ನವದೆಹಲಿ :  ಬಿಎಸ್ ಎನ್ ಎಲ್ ದಸರಾ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ಒಂದನ್ನು ಪ್ರಕಟ ಮಾಡಿದೆ. ತನ್ನ 100 ಮಿಲಿಯನ್  ಚಂದಾದಾರರಿಗೆ ಈ ಕೊಡುಗೆಯನ್ನು ನೀಡುತ್ತಿದೆ. 

ಬೇರೆ ಬೇರೆ ಟೆಲಿಕಾಂ ಸಂಸ್ಥೆಗಳೂ ಕೂಡ ಇದೇ ವೇಳೆ ಭರ್ಜರಿ ಆಫರ್ ಗಳನ್ನು ಪ್ರಕಟ ಮಾಡಿದ್ದು,  ಬಿಎಸ್ ಎಲ್ ಎಲ್ ಕೂಡ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಪ್ರಕಟಿಸಿದೆ. 

ಇದೀಗ 78 ರು.ಗಳ ಟಾರಿಫ್ ಪ್ಲಾನ್ ಒಂದನ್ನು ಪರಿಚಯಿಸಿದ್ದು,  ಇದರಿಂದ 10 ದಿನಗಳ ಕಾಲ ಅನ್ ಲಿಮಿಟೆಡ್ ಡಾಟಾ, ಅನ್ಲಿಮಿಟೆಡ್ ಕಾಲ್, ವಿಡಿಯೋ ಕಾಲ ವಿಶೇಷ ಸೌಲಭ್ಯವನ್ನು ನೀಡಲಾಗಿದೆ. ಇಂದೇ ನೀವು ಈ ಹೊಸ ಆಫರ್ ಲಾಭ ಪಡೆದುಕೊಳ್ಳಬಹುದಾಗಿದೆ. 

ಹಬ್ಬದ ಸಂದರ್ಭದಲ್ಲಿ ತಮ್ಮ ಗೆಳೆಯರು ಸಂಬಂಧಿಗಳೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳಬಹುದಾಗಿದೆ.