Asianet Suvarna News Asianet Suvarna News

ಏರ್'ಟೆಲ್'ನಿಂದ 1 ವರ್ಷ ನಿತ್ಯ ಒಂದು ಜಿಬಿ ಉಚಿತ ಇಂಟರ್'ನೆಟ್ ಆಫರ್ ಪಡೆಯುವುದು ಹೇಗೆ ಗೊತ್ತೆ ?

ಈ ಆಫರ್ ಜೊತೆಗೆ ನಿತ್ಯ ಭಾರತದ ಯಾವುದೇ ಸ್ಥಳಕ್ಕೆ ಒಂದು ವರ್ಷದ ತನಕ 400 ನಿಮಿಷ (ವಾರದ ಮಿತಿ 1500 ನಿಮಿಷ)   ಉಚಿತ ಕರೆ ದೊರೆಯಲಿದೆ. ಈ ಮೊಬೈಲ್ ರಿಟೇಲ್ ಮಳಿಗೆಗಳಲ್ಲಿ ಮಾತ್ರ ಲಭ್ಯವಾಗಲಿದೆ.

Airtel  Micromax Join Hands to Offers 1 Year Free 4G Service on Canvas 2
  • Facebook
  • Twitter
  • Whatsapp

ಮುಂಬೈ(ಮೇ.13): ಏರ್'ಟೆಲ್ ನಿತ್ಯ ಒಂದು ವರ್ಷ 1 ಜಿಬಿ 4ಜಿ ಡಾಟಾ ಉಚಿತವಾಗಿ ನೀಡುವ ಆಫರ್ ಪ್ರಕಟಿಸಿದೆ. ಆದರೆ ಇದಕ್ಕಾಗಿ ನೀವು ಮೈಕ್ರೋ'ಮ್ಯಾಕ್ಸ್ ಕ್ಯಾನ್'ವಾಸ್ 2 ಮೊಬೈ'ಲ್ ಅನ್ನು ಖರೀದಿಸಬೇಕು.

11,999 ಬೆಲೆಯ ಮೈಕ್ರೋ'ಮ್ಯಾಕ್ಸ್ ಕ್ಯಾನ್'ವಾಸ್ 2 ಮೊಬೈ'ಲ್ ಅನ್ನು ಖರೀದಿಸಿದರೆ ನಿಮಗೆ ಏಢ ಸಿಮ್ ಜೊತೆಗೆ ಒಂದು ವರ್ಷ 1ಜಿಬಿ 4ಜಿ ಉಚಿತ ಡಾಟಾ ಸಿಗಲಿದೆ.ಇವೆರಡೂ ಕಂಪನಿಗಳು ಒಪ್ಪಂದ ಮಾಡಿಕೊಂಡಿರುವ ಕಾರಣ ಮೈಕ್ರೊ'ಮ್ಯಾಕ್ಸ್ ಮೊಬೈಲ್ ಕೊಂಡ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ.

ಈ ಆಫರ್ ಜೊತೆಗೆ ನಿತ್ಯ ಭಾರತದ ಯಾವುದೇ ಸ್ಥಳಕ್ಕೆ ಒಂದು ವರ್ಷದ ತನಕ 400 ನಿಮಿಷ (ವಾರದ ಮಿತಿ 1500 ನಿಮಿಷ)   ಉಚಿತ ಕರೆ ದೊರೆಯಲಿದೆ. ಈ ಮೊಬೈಲ್ ರಿಟೇಲ್ ಮಳಿಗೆಗಳಲ್ಲಿ ಮಾತ್ರ ಲಭ್ಯವಾಗಲಿದೆ. ಮೈಕ್ರೋ'ಮ್ಯಾಕ್ಸ್ ಕ್ಯಾನ್'ವಾಸ್ 2 ಮೊಬೈಲ್ 11 ಗಂಟೆಗಳವರೆಗೆ ಉಳಿಯುವ 3050 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ,3ಜಿ ರಾಮ್,16ಜಿಬಿ ಇಂಟರ'ನಲ್ ಸ್ಟೋರೇಜ್ ಹಾಗೂ 64 ಜಿಬಿ ಎಕ್ಸ್'ಪೆಂಡಬಲ್ ಮೆಮೊರಿ ಹಾಗೂ ಮೀಡಿಯಾ'ಟೆಕ್ ಕ್ವಾಡ್ ಕೋರ್ ಚಿಪ್'ಸೆಟ್ ಫೀಚರ್'ಗಳಿವೆ. ಮೊಬೈಲ್ 1 ಒಂದು ವರ್ಷದವರೆಗೆ ಸ್ಕ್ರೀನ್ ರೀಪ್ಲೇಸ್'ಮೆಂಟ್ ಹಾಗೂ 30 ದಿನಗಳವರೆಗೂ ಸ್ಮಾರ್ಟ್ ಫೋನ್ ಬದಲಾವಣೆಗೆ ಅವಕಾಶವಿದೆ.

Follow Us:
Download App:
  • android
  • ios