Asianet Suvarna News Asianet Suvarna News

ಜಿಮ್‌: ಹೊಸ ತಂತ್ರಜ್ಞಾನ, ಆವಿಷ್ಕಾರಗಳ ಪ್ರದರ್ಶನಕ್ಕೆ ನಿರಾಸಕ್ತಿ

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಂದೇ ಪ್ರದರ್ಶನ ಹಾಲ್‌ನಲ್ಲಿ ಎರಡನೇ ದಿನವೂ ಮಳಿಗೆಗಳು ಖಾಲಿ ಖಾಲಿ

Apathy to Display of New Technology and Inventions at GIM in Bengaluru grg
Author
First Published Nov 4, 2022, 9:45 AM IST

ಬೆಂಗಳೂರು(ನ.04): ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಪ್ರದರ್ಶನಕ್ಕೆ ಹೆಚ್ಚಿನ ಕಂಪೆನಿಗಳು ಆಸಕ್ತಿ ತೋರಿಲ್ಲ. ಪರಿಣಾಮ ವ್ಯವಸ್ಥೆ ಮಾಡಿರುವ ಒಂದೇ ಪ್ರದರ್ಶನ ಹಾಲ್‌ನಲ್ಲಿ ಎರಡನೇ ದಿನವೂ ಹಲವು ಮಳಿಗೆಗಳು ಖಾಲಿ ಇದ್ದವು. ಪ್ರದರ್ಶನ ಮಳಿಗೆಯಲ್ಲಿನ ಬಹುತೇಕ ಸ್ಟಾಲ್‌ಗಳು ತಿಂಡಿ-ತಿನಿಸಿನ ಉತ್ಪನ್ನಗಳು, ಪೀಠೋಪಕರಣ, ಬಟ್ಟೆ ಉತ್ಪನ್ನಗಳ ಪ್ರದರ್ಶನಕ್ಕೇ ಸೀಮಿತಗೊಂಡಿವೆ. ರಿಯಲನ್ಸ್‌, ಟಾಟಾ ಸಮೂಹದಂತಹ ಪ್ರಮುಖ ಕಂಪೆನಿಗಳ ಮಳಿಗೆಗಳು ಪ್ರದರ್ಶನಗೊಂಡಿಲ್ಲ. ಇನ್ನು ಹೊಸ ಸ್ಟಾರ್ಚ್‌ ಅಪ್‌, ಆವಿಷ್ಕಾರಗಳ ಪ್ರದರ್ಶನದ ಸಂಖ್ಯೆಯೂ ಕಡಿಮೆಯಿದೆ.

ಇದೆಲ್ಲದರ ಜತೆಗೆ ಸಮಾವೇಶದ ಮೊದಲ ಹಾಗೂ ಎರಡನೇ ದಿನವೂ ಮಳೆ ಸುರಿದಿದ್ದರಿಂದ ಪ್ರದರ್ಶನ ಮಳಿಗೆಗಳಿಗೆ ಲಗ್ಗೆ ಇಡುವ ಆಸಕ್ತ ಸಂಖ್ಯೆಯೂ ಕ್ಷೀಣಿಸಿದೆ ಎಂದು ಪ್ರದರ್ಶಕರು ಹೇಳಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದ ಮೊದಲ ದಿನ ಭರ್ಜರಿ ಹೂಡಿಕೆ ಒಡಂಬಡಳಿಕೆಗಳ ಘೋಷಣೆಯಾದರೂ ಪ್ರದರ್ಶನ ಮಳಿಗೆಗಳು ಜನರನ್ನು ಸೆಳೆಯಲು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಒಂದೇ ಪ್ರದರ್ಶನ ಹಾಲ್‌ನಲ್ಲಿ ಹಲವು ಮಳಿಗೆಗಳು ಖಾಲಿ ಇವೆ. ಇನ್ನು ತಾತ್ಕಾಲಿಕ ವ್ಯವಸ್ಥೆ ಮಾಡಿರುವ ಪ್ರದರ್ಶನ ಹಾಲ್‌ನ ಮುಖ್ಯದ್ವಾರದ ರೂಫ್‌ ಮಳೆಯಿಂದಾಗಿ ಕುಸಿದುಬಿದ್ದು ಗುರುವಾರ ಅವಾಂತರ ಸೃಷ್ಟಿಯಾಗಿತ್ತು.

Invest Karnataka 2022: ಮೊದಲ ದಿನವೇ ದಾಖಲೆಯ ₹7.6 ಲಕ್ಷ ಕೋಟಿ ಹೂಡಿಕೆ!

ಗಮನ ಸೆಳೆದ ಮಳಿಗೆಗಳು:

ಇದರ ಹೊರತಾಗಿಯೂ ನಾಡಿನ ವಸ್ತ್ರ ಪರಂಪರೆ ಬಿಂಬಿಸುವ ವಸ್ತ್ರ ಮಳಿಗೆಗಳು ಗಮನ ಸೆಳೆದವು. ಉಡುಪಿ ಸೀರೆ, ಇಳಕಲ್‌ ಸೀರೆ, ಮೊಳಕಾಲ್ಮೂರು ಸೀರೆಗಳು ನೋಡುಗರನ್ನು ಆಕರ್ಷಿಸಿದವು. ತೈವಾನ್‌ ಮೂಲದ ಎಸ್‌ಜಿ ಕಂಪೆನಿ ಪ್ರದರ್ಶಿಸಿರುವ ಪೇಪರ್‌ ಬಾಟಲ್‌, ಪೇಪರ್‌ ಟ್ಯೂಬ್‌, ಹೈಬ್ರಿಡ್‌ ವೆಹಿಕಲ್‌ ತಂತ್ರಜ್ಞಾನ, ಕರ್ನಾಟಕ ವೈನ್‌ ಬೋರ್ಡ್‌ನ ವಿವಿಧ ವೈನ್‌ ಉತ್ಪನ್ನಗಳು, ಮೈಸೂರು ಸ್ಯಾಂಡಲ್‌ ಸೋಪ್‌ನ ಉತ್ಪನ್ನಗಳು, ನಂದಿನಿ ಉತ್ಪನ್ನಗಳು ಸೇರಿದಂತೆ ಕೆಲ ಪ್ರದರ್ಶನ ಮಳಿಗೆಗಳಲ್ಲಿನ ಉತ್ಪನ್ನಗಳು ಜನರನ್ನು ಆಕರ್ಷಿಸಿದವು.
 

Follow Us:
Download App:
  • android
  • ios