ಮಹಿಳೆಯರಿಗಾಗಿ ನೂತನ ಹೊಂಡಾ ಆಕ್ಟೀವ್ ಐ ಬಿಡುಗಡೆ-ಬೆಲೆ,ಮೈಲೇಜು ಎಷ್ಟು?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 23, Jul 2018, 6:02 PM IST
2018 Honda Activa-i launched at Rs 50,010
Highlights

ಹೊಂಡಾ ಆಕ್ಟೀವಾ ಐ ಸ್ಕೂಟರ್ ಮತ್ತೆ ಬಿಡುಗಡೆಯಾಗಿದೆ. ಈ ಬಾರಿ ಹೊಸ ವಿನ್ಯಾಸ, ಬಣ್ಣ ಹಾಗೂ ಆಕರ್ಷಕ ಬೆಲೆಯಲ್ಲಿ ಆಕ್ಟೀವಾ ಐ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಐ ಸ್ಕೂಟರ್ ಬೆಲೆ ಎಷ್ಟು? ಮೈಲೇಜ್ ಹೇಗಿದೆ? ಇಲ್ಲಿದೆ ವಿವರ.

ಬೆಂಗಳೂರು(ಜು.23): ಭಾರತದ ಜನಪ್ರೀಯ ಸ್ಕೂಟರ್ ಹೊಂಡಾ ಇದೀಗ ನೂತನ ಆಕ್ಟೀವಾ ಐ ಸ್ಕೂಟರ್ ಬಿಡುಗಡೆ ಮಾಡಿದೆ. 2013ರಲ್ಲಿ ಆಕ್ಟೀವಾ ಐ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದೀಗ ಹೊಸ ರೂಪದಲ್ಲಿ ಮತ್ತೆ ಬಿಡುಗಡೆಯಾಗಿದೆ.

ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಿರುವ ಆಕ್ವೀವಾ ಐ ಬೆಲೆ 5010 ರೂಪಾಯಿ(ಎಕ್ಸ್ ಶೋರೂಂ).  ನೂತನ ಆಕ್ಟೀವಾ ಐ, 5 ಬಣ್ಣಗಳಲ್ಲಿ ಲಭ್ಯವಿದೆ. ನೂತನ ಆಕ್ಟೀವಾ ಐ ಸ್ಕೂಟರ್‌ ಫೋರ್ ಇನ್ ಒನ್ ಇಗ್ನಿನೀಶನ್ ಕೀ ಹೊಂದಿದೆ.

109 ಸಿಸಿ ಇಂಜಿನ್ ಹೊಂದಿರು ಆಕ್ಟೀವಾ ಐ, 8 ಹೆಚ್‌ಪಿ ಹಾಗೂ 9ಎನ್ಎಂ ಟಾರ್ಕ್ಯೂ ಹೊಂದಿದೆ.  ಎರಡು ಟ್ಯೂಬ್‌ಲೆಸ್ ಟೈಯರ್ ಅಳವಡಿಸಲಾಗಿದೆ.  ಕಂಪೆನಿ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 60 ಕೀಲೋ ಮೀಟರ್ ಪ್ರಯಾಣಿಸಲಿದೆ. 

ಹಳೇ ಆಕ್ಟೀವಾ ಐ ಹಾಗೂ ನೂತನ ಆಕ್ಟೀವಾ ಐ ಸ್ಕೂಟರ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಮಹಿಳೆಯರಿಗಾಗಿ ಅತ್ಯಾಕರ್ಷವಾಗಿ ನಿರ್ಮಿಸಲಾಗಿರುವ ಆಕ್ಟೀವಾ ಐ ಇತರ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.


ಇದನ್ನು ಓದಿ:ನೂತನ ಹೊಂಡಾ ನವಿ ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?

ಇದನ್ನು ಓದಿ: ಸುಜುಕಿ ಬರ್ಗಮನ್ ಸ್ಕೂಟರ್ ಬಿಡುಗಡೆ-ಆಕ್ಟೀವಾಗೆ ತೀವ್ರ ಪೈಪೋಟಿ!

loader