Asianet Suvarna News Asianet Suvarna News

ಬೆಂಗಳೂರು ಜನತೆಗೆ ಇನ್ನು 6 ತಿಂಗಳಲ್ಲಿ ಗುಡ್ ನ್ಯೂಸ್

ಗೋವಿಂದರಾಜನಗರ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಇಂದಿನಿಂದ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ. ಇದೇ ಮಾದರಿಯಲ್ಲಿ ಬಿಬಿಎಂಪಿಯ ಇತರೆ ಎಲ್ಲ ವಾರ್ಡುಗಳಲ್ಲೂ ಇನ್ನು ಆರು ತಿಂಗಳಲ್ಲಿ ಉಚಿತ ವೈಫೈ ಸೌಲಭ್ಯ - ಜಿ. ಪರಮೇಶ್ವರ್ 

Bengaluru Will Get Free Wi-Fi Across 709 Sq Km Of City In Just Six Months Claims   Deputy CM
Author
Bengaluru, First Published Sep 24, 2018, 5:38 PM IST
  • Facebook
  • Twitter
  • Whatsapp

ಬೆಂಗಳೂರು[ಸೆ.24]: ನಗರದಾದ್ಯಂತ ಆರು ತಿಂಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಗೋವಿಂದರಾಜನಗರ ವಾರ್ಡ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಬಿಬಿಎಂಪಿ ಪಾಲಿಕೆ ಸೌಧ ಹಾಗೂ ಶಕ್ತಿ ಸೌಧ ಕಟ್ಟಡ, ಅಶ್ವಾರೂಢ ಕೆಂಪೇಗೌಡ ಪ್ರತಿಮೆ, ಅಟಲ್‌ಜೀ ಕ್ರೀಡಾ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗೋವಿಂದರಾಜನಗರ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಇಂದಿನಿಂದ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ. ಇದೇ ಮಾದರಿಯಲ್ಲಿ ಬಿಬಿಎಂಪಿಯ ಇತರೆ ಎಲ್ಲ ವಾರ್ಡುಗಳಲ್ಲೂ ಇನ್ನು ಆರು ತಿಂಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಹೈಕೋರ್ಟ್ ಆದೇಶದಂತೆ ನಗರದ ಸೌಂದರ್ಯ ಹಾಳು ಮಾಡುತ್ತಿದ್ದ ಫ್ಲೆಕ್ಸ್ , ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಸೋಮವಾರದೊಳಗೆ ಪೂರ್ಣಗೊಳ್ಳಲಿದೆ. ನಿರಂತರವಾಗಿ ರಸ್ತೆಗುಂಡಿ ಸಮಸ್ಯೆಗೆ ಪರಿಹಾರವಾಗಿ ಹಂತಹಂತವಾಗಿ ನಗರದ ಎಲ್ಲ ರಸ್ತೆಗಳನ್ನೂ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಗೋವಿಂದರಾಜ ನಗರದಲ್ಲಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ವಿ.ಸೋಮಣ್ಣ ಮಾಡಿದ ಮನವಿಗೆ ಸ್ಪಂದಿಸಿದ ಸಚಿವ ಪರಮೇಶ್ವರ್, ಕೂಡಲೇ ಆಸ್ಪತ್ರೆ ಮಂಜೂರು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ  ಸ್ವಾಮೀಜಿ, ಮೇಯರ್ ಆರ್.ಸಂಪತ್‌ರಾಜ್, ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Bengaluru Will Get Free Wi-Fi Across 709 Sq Km Of City In Just Six Months Claims   Deputy CM

ತೆರಿಗೆ ವಸೂಲಿ ಮಾಡಲು ಕ್ರಮ
ತೆರಿಗೆ ವಸೂಲು ಮಾಡದಿದ್ದರೆ ಕ್ರಮ ತೆರಿಗೆ ಸೋರಿಕೆ ತಡೆದು ಬಿಬಿಎಂಪಿಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಅಧಿಕಾರಿಗಳು ತೆರಿಗೆ ವಸೂಲು ಮಾಡಲು ವಿಫಲವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಎಚ್ಚರಿಕೆ ನೀಡಿದರು.

ಅಧಿಕಾರಿಗಳು ತೆರಿಗೆ ವಸೂಲು ಕಾರ್ಯವನ್ನು ಚುರುಕುಗೊಳಿಸಬೇಕು. ಬಾಕಿ ಇರುವ ತೆರಿಗೆ ಜತೆಗೆ, ಸ್ವಯಂ ಘೋಷಿತ ತೆರಿಗೆದಾರರ ಕಟ್ಟಡಗಳನ್ನು ಪರಿಶೀಲಿಸಿ ಕಟ್ಟಡದ ವಿಸ್ತೀರ್ಣಕ್ಕನುಗುಣವಾಗಿ ತೆರಿಗೆ ವಸೂಲಿ ಮಾಡಬೇಕು. ಇದಕ್ಕಾಗಿ ಬಿಬಿಎಂಪಿ ಈಗಾಗಲೇ ಟೋಟಲ್ ಸ್ಟೇಷನ್ ಸರ್ವೇ ಕಾರ್ಯ ನಡೆಸುತ್ತಿದೆ. ಈ ವರ್ಷ 2500 ಕೋಟಿ ರು.ಗಳಿಗೂ ಹೆಚ್ಚು ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕಟ್ಟುನಿಟ್ಟಾಗಿ ವಸೂಲಿ ಕಾರ್ಯ ಕೈಗೊಳ್ಳಬೇಕು. ಸಂಪನ್ಮೂಲ ಕ್ರೂಢಿಕರಣಕ್ಕೂ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಫಲವಾದರೆ ಅಧಿಕಾರಿಗಳ ವಿರುದಟಛಿ ಕ್ರಮ ಅನುವಾರ್ಯವಾಗಲಿದೆ ಎಂದರು.

ನಗರದಲ್ಲಿ ಆಫ್ಟಿಕಲ್ ಫೈಬರ್ ಕೇಬಲ್‌ಅನ್ನು ಎಲ್ಲೆಂದರಲ್ಲಿ ಅನಧಿಕೃತವಾಗಿ ಹಾಕಲಾಗಿತ್ತು. ಶೇ.90ರಷ್ಟು ಅನಧಿಕೃತ ಕೇಬಲ್‌ಗಳೇ ಇದ್ದವು. ಅವುಗಳನ್ನು ಬಿಗಿ ಕ್ರಮದ ಮೂಲಕ ಶೇ.90ರಷ್ಟು ತೆರವುಗೊಳಿಸಲಾಗಿದೆ. ಇನ್ನು ಮುಂದೆ ಯಾವುದೇ ಕೇಬಲ್ ಆಪರೇಟರ್‌ಗಳು, ಟೆಲಿಕಾಂ ಕಂಪನಿಗಳು ಒಎಫ್‌ಸಿ ಕೇಬಲ್ ಅಳವಡಿಸಬೇಕಾದರೆ ಬಿಬಿಎಂಪಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಒಂದು ವೇಳೆ ಅನಧಿಕೃತವಾಗಿ ಕೇಬಲ್ ಅಳವಡಿಸಿದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
 

Follow Us:
Download App:
  • android
  • ios