Asianet Suvarna News Asianet Suvarna News

ಏರ್'ಟೆಲ್ ನಿಂದ 19,990ಕ್ಕೆ ಐಪೋನ್ 7 ಮಾರಾಟ.....!

ಈ ಸುದ್ಧಿ ಸುಳ್ಳಲ್ಲ, ಜಿಯೋ ಜಿದ್ದಿಗೆ ಬಿದ್ದ ಏರ್ಟೆಲ್ ಸದ್ಯ ಮಾರುಕಟ್ಟೆಯನ್ನು ಪ್ರವೇಶಿಸಿರುವ 70 ಸಾವಿರ ಮೌಲ್ಯದ ಐಫೋನ್ 7 ಅನ್ನು ಕೇವಲ 19,990 ರೂಗಳಿಗೆ ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. 
ಮಾರುಕಟ್ಟೆಯಲ್ಲಿ ಸ್ಪರ್ಧೇ ಹೆಚ್ಚಾದ ಹಿನ್ನಲೆಯಲ್ಲಿ ಏರ್ಟೆಲ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಕೊಳ್ಳಲು ಈ ಮಾದರಿಯ ಕೊಡುಗೆಯನ್ನು ನೀಡಲು ಮುಂದಾಗಿದೆ. 

airtel iPhone for 19990

ಈ ಸುದ್ಧಿ ಸುಳ್ಳಲ್ಲ, ಜಿಯೋ ಜಿದ್ದಿಗೆ ಬಿದ್ದ ಏರ್ಟೆಲ್ ಸದ್ಯ ಮಾರುಕಟ್ಟೆಯನ್ನು ಪ್ರವೇಶಿಸಿರುವ 70 ಸಾವಿರ ಮೌಲ್ಯದ ಐಫೋನ್ 7 ಅನ್ನು ಕೇವಲ 19,990 ರೂಗಳಿಗೆ ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. 

ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾದ ಹಿನ್ನಲೆಯಲ್ಲಿ ಏರ್ಟೆಲ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಕೊಳ್ಳಲು ಈ ಮಾದರಿಯ ಕೊಡುಗೆಯನ್ನು ನೀಡಲು ಮುಂದಾಗಿದೆ. 

ಹೊಸ ಗ್ರಾಹಕರನ್ನು ಸೆಳೆಯಲು ಈ ಕೊಡುಗೆ ನೀಡಿದ್ದು, ಗ್ರಾಹಕರು 19,990 ನೀಡಿ ಐ ಪೋನ್ 7 ಖರೀದಿಸಿದರೆ, ಏರ್ಟೆಲ್ ಪೋಸ್ಟ್ ಪೇಡ್ ನೊಂದಿಗೆ 12 ತಿಂಗಳು ಉಳಿಯಬೇಕಿದೆ. ಸದ್ಯ ಈ ಕೊಡುಗೆ ನೋಯ್ಡಾ ಮತ್ತು ಕರ್ನಾಟಕದ ವಲಯದ ಗ್ರಾಹಕರಿಗೆ ಮಾತ್ರ ಲಭ್ಯವಿದೆ. 

20 ಸಾವಿರ ಕೊಟ್ಟು ಮೊಬೈಲ್ ಖರೀಸಿದಿದ ಗ್ರಾಹಕರು ಪ್ರತಿ ತಿಂಗಳು ಕನಿಷ್ಠ 1900 ರೂ ಬಿಲ್ ಕಟ್ಟಬೇಕಿದ್ದು, ಇದಕ್ಕೆ ಪ್ರತಿಯಾಗಿ 5 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ. 

ಇದರೊಂದಿಗೆ ಇನ್ನು ಹೆಚ್ಚಿನ ಡೇಟಾ ಬೇಕು ಎನ್ನುವವರು 2499 ಪ್ಲಾನ್ ಖರೀದಿಸ ಬಹುದಾಗಿದ್ದು, ಇದರಲ್ಲಿ 10 ಜಿಬಿ ಡೇಟಾ ಮತ್ತು ಉಚಿತ ಕರೆ ಸೌಲಭ್ಯ ದೊರೆಯಲಿದೆ. ಇದು ಸಾಲುವುದಿಲ್ಲ ಎನ್ನುವವರು 2999 ಪ್ಲಾನ್ ಪಡೆದರೆ 15 ಜಿಬಿ ಡೇಟಾ ಮತ್ತು ಉಚಿತ ಕರೆ ಪಡೆಯಬಹುದಾಗಿದೆ. 

ಒಂದು ಕಡೆ ಮೊಬೈಲ್ ಬಿಲ್ ಕಟ್ಟಿದ ಜೊತೆಗೆ ಪೋನ್ ಸಾಲದ ಕಂತು ಸಹ ಪೂರ್ಣಗೊಳ್ಳಲಿದೆ. ಹೀಗೆ ಮಾಸಿಕ ಕಂತು ಕಟ್ಟಿದರು ಸುಮಾರು 67 ಸಾವಿರ ಹಣವನ್ನು ಕಟ್ಟ ಬೇಕಾಗಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿ ಪುಲ್ ಹಣ ನೀಡಿ ಖರೀದಿಸಿದಕ್ಕಿಂತ ಕಡಿಮೆ ಬೆಲೆಗೆ ಏರ್ ಟೆಲ್ ಮೊಬೈಲ್ ನೀಡುತ್ತಿದೆ.  

Latest Videos
Follow Us:
Download App:
  • android
  • ios