ಬೆಂಗಳೂರಿನ ನೆಹರೂ ಸಂಶೋಧನಾ ಕೇಂದ್ರ ವಿಶ್ವದಲ್ಲೇ ಟಾಪ್‌ 7| ನೇಚರ್‌’ ನಿಯತಕಾಲಿಕೆ ವಿಶ್ವದ ಅಗ್ರ ವಿಜ್ಞಾನ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿದೆ

ಬೆಂಗಳೂರು[ಜೂ.22]: ವಿಶ್ವದ ಅಗ್ರ 10 ವಿಜ್ಞಾನ ಸಂಸ್ಥೆಗಳ ಪೈಕಿ ಬೆಂಗಳೂರಿನ ಜವಾಹರಲಾಲ್‌ ನಹರು ಸೆಂಟರ್‌ ಫಾರ್‌ ಅಡ್ವಾನ್ಸ್ಡ್ ಸೈಂಟಿಫಿಕ್‌ ರಿಸರ್ಚ್ ಸಂಸ್ಥೆ 7ನೇ ಸ್ಥಾನ ಪಡೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜ್ಞಾನ ಲೇಖನಗಳನ್ನು ಪ್ರಕಟಿಸುವ ‘ನೇಚರ್‌’ ನಿಯತಕಾಲಿಕೆ ವಿಶ್ವದ ಅಗ್ರ ವಿಜ್ಞಾನ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಅಮೆರಿಕದ 5, ಆಸ್ಪ್ರೇಲಿಯಾ, ಇಸ್ರೇಲ್‌, ಜಪಾನ್‌, ಸ್ವಿಜರ್ಲೆಂಡ್‌ನ ತಲಾ ಒಂದು ಸಂಸ್ಥೆಗಳು ಸ್ಥಾನ ಪಡೆದುಕೊಂಡಿವೆ.

ಈ ಮುನ್ನ ಭಾರೀ ಬಜೆಟ್‌, ದೊಡ್ಡ ಗಾತ್ರದ ಸಂಸ್ಥೆಗಳು ಮತ್ತು ಅಧಿಕ ಮಾನವಶಕ್ತಿಯನ್ನು ಹೊಂದಿವ ಸಂಸ್ಥೆಗಳಿಗೆ ಶ್ರೇಯಾಂಕ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನೂ ಸಹ ಪರಿಗಣಿಸಲಾಗಿದೆ. ಹೀಗಾಗಿ ಸಣ್ಣ ಸಂಸ್ಥೆಯಾಗಿದ್ದರೂ ಜವಾಹರಲಾಲ್‌ ನೆಹರು ಸೆಂಟರ್‌ ಅನ್ನು ಪರಿಗಣಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.