Asianet Suvarna News Asianet Suvarna News

ಆಫರ್'ಗಳನ್ನು ದುಪ್ಪಟ್ಟು ಮಾಡಿದ ಏರ್'ಟೆಲ್

ಈಗಾಗಲೇ ನೀಡುತ್ತಿರುವ 'ವಿ-ಫೈಬರ್'ನೆಟ್ ಆಫರ್'ಅನ್ನು 100 ಎಂಬಿಪಿಎಸ್ ವೇಗದಲ್ಲಿ  ದುಪ್ಪಟ್ಟುಗೊಳಿಸಿದೆ.

Airtel Offers Up to Twice the Data at Same Rental
  • Facebook
  • Twitter
  • Whatsapp

ಮುಂಬೈ(ಮೇ.17): ಬ್ರಾಡ್'ಬ್ಯಾಂಡ್ ಆಫರ್ ನೀಡುತ್ತಿರುವ ಜಿಯೋ 'ಫೈಬರ್ ನೆಟ್' ಆಪರ್ ಪರಿಣಾಮವಾಗಿ ಏರ್'ಟೆಲ್ ಈಗಾಗಲೇ ನೀಡುತ್ತಿರುವ 'ವಿ-ಫೈಬರ್'ನೆಟ್ ಆಫರ್'ಅನ್ನು 100 ಎಂಬಿಪಿಎಸ್ ವೇಗದಲ್ಲಿ  ದುಪ್ಪಟ್ಟುಗೊಳಿಸಿದೆ.

899 ರೂ. ಯೋಜನೆಗೆ 30ರಿಂದ 60 ಜಿಬಿ, 1099 50ರಿಂದ 90 ಜಿಬಿ,1299 ರೂ.75 ರಿಂದ 125 ಜಿಬಿ, 1499 ರೂ.ಗಳಿಗೆ 100ರಿಂದ 160 ಜಿಬಿ, 1799 ರೂ.ಗಳಿಗೆ 220 ಜಿಬಿ'ಗಳಿಗಿಂತ ಹೆಚ್ಚು ಡಾಟಾವನ್ನು ಏರಿಸಿದೆ.  899 ಹಾಗೂ 1099 ಯೋಜನೆಗಳು ಈ ಮೊದಲು  16 ಮತ್ತು 40 ಎಂಬಿಪಿಎಸ್'ಗಳಿದ್ದವು ಈಗ ಅದನ್ನು 100 ಎಂಬಿಪಿಎಸ್'ಗೆ ಏರಿಸಲಾಗಿದೆ.

ಪ್ರಸ್ತುತ ದೆಹಲಿಯಲ್ಲಿ ಯೋಜನೆ ಲಭ್ಯವಾಗಲಿದ್ದು, ನಂತರದ ದಿನಗಳಲ್ಲಿ ಎಲ್ಲ ನಗರಗಳಿಗೆ ವಿಸ್ತರಿಸಲಾಗುತ್ತದೆ. ನೂತನವಾಗಿ ಅಳವಡಿಸಿಕೊಳ್ಳುವವರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಜಿಯೋ ಸಂಸ್ಥೆ ಫೈಬರ್'ನೆಟ್ ಯೋಜನೆಯಡಿ ಈಗಾಗಲೇ 90 ದಿನಗಳ ಕಾಲ 100 ಜಿಬಿ ಉಚಿತ ಡಾಟಾ ಒದಗಿಸಿದೆ.

Follow Us:
Download App:
  • android
  • ios