ವಿಶ್ವದ ದುಬಾರಿ 12 ಕೋಟಿಯ ಹರ್ಲೆ ಡೇವಿಡ್ಸನ್ ಬೈಕ್‌ನಲ್ಲೇನಿದೆ ವಿಶೇಷ?

At Rs 12 crore, gold-plated and diamond-studded Harley becomes world's costliest bike
Highlights

ವಿಶ್ವದ ಅತ್ಯಂತ ದುಬಾರಿ ಬೈಕ್ ಎಂದರೆ ಹರ್ಲೆ ಡೇವಿಡ್ಸನ್ ಬ್ಲೂ ಎಡಿಶನ್ ಬೈಕ್. ಇದರ ಬೆಲೆ 12 ಕೋಟಿ ರೂಪಾಯಿ. ಇಷ್ಟು ದುಬಾರಿ ಬೈಕ್‌ನ ವಿಶೇಷತೆ ಏನು? ಈ ಬೈಕ್ ಯಾರ ಬಳಿ ಇದೆ. ಇಲ್ಲಿದೆ ವಿವರ.

ಬೆಂಗಳೂರು(ಜು.09): ವಿಶ್ವದ ಅತ್ಯಂತ ದುಬಾರಿ ಬೈಕ್. ಇದರ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಈ ಬೈಕ್‌‌ನಲ್ಲಿ ಗೋಲ್ಡ್ ಹಾಗೂ ಡೈಮಂಡ್‌ಗಳನ್ನ ಅಳವಡಿಸಲಾಗಿದೆ. ಹರ್ಲೆ ಡೇವಿಡ್ಸನ್ ಸಂಸ್ಥೆಯ ತಯಾರಿಸಿರು ಬ್ಲೂ ಎಡಿಶನ್ ಬೈಕ್ ವಿಶ್ವದಲ್ಲಿರೋದು ಒಂದೇ ಬೈಕ್. 

ಹರ್ಲೆ ಡೇವಿಡ್ಸನ್ ಬ್ಲೂ ಎಡಿಶನ್ ಪೊಡಕ್ಷನ್ ನಂಬರ್ ಕೇವಲ ಒಂದು. ಈ ಬೈಕ್ ವಿನ್ಯಾಸಕ್ಕಾಗಿ 2500 ಗಂಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಒಂದು ಬೈಕ್ ತಯಾರಿಕೆಗೆ ಹರ್ಲೆ ಡೇವಿಡ್ಸನ್ 1 ವರ್ಷಗಳ ಕಾಲ ತೆಗೆದುಕೊಂಡಿದೆ.

ಬೈಕ್‌ನ ಕೆಲ ಭಾಗಗಳಿಗೆ ಚಿನ್ನ ಲೇಪನ ಹಾಕಲಾಗಿದೆ. ಜೊತೆಗೆ 360 ಡೈಮಂಡ್ ಸ್ಟೋನ್‌ಗಳನ್ನ ಬಳಸಲಾಗಿದೆ. ಹರ್ಲೆ ಡೇವಿಡ್ಸನ್ ಅವರ ಬ್ಲೂ ಎಡಿಶನ್ ಬೈಕ್ ಸ್ವಿಟ್ಜರ್‌ಲೆಂಡ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.

ಅಷ್ಟಕ್ಕೂ ಈ ಬೈಕ್ ನಿರ್ಮಾಣ ಮಾಡಿರುವುದು ಮಾರಾಟಕ್ಕಲ್ಲ. ಸ್ವಿಟ್ಜರ್‌ಲೆಂಡ್‌ನ ಖ್ಯಾತ ಬುಚರರ್ ವಾಚ್ ಕಂಪೆನಿಯ ಬ್ಲೂ ವಾಚ್ ಪ್ರಚಾರಕ್ಕಾಗಿ ಈ ಬೈಕ್ ತಯಾರಿಸಲಾಗಿದೆ. ವಾಚ್ ಕಂಪೆನಿಯ ಸೂಚನೆ ಮೇರೆಗೆ ಹರ್ಲೆ ಡೇವಿಡ್ಸನ್ ಸಂಸ್ಥೆ ಈ ಬೈಕ್ ತಯಾರಿಸಿದೆ.


 

loader