ಬೆಂಗಳೂರು (ಜೂ.25): ಟೆಲಿಕಾಂ ಕ್ಷೇತ್ರ ಬಹಳ ಪೈಪೋಟಿಯಿಂದ ಕೂಡಿದೆ.ಇಲ್ಲಿ ದರ ಸಮರ, ಡೇಟಾ ಸಮರಗಳು ಸಾಮಾನ್ಯ. ಟೆಲಿಕಾಂ ಕಂಪನಿಗಳಿಗೆ ಒಂದೆಡೆ ಉತ್ತಮ ನೆಟ್ವರ್ಕ್ ಮತ್ತು ಗುಣಮಟ್ಟದ ಸೇವೆ ನೀಡುವ ಸವಾಲು, ಇನ್ನೊಂದೆಡೆ ಗ್ರಾಹಕರು ಬೇರೆ ಕಡೆಗೆ ಹೋಗದಂತೆ ಹಿಡಿದಿಟ್ಟುಕೊಳ್ಳುವ ಸವಾಲು! ಅದಕ್ಕಾಗಿಯೇ ಅಗ್ಗಾಗೆ ಭರ್ಜರಿ ಆಫರ್‌ಗಳನ್ನು ಪ್ರಕಟಿಸುತ್ತವೆ.

ಟೆಲಿಕಾಂ ದೈತ್ಯ ಏರ್ಟೆಲ್ ಈಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ಪ್ರಕಟಿಸಿದೆ. ₹399 ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ರೀಚಾರ್ಜ್ ಮಾಡೋ ಪ್ರಿಪೇಯ್ಡ್ ಬಳಕೆದಾರರಿಗೆ, ಏರ್ಟೆಲ್ ಉಚಿತವಾಗಿ 20GB ಉಚಿತ ಡೇಟಾ ನೀಡಲಿದೆ. ಆದರೆ ಇದು 4G ಬಳಕೆದಾರರಿಗೆ ಅನ್ವಯವಾಗಲ್ಲ.

ಇದನ್ನೂ ಓದಿ | WhatsApp ಆಗಲಿದೆ ಇನ್ನಷ್ಟು ಇಂಟರೆಸ್ಟಿಂಗ್: ಬರಲಿವೆ ಈ 5 ಫೀಚರ್ಸ್!

ಈ ಲೇಟೆಸ್ಟ್ ಆಫರ್ ಪಡೆಯಬೇಕಾದರೆ, ಬಳಕೆದಾರರು ಏರ್ಟೆಲ್ ವೈಫೈ ಝೋನ್‌ನಲ್ಲಿರಬೇಕು.  ವೈಫೈ ಹಾಟ್ ಸ್ಪಾಟ್ ಸೌಲಭ್ಯವಿರುವ ಏರ್ಟೆಲ್ ವೈಫೈ ಝೋನ್ ಗಳು ಭಾರತದಾದ್ಯಂತ ಸುಮಾರು 500 ಕಡೆಗಳಲ್ಲಿ ಇದೆ. 

ಉಚಿತ ಡೇಟಾ ಪಡೆಯಬೇಕಾದರೆ ಬಳಕೆದಾರರು ವೈ-ಫೈ ಝೋನ್‌ನಲ್ಲಿದ್ದುಕೊಂಡು, ಮೈ ಏರ್ಟೆಲ್ ಆ್ಯಪ್ ಮೂಲಕ ಸಂಪರ್ಕ ಸಾಧಿಸಬಹುದು.