ಏರ್‌ಟೆಲ್ 399 ಪೋಸ್ಟ್ ಪೇಯ್ಡ್ ಪ್ಲ್ಯಾನ್ ಚೇಂಜ್ ಆಗಿದ್ದು ಗೊತ್ತಲ್ವಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 7:08 PM IST
Airtel revises its Rs 399 postpaid plan, offers 20GB additional data
Highlights

ಏರ್‌ಟೆಲ್ ಪೋಸ್ಟ್ ಪೇಯ್ಡ್ ನಿಂದ ಭರ್ಜರಿ ಆಫರ್! 399 ರೂ. ಪ್ಲ್ಯಾನ್‌ನಲ್ಲಿ ಭಾರೀ ಬದಲಾವಣೆ! ಏರ್‌ಟೆಲ್‌ನಿಂದ 20 ಜಿಬಿ ಅಧಿಕ ಉಚಿತ ಡಾಟಾ  
   

ಬೆಂಗಳೂರು(ಆ.7): ದೇಶದ ಪ್ರಸಿದ್ಧ ಟೆಲಿಕಾಂ ಸಂಸ್ಥೆ ಏರ್‌ಟೆಲ್ ತನ್ನ 399 ರೂ ಪೋಸ್ಟ್ ಪೇಯ್ಡ್ ಪ್ಲ್ಯಾನ್‌ನಲ್ಲಿ ಭಾರೀ ಬದಲಾವಣೆ ತಂದಿದೆ. ಈ ಮೊದಲು 399 ರೂ. ಗೆ ತಿಂಗಳಿಗೆ 20 ಜಿಬಿ ಡಾಟಾ, ಅನಿಯಮಿತ ಕರೆ, 100 ಉಚಿತ ಎಸ್‌ಎಂಎಸ್ ನೀಡಲಾಗುತ್ತಿತ್ತು. ಇದೀಗ 20 ಜಿಬಿ ಅಧಿಕ ಡಾಟಾ ನೀಡಲು ಏರ್‌ಟೆಲ್ ಮುಂದಾಗಿದೆ.

ಆದರೆ ಈ ಪ್ಲ್ಯಾನ್ ನಲ್ಲಿ ಅಧಿಕ 20 ಜಿಬಿ ಡಾಟಾ ತಿಂಗಳಿಗೋ ಅಥವಾ ವರ್ಷಕ್ಕೋ ಎಂಬುದನ್ನು ಏರ್‌ಟೆಲ್ ಇನ್ನೂ ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಇದು ತಿಂಗಳ ಯೋಜನೆಯಾದರೆ ಒಟ್ಟು 40 ಜಿಬಿ ಡಾಟಾ ಮತ್ತು ವರ್ಷದ ಯೋಜನೆಯಾದರೆ ವಾರ್ಷಿಕವಾಗಿ ಒಟ್ಟು 20 ಜಿಬಿ ಡಾಟಾ ಉಚಿತವಾಗಿ ಸಿಗಲಿದೆ.

399 ರೂ. ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ ಈ ಮೊದಲು ಏರ್‌ಟೆಲ್ 10 ಜಿಬಿ ಡಾಟಾ ನೀಡುತ್ತಿತ್ತು. ಅದನ್ನು 20 ಜಿಬಿ ಉಚಿತ ಡಾಟಾಗೆ ಏರಿಸಿತ್ತು. ಇದೀಗ 20 ಜಿಬಿ ಅಧಿಕ ಡಾಟಾ ನೀಡುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

loader