ಜೆಲ್ಲೀಬೀನ್, ಕಿಟ್‌ಕ್ಯಾಟ್, ಲಾಲಿಪಾಪ್, ಮಾರ್ಸ್‌ಮೆಲ್ಲೋ, ನೌಗಾಟ್ ಹೀಗೆ ಹೆಸರು ಕೇಳಿದ ತಕ್ಷಣ ಇದು ಆಂಡ್ರಾಯ್ಡ್ ವರ್ಷನ್‌ಗಳು ಎಂದು ಥಟ್ಟನೆ ಗೊತ್ತಾಗಿ ಬಿಡುತ್ತದೆ. ಮೊದಲಿನಿಂದಲೂ ಹಣ್ಣುಗಳ ಹೆಸರನ್ನೇ ಇಟ್ಟುಕೊಂಡು ಅಪ್‌'ಡೇಟ್ ವರ್ಷನ್‌ಗಳನ್ನು ನೀಡುತ್ತಾ ಬಂದ ಆಂಡ್ರಾಯ್ಡ್ ಇದೀಗ ಅದೇ ಮಾದರಿಯಲ್ಲಿ ಮುಂದೆ ಸಾಗಿ ಭಾರತದಲ್ಲಿ ‘ಓರಿಯೋ’ ಎನ್ನುವ ಲೆಟೆಸ್ಟ್ ಅಪ್‌ಡೇಟೆಡ್ ವರ್ಷನ್ ಅನ್ನು ಹೊರತರಲು ಸಿದ್ಧವಾಗಿದೆ.

ಬೆಂಗಳೂರು (ಜ.04): ಜೆಲ್ಲೀಬೀನ್, ಕಿಟ್‌ಕ್ಯಾಟ್, ಲಾಲಿಪಾಪ್, ಮಾರ್ಸ್‌ಮೆಲ್ಲೋ, ನೌಗಾಟ್ ಹೀಗೆ ಹೆಸರು ಕೇಳಿದ ತಕ್ಷಣ ಇದು ಆಂಡ್ರಾಯ್ಡ್ ವರ್ಷನ್‌ಗಳು ಎಂದು ಥಟ್ಟನೆ ಗೊತ್ತಾಗಿ ಬಿಡುತ್ತದೆ. ಮೊದಲಿನಿಂದಲೂ ಹಣ್ಣುಗಳ ಹೆಸರನ್ನೇ ಇಟ್ಟುಕೊಂಡು ಅಪ್‌'ಡೇಟ್ ವರ್ಷನ್‌ಗಳನ್ನು ನೀಡುತ್ತಾ ಬಂದ ಆಂಡ್ರಾಯ್ಡ್ ಇದೀಗ ಅದೇ ಮಾದರಿಯಲ್ಲಿ ಮುಂದೆ ಸಾಗಿ ಭಾರತದಲ್ಲಿ ‘ಓರಿಯೋ’ ಎನ್ನುವ ಲೆಟೆಸ್ಟ್ ಅಪ್‌ಡೇಟೆಡ್ ವರ್ಷನ್ ಅನ್ನು ಹೊರತರಲು ಸಿದ್ಧವಾಗಿದೆ.

ಓರಿಯೋ (ಗೋ ಎಡಿಷನ್) 8.1 ಎನ್ನುವ ಹೆಸರಿನಲ್ಲಿ ಗಣರಾಜ್ಯೋತ್ಸವದಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿರುವ ಹೊಸ ವರ್ಷನ್‌ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮುಖ್ಯವಾಗಿ ಇದು 1 ಜಿ.ಬಿ.ಗಿಂತ ಅಧಿಕ ರ್ಯಾಮ್ ಹೊಂದಿರುವ ಮೊಬೈಲ್‌'ಗಳಿಗೆ ಮಾತ್ರ ಸಪೋರ್ಟ್ ಮಾಡುತ್ತದೆ. ಇದಕ್ಕಿಂತ ಕಡಿಮೆ ಸಾಮರ್ಥ್ಯದ ಮೊಬೈಲ್‌'ಗಳಿಗೆ ಈ ಸೇವೆ ಲಭ್ಯವಿಲ್ಲ. ಗೋ ಎಡಿಷನ್ ಎಂದು ಇನ್ನೊಂದು ಶಿರ್ಷಿಕೆ ಹೊತ್ತಿರುವ ಇದು ಯೂಟ್ಯೂಬ್ ಗೋ, ಗೂಗಲ್ ಗೋ, ಗೂಗಲ್ ಮ್ಯಾಪ್ಸ್ ಗೋ. ಮೊದಲಾದ ಅತ್ಯಾಧುನಿಕ ಸೇವೆಗಳನ್ನು ಸಮರ್ಥವಾಗಿ ಒದಗಿಸುವ ಸಾಮರ್ಥ್ಯ ಹೊಂದಿದೆ. ಜನವರಿ 26 ಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿರುವ ಇದರ ಹಕ್ಕು ಸ್ವಾಮ್ಯತೆಯನ್ನು ಮೊದಲಿಗೆ ಮೈಕ್ರೋಮ್ಯಾಕ್ಸ್ ಕಂಪನಿ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆಯಾದದರೂ ಈ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ.

ಹೊಸ ವರ್ಷನ್‌'ನ ಹಕ್ಕು ಪಡೆಯಬೇಕು ಎಂದು ಈಗಾಗಲೇ ಸಾಕಷ್ಟು ಕಂಪನಿಗಳು ಮುಂದೆ ಬಂದಿದ್ದು ಇದರಲ್ಲಿ ಮೈಕ್ರೋಮ್ಯಾಕ್ಸ್ ಮುಂದಿನ ಸಾಲಿನಲ್ಲಿ ಇದೆ ಎನ್ನುವುದಷ್ಟೇ ಸದ್ಯಕ್ಕೆ ದೊರೆತಿರುವ ಮಾಹಿತಿ. ಅತ್ಯಾಕರ್ಷಕ ಫೀಚರ್‌'ಗಳು ಮೋರ್ ಎಫೆಕ್ಟಿವ್ ಮಲ್ಟಿ ಟಾಸ್ಕಿಂಗ್, ಟೈಮ್ ಸೇವರ್, ಪವರ್ ಕ್ವಾಲಿಟಿ, ಕ್ಲ್ಯಾರಿಟಿ ವಿಡಿಯೋ, ಮೋರ್ ಇಮೋಜಿಸ್ ಹೀಗೆ ಹಲವಾರು ಅತ್ಯಾಕರ್ಷಕ ಫೀಚರ್‌'ಗಳನ್ನು ಹೊತ್ತು ತರುತ್ತಿರುವ ಓರಿಯೋ ವರ್ಸನ್ ಮೊಬೈಲ್ ಪ್ರಿಯರಿಗೆ ಹೊಸ ಆಯ್ಕೆಯಾಗಿದೆ.

ಏನೆಲ್ಲಾ ವಿಶೇಷಗಳಿವೆ?
ವೈರ್‌ಲೆಸ್ ಆ್ಯಂಡ್ ಬ್ಲೂಟೂತ್ ಬ್ಯಾಟರಿ ಹಿಂದೆ ವೈರ್‌ಲೆಸ್ ಬ್ಯಾಟರಿ ಬಂದಿದ್ದು ಗೊತ್ತೇ ಇದೆ. ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬ್ಲೂಟೂತ್ ಮೂಲಕ ಬ್ಯಾಟರಿ ಪರ್ಸೆಂಟೇಜ್ ಲೆಕ್ಕಾಚಾರ ಮಾಡುವ ಹೊಸ ಅವಕಾಶವನ್ನೂ ಇದರಲ್ಲಿ ಒದಗಿಸಲಾಗಿದೆ. ಸೇಫರ್ ಬ್ರೌಸರ್ ಅಂಡ್ ಹೈ ಸೆಕ್ಯುರಿಟಿ ಈಗಾಗಲೇ ಫಿಂಗರ್‌ಪ್ರಿಂಟ್ ಸೆಕ್ಯುರಿಟಿ ಹೆಚ್ಚಿನ ಎಲ್ಲಾ ಫೋನ್‌ಗಳಲ್ಲಿಯೂ ಇದೆ. ಆದರೆ ಈ ವರ್ಸನ್‌ನಲ್ಲಿ ಸೇಫರ್ ಬ್ರೌಸರ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೈರ್‌ಲೆಸ್ ಫ್ರೀ ಬ್ರೌಸಿಂಗ್‌'ಗೆ ಒತ್ತು ಕೊಡಲಾಗಿದೆ.