ಏರ್‌ಟೆಲ್ ಗ್ರಾಹಕರಿಗೆ ಶಾಕ್: ಮಾರ್ಚ್‌ನಿಂದ ಈ ಸೇವೆ ಸ್ವಿಚ್‌ ಆಫ್!

2020ರ ಮಾರ್ಚ್‌​ನಿಂದ ಏರ್‌ಟೆಲ್‌ನ ಈ ಸೇವೆ ಬಂದ್| ಗ್ರಾಹಕರಿಗೆ ಶಾಕ್

Bharti Airtel looks to phase out 3G network across India by March

ನವ​ದೆ​ಹ​ಲಿ[ಆ.03]: ದೂರ​ಸಂಪರ್ಕ ಕ್ಷೇತ್ರದ ದೈತ್ಯ ಸಂಸ್ಥೆ ಏರ್‌​ಟೆಲ್‌ 2020ರ ಮಾರ್ಚ್‌​ನಿಂದ ದೇಶಾ​ದ್ಯಂತ ತನ್ನೆಲ್ಲಾ 3ಜಿ ನೆಟ್‌​ವರ್ಕ್‌ ಸ್ಥಗಿ​ತ​ಗೊ​ಳಿ​ಸು​ವು​ದಾಗಿ ಶುಕ್ರ​ವಾರ ಹೇಳಿದೆ.

ಫೈಬರ್‌ ಕೇಬಲ್‌ ಅಳ​ವ​ಡಿಕೆ ಮೂಲಕ ಸೌಲಭ್ಯದ ಗುಣ​ಮಟ್ಟ ಹೆಚ್ಚ​ಳಕ್ಕೆ ಮುಂದಾ​ಗಿ​ದ್ದೇವೆ. ಇದ​ರೊಂದಿಗೆ ಸರಾ​ಸರಿ ಬಳ​ಕೆ​ದಾ​ರರ ನಿರೀ​ಕ್ಷಿತ ಗುಣ​ಮಟ್ಟಹಾಗೂ ಕೈಗಾ​ರಿ​ಕೆ​ಗ​ಳ ದೂರ​ಗಾಮಿ ಸಂಪ​ರ್ಕದ ಕಾರ್ಯ​ಸಾ​ಧ್ಯ​ತೆ​ಯನ್ನೂ ತಲು​ಪಲು ಮುಂದಾ​ಗಿ​ದ್ದೇವೆ. ಈಗಾ​ಗಲೇ 3ಜಿ ತರಂಗಾಂತರ ಸೇವೆ ಸ್ಥಗಿತ ಪ್ರಕ್ರಿಯೆ ಚಾಲ​ನೆ​ಯ​ಲ್ಲಿದ್ದು, ಪ್ರಸ್ತುತ ನಮ್ಮಲ್ಲಿ 2ಜಿ ಮತ್ತು 4ಜಿ ತರಂಗಾಂತರ ಸೇವೆ ಮಾತ್ರ ಲಭ್ಯ​ವಿ​ರ​ಲಿದೆ.

ಪ್ರಸ್ತುತ ಏರ್‌​ಟೆಲ್‌ 8.4 ಕೋಟಿ 4ಜಿ ಗ್ರಾಹ​ಕರನ್ನು ಹೊಂದಿದೆ.120 ಕೋಟಿ ಡಾಟಾ ಸೇವಾ ಗ್ರಾಹ​ರಿ​ದ್ದಾರೆ ಎಂದು ಭಾರತ ಮತ್ತು ದಕ್ಷಿಣ ಏಷ್ಯಾ ಸಿಇಒ ಗೋಪಾಲ ವಿಟ್ಟಲ್‌ ತಿಳಿ​ಸಿ​ದ್ದಾ​ರೆ.

Latest Videos
Follow Us:
Download App:
  • android
  • ios