ನೂತನ ಹೊಂಡಾ ನವಿ ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 21, Jul 2018, 8:00 PM IST
2018 Honda Navi Launched at Rs 44,775
Highlights

ನೂತನ ಹೊಂಡಾ ನವಿ ಸ್ಕೂಟರ್ ಮತ್ತೆ ಪ್ರವೇಶಿಸಿದೆ. ಹಳೇ ನವಿ ಸ್ಕೂಟರ್ ಹಾಗೂ ನೂತನ ನವಿ ಸ್ಕೂಟರ್‌ಗೆ ಇರೋ ವ್ಯತ್ಯಾಸವೇನು? ನೂತನ ಸ್ಕೂಟರ್ ಬೆಲೆ ಎಷ್ಟು? ಇಲ್ಲಿದೆ ವಿವರ

ಬೆಂಗಳೂರು(ಜು.21): ಹೊಂಡಾ ಮೊಟಾರ್ ಸಂಸ್ಥೆ ನೂತನ ನವಿ ಸ್ಕೂಟರ್ ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಬಣ್ಣ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ನೂತನ ನವಿ ಸ್ಕೂಟರ್ ಬಿಡುಗಡೆಯಾಗಿದೆ.

2016ರಲ್ಲಿ ಹೊಂಡಾ ಇದೇ ನವಿ ಸ್ಕೂಟರ್ ಲಾಂಚ್ ಮಾಡಿತ್ತು. ಇದೀಗ 2 ವರ್ಷಗಳ ಬಳಿಕ ಹೊಸ  ವಿನ್ಯಾಸದೊಂದಿಗೆ ಹೊಂಡಾ ನವಿ ಸ್ಕೂಟರ್ ಮತ್ತೆ ರೋಡಿಗಿಳಿಯುತ್ತಿದೆ. ನೂತನ ನವಿ ಸ್ಕೂಟರ್ ಬೆಲೆ 44,775 ರೂಪಾಯಿ(ಎಕ್ಸ್ ಶೋರೂಂ). 

ಹಳೇ ಹಾಗೂ ನೂತನ ನವಿ ಸ್ಕೂಟರ್ ಇಂಜಿನ್‌ನಲ್ಲಿ ಹೆಚ್ಚಿನ ಬದಲಾಣೆ ಇಲ್ಲ. 109 ಸಿಸಿ ಸಿಂಗಲ್ ಸಿಲಿಂಡರ್, 8 ಬಿಹೆಚ್‌ಪಿ ಪವರ್ ಹಾಗೂ 7000 ಆರ್‌ಪಿಎಮ್ ಹೊಂದಿದೆ. ನೂತನ ನವಿ ಸ್ಕೂಟರ್ ಮತ್ತೆರಡು ಹೊಸ ಬಣ್ಣಗಳಲ್ಲೂ ಲಭ್ಯವಿದೆ.

ರೇಂಜ್ ಗ್ರೀನ್ ಹಾಗೂ ಲಡಾಕ್ ಬ್ರೌನ್ ಬಣ್ಣಗಳಲ್ಲಿ ನವಿ ಸ್ಕೂಟರ್ ಲಭ್ಯವಿದೆ. ಈ ಮೂಲಕ ಓಟ್ಟು 6 ಬಣ್ಣಗಳಲ್ಲಿ ನವಿ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ಸ್ಪೋರ್ಟ್ ಲುಕ್ ಜೊತೆ ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರನ್ನ ಮೋಡಿ ಮಾಡಲಿದೆ ಅನ್ನೋ ವಿಶ್ವಾಸ ಹೊಂಡಾ ಸಂಸ್ಥೆಯದ್ದಾಗಿದೆ.

loader