ಈ ನಂಬರ್‌ಗೆ ಕರೆ ಮಾಡಿದ್ರೆ ಜಿಯೋ, ಏರ್‌ಟೆಲ್ ಹೋಗಿ ಆಕ್ಟಿವ್ ಆಗುತ್ತೆ BSNL 4G ಸಿಮ್
ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯಿಂದ ಬೇಸತ್ತ ಜನರು BSNL ಕಡೆಗೆ ಮುಖ ಮಾಡುತ್ತಿದ್ದಾರೆ. BSNL 4G ನೆಟ್‌ವರ್ಕ್ ಅಳವಡಿಕೆಯನ್ನು ವೇಗಗೊಳಿಸಿದ್ದು, ಗ್ರಾಹಕರನ್ನು ಸೆಳೆಯಲು ಹೊಸ ಆಯ್ಕೆಗಳನ್ನು ನೀಡುತ್ತಿದೆ. BSNL ಸಿಮ್ ಅನ್ನು ಮನೆಯಲ್ಲಿಯೇ ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಗೆ ಬೇಸತ್ತಿರುವ ಜನರು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಟ್ಯಾರಿಫ್ ಹೆಚ್ಚಿಸಿಕೊಂಡಿರುವ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಹೊಸ ಹೊಸ ಆಫರ್ ಪರಚಯಿಸುತ್ತಿದ್ರೂ ಹಿಂದಿನ ಬೆಲೆಗಳಿಗಿಂತ ಇದು ಸುಮಾರು ಶೇ.15ರಷ್ಟು ಅಧಿಕವಾಗಿದೆ. ಇತ್ತ ಬಿಎಸ್‌ಎನ್‌ಎಲ್ ಯಾವುದೇ ಬೆಲೆ ಏರಿಕೆ ಮಾಡದಿದ್ದರೂ ಮಧ್ಯಮ ವರ್ಗದ ಜನತೆಗೆ ಕೈಗೆಟಕುವ ಪ್ಲಾನ್‌ಗಳನ್ನು ಹೊರತರುವ ಮೂಲಕ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಿಎಸ್‌ಎನ್ಎಲ್ ಕೇಂದ್ರಕ್ಕೆ ತೆರಳಿ ಸಿಮ್ ಪೋರ್ಟ್ ಮಾಡಿಕೊಳ್ಳಲು ಎಲ್ಲರಿಂದಲೂ ಸಾಧ್ಯವಾಗಲ್ಲ. ಇಂದು ನಾವು ನಿಮಗೆ ಮನೆಯಲ್ಲಿಯೇ ಕುಳಿತು ಹೇಗೆ ಸಿಮ್ ನೆಟ್‌ವರ್ಕ್ ಬದಲಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಳುತ್ತಿದ್ದೇವೆ. ಒಂದು ಸಂಖ್ಯೆಗೆ ಕರೆ ಮಾಡಿದ್ರೆ ನಿಮ್ಮ ಎಲ್ಲಾ ಸಮಸ್ಯೆಗಳು ಬದಲಾಗಲಿವೆ.
ಮತ್ತೊಂದು ಕಡೆ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಅಳವಡಿಕೆ ಕಾರ್ಯದ ವೇಗವನ್ನು ಹೆಚ್ಚಿಸಿದ್ದು, ಇದರೊಂದಿಗೆ 5ಜಿ ಸೇವೆ ಆರಂಭಿಸುವ ಭರವಸೆಯನ್ನು ಸಹ ನೀಡಿದೆ. ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಬಿಎಸ್‌ಎನ್ಎಲ್ 4G ಮತ್ತು 5G ಸಿಮ್ ವಿತರಣೆ ಕೆಲಸವನ್ನು ಸಹ ಆರಂಭಿಸಿದೆ. ಇದೀಗ ಬಿಎಸ್‌ಎನ್‌ಎಲ್ ಗ್ರಾಹಕರ ಅನುಕೂಲಕ್ಕಾಗಿ ಹೊಸ ಆಯ್ಕೆಯನ್ನು ನೀಡಿದೆ. ಈ ಹೊಸ ಸೌಲಭ್ಯವನ್ನು ಮಾರುಕಟ್ಟೆ ಅಥವಾ ಮನೆ ಅಥವಾ ಆಫಿಸ್‌ನಿಂದಲೂ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಇದು ಗ್ರಾಹಕರನ್ನು ಸೆಳೆಯುವ ಬಿಎಸ್‌ಎನ್‌ಎಲ್ ನ ಮತ್ತೊಂದು ತಂತ್ರ ಎಂದು ಹೇಳಲಾಗುತ್ತಿದೆ.
ಒಂದು ಬಟನ್ ಒತ್ತಿದ್ರೆ Jio-Airtelನಿಂದ ಸಿಗುತ್ತೆ ಮುಕ್ತಿ; ಕೆಲವೇ ನಿಮಿಷದಲ್ಲಿ ಮನೆಗೆ ಬರುತ್ತೆ BSNL 4G ಸಿಮ್
ಆಗಸ್ಟ್ ವರದಿ ಪ್ರಕಾರ, ರಿಲಯನ್ಸ್ ಜಿಯೋದಿಂದ ಹೊರ ಬರುತ್ತಿರುವ ಬಹುತೇಕ ಗ್ರಾಹಕರು ಬಿಎಸ್‌ಎನ್‌ಎಲ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಿಎಸ್‌ಎನ್‌ಎಲ್ ಸಬ್‌ಸ್ಕ್ರೈಬರ್ಸ್ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿರುವ ಮಾಹಿತಿ ಟ್ರಾಯ್ ನೀಡಿದೆ. ಕೆಲ ವರದಿಗಳ ಪ್ರಕಾರ, ಖಾಸಗಿ ಕಂಪನಿಗಳ ಬೆಲೆ ಏರಿಕೆ ನಂತರ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ 40 ಲಕ್ಷ ಅಧಿಕವಾಗಿದೆ. ಇದೀಗ ಬಿಎಸ್‌ಎನ್ಎಲ್ ಗ್ರಾಹಕರು ಮನೆಯಲ್ಲಿಯೇ ಕುಳಿತು ತಾವೇ ಸಿಮ್ ಆಕ್ಟಿವೇಟ್ ಮಾಡಿಕೊಳ್ಳಬಹುದು.
ಸಿಮ್ ಕಾರ್ಡ್ ಆಕ್ಟಿವ್ ಮಾಡೋದು ಹೇಗೆ?
ಹಂತ 1: ಮೊದಲು ಬಿಎಸ್‌ಎನ್‌ಎಲ್ ಸಿಮ್ ಮೊಬೈಲ್‌ಗೆ ಹಾಕಿ, ಪೋನ್ ರೀಸ್ಟಾರ್ಟ್ ಮಾಡಿಕೊಳ್ಳಬೇಕು.
ಹಂತ 2: ಮೊಬೈಲ್‌ನಲ್ಲಿ ನೆಟ್‌ವರ್ಕ್ ಬರೋವರೆಗೂ ಸ್ವಲ್ಪ ಸಮಯದವರೆಗೆ ವೇಟ್ ಮಾಡಿ. ನಂತರ ಕಾಲ್ ಆಫ್ಷನ್ ಓಪಮ್ ಮಾಡಿ, 1507 ಸಂಖ್ಯೆಗೆ ಕರೆ ಮಾಡಿ.
ಹಂತ 3: 1507ಗೆ ಕರೆ ಮಾಡಿದಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತದೆ. ಟೆಲಿ-ವೆರಿಫಿಕೇಷನ್ ಸಂಬಂಧ ಕೆಲ ಸೂಚನೆಗಳನ್ನು ಪಾಲಿಸಿ.
ಹಂತ 4: ನಿಮಗೆ ಕೆಲವು ಇಂಟರ್‌ನೆಟ್ ಸೆಟ್ಟಿಂಗ್ಸ್ ಸಿಗುತ್ತದೆ. ಅವೆಲ್ಲವನ್ನು ಸೇವ್ ಮಾಡಿಕೊಳ್ಳಬೇಕು.
ಹಂತ 5: ಈಗ ನಿಮ್ಮ ಬಿಎಸ್‌ಎನ್ಎಲ್ ಸಿಮ್ ಆಕ್ಟಿವ್ ಆಗುತ್ತದೆ. ನಂತರ ಕಾಲ್ ಮಾಡಬಹುದು ಮತ್ತು ಇಂಟರ್‌ನೆಟ್ ಬಳಕೆ ಮಾಡಬಹುದು.
ಬೆಲೆ ಏರಿಕೆ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ಗೆ 20 ಲಕ್ಷ ಹೊಸ ಗ್ರಾಹಕರು; ಜಿಯೋ, ಏರ್‌ಟೆಲ್ ಕಳೆದುಕೊಂಡಿದ್ದೆಷ್ಟು?