ನವದೆಹಲಿ[ಜೂ.24]: ವಿಶ್ವದಲ್ಲಿ 150 ಕೋಟಿಗೂ ಹೆಚ್ಚು ಜನ ಬಳಸುವ ವಾಟ್ಸಾಪ್‌, ತನ್ನ ಬಳಕೆದಾರರಿಗೆ 5 ಹೊಸ ಲಕ್ಷಣಗಳನ್ನು ಶೀಘ್ರವೇ ಪರಿಚಯಿಸಲು ನಿರ್ಧರಿಸಿದೆ. ಅವುಗಳೆಂದರೆ ಡಾರ್ಕ್ ಮೋಡ್‌, ಹೈಡ್‌ ಆನ್‌ಲೈನ್‌ ಸ್ಟೇಟಸ್‌, ಫುಲ್‌ ಸೈಜ್‌ ಇಮೇಜ್‌, ಕ್ರಾಸ್‌ ಪ್ಲಾಟ್‌ಫಾಮ್‌ರ್‍ ಬ್ಯಾಕಪ್‌, ವಾಟ್ಸಪ್‌ ಪೇ.

ಬಳಕೆದಾರರು ಡಾರ್ಕ್ ಮೋಡ್‌ ಆನ್‌ ಮಾಡಿದರೆ, ಮೊಬೈಲ್‌ ಸ್ಕ್ರೀನ್‌ ಕಪ್ಪು ಮತ್ತು ಬೂದು ಬಣ್ಣದಲ್ಲಿ ಕಾಣಿಸಲಿದೆ. ಚಿಹ್ನೆಗಳು ಮತ್ತು ಶೀರ್ಷಿಕೆಗಳು ಹಸಿರು ಬಣ್ಣದಲ್ಲಿ ಕಾಣಿಸಲಿದ್ದು, ಉಳಿದ ಅಕ್ಷರಗಳು ಬಿಳಿ ಬಣ್ಣದಲ್ಲಿ ಕಾಣಲಿವೆ.

ಹೊಸ ಉದ್ಯಮಕ್ಕೆ ಕೈ ಹಾಕಿದ ಫೇಸ್ಬುಕ್! ನಿಮಗೇನು ಲಾಭ?

ಇನ್ನು ಸ್ಟೇಟಸ್‌ ಅನ್ನು ಸಂಪೂರ್ಣವಾಗಿ ಮರೆ ಮಾಚುವ ಅವಕಾಶ ಒದಗಿಸಲು ನಿರ್ಧರಿಸಿದೆ. ಅಂದರೆ ಬಳಕೆದಾರರು ಆನ್‌ಲೈನ್‌ ಇದ್ದರೂ ಅದನ್ನು ಮರೆಮಾಚುವ ಆಯ್ಕೆ ನೀಡಲಾಗುತ್ತಿದೆ.

ಫುಲ್‌ ಸೈಜ್‌ ಇಮೇಜ್‌ ಮೂಲಕ ಪೂರ್ಣ ರೆಸೊಲ್ಯೂನ್‌ ಫೋಟೋಗಳನ್ನು ಸಹ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಬಹುದಾಗಿದೆ. ನೀವು ಬೇರೆ ಫೋನ್‌ಗೆ ಬದಲಾಗ ಬೇಕಾಗಿ ಬಂದಾಗ, ಕ್ರಾಸ್‌- ಪ್ಲಾಟ್‌ಫಾರ್ಮ್ ಬ್ಯಾಕಪ್‌ ಮೂಲಕ ಇನ್ನು ಮುಂದೆ ವಾಟ್ಸಾಪ್‌ ಚಾಟ್‌ ಅನ್ನು ಗೂಗಲ್‌ ಡ್ರೈವ್‌ ಅಥವಾ ಐಕ್ಲೌಡ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.

ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

ವಾಟ್ಸಪ್‌ ಪರಿಚಯಿಸುತ್ತಿರುವ ಇನ್ನೊಂದು ಲಕ್ಷಣವೆಂದರೆ ವಾಟ್ಸಾಪ್‌ ಪೇ. ಇದರಲ್ಲಿ ಫೋಟೋ ಷೇರ್‌ ಮಾಡಿದಂತೆ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸುಲಭವಾಗಲಿದೆ.