ಮಸ್ಕ್‌ ಈ ಒಪ್ಪಂದಿಂದ ದೂರ ಸರಿದರೆ ಮಸ್ಕ್ ಟ್ವಿಟರ್‌ಗೆ $ 1 ಬಿಲಿಯನ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹಿಂಡೆನ್‌ಬರ್ಗ್ ಸಂಶೋಧನೆ  ತಿಳಿಸಿದೆ. ಮಸ್ಕ್‌ ಈ ಮೊತ್ತ ಪಾವತಿಸಲು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವರದಿ ಹೇಳಿದೆ. 

Latest Videos
Follow Us:
Download App:
  • android
  • ios