ವಿಜಯಪುರದಲ್ಲಿ ನಡೆದ ವಕ್ಫ್‌ ಅದಾಲತ್‌ನಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಲ್ಲಾ ಮನಸ್ಸು ಮಾಡಿದ್ರೆ ಬಿಜೆಪಿ ಸರ್ಕಾರವನ್ನ ಕೆಡವೋದು ಖಚಿತ ಎಂದು ಹೇಳಿದ್ದಾರೆ.

ವಿಜಯಪುರ (ಅ.7): ಅಲ್ಲಾ ಮನಸ್ಸು ಮಾಡಿದ್ರೆ ಕೇಂದ್ರದ ಬಿಜೆಪಿ ಸರ್ಕಾರವನ್ನ ಉರುಳಿಸೋದು ಯಾವ ದೊಡ್ಡ ಮಾತು. ಅಲ್ಲಾ ಮನಸ್ಸು ಮಾಡಿದ್ರೆ ಕೇಂದ್ರ ಬಿಜೆಪಿ ಸರ್ಕಾರ ಕೆಡವುತ್ತಾನೆ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿದ್ದಾರೆ. ವಿಜಯಪುರದಲ್ಲಿ ನಡೆದ ವಕ್ಫ್‌ ಅದಾಲತ್‌ನಲ್ಲಿ ಭಾಗವಹಿಸಿ ಮಾತನಾಡಿದ ಜಮೀರ್‌, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಚಾರ್ ಸೌ ಪಾರ್‌ ((400ಕ್ಕಿಂತ ಹೆಚ್ಚು ಸೀಟು ಗೆಲ್ಲುವ ಟಾರ್ಗೆಟ್‌) ಅಂತಾ ಇತ್ತು. ಆದರೆ, ಅಲ್ಲಾ ಅವರನ್ನ 400 ದಾಟೋಕೆ ಬಿಡಲಿಲ್ಲ. ಅಲ್ಲಾಮಿಯಾ 240ಕ್ಕೆ ತಂದು ನಿಲ್ಲಿಸಿದ್ದಾನೆ. ಬಿಜೆಪಿ ಅಧಿಕಾರ ಎರಡು ಪಿಲ್ಲರ್ ಮೇಲೆ ನಿಂತಿದೆ. ಆಂಧ್ರ ಸಿಎಂ, ಬಿಹಾರ್ ಸಿಎಂ ಎರಡು ಪಿಲ್ಲರ್. ಒಂದು ಪಿಲ್ಲರ್ ಅಲುಗಾಡಿದರೂ ಬಿಲ್ಡಿಂಗ್ ಬೀಳುತ್ತೆ. ಖುದಾ ಬಯಸಿದ್ರೆ ಏನು ಬೇಕಾದ್ರೂ ಆಗುತ್ತದೆ ಎಂದು ಹಲ್ಲು ಕಡಿಯುತ್ತ ಜಮೀರ್‌ ಭಾಷಣ ಮಾಡಿದ್ದಾರೆ.

ವಕ್ಪ ರದ್ದು ವಿಚಾರದಲ್ಲಿ ಖುದಾ ನೋಡಿಕೊಳ್ತಾನೆ, ಬೇರೆ ದಾರಿ ಇವೆ. ಬಿಜಾಪುರದಲ್ಲಿ ದೊಡ್ಡ ದೊಡ್ಡ ಸೈತಾನ್ (ರಾಕ್ಷಸ) ಇವೆ. ನೀವು ಸೈತಾನಗಳಿಗೆ ಹೆದರಬೇಕಿಲ್ಲ, ಜಮೀರ್ ಕಣ್ಣಲ್ಲಿ ಗುರ್ ಎಂದು ಬೀಳ್ತಾರೆ ಎಂದು ಹೇಳುವ ಮೂಲಕ ಶಾಸಕ ಯತ್ನಾಳ ವಿರುದ್ಧವು ಜಮೀರ್ ವಾಗ್ದಾಳಿ ಮಾಡಿದ್ದಾರೆ.

ವಕ್ಫ್‌ ಬೋರ್ಡ್‌ ಆಸ್ತಿ ಯಾರಪ್ಪನದೂ ಅಲ್ಲ ಮಿಸ್ಟರ್‌ ಯತ್ನಾಳ್‌. ಅದು ದಾನಿಗಳು ಸಮುದಾಯಕ್ಕೆ ಕೊಟ್ಟಿರುವ ದಾನ. ವಕ್ಫ್‌ ಸರ್ಕಾರದಿಂದ ಯಾವ ಆಸ್ತಿಯನ್ನೂ ಪಡೆದಿಲ್ಲ. ಬದಲಿಗೆ ಸರ್ಕಾರಿ ಸಂಸ್ಥೆ ಗಳೇ ವಖ್ಫ್ ಆಸ್ತಿ ಒತ್ತುವರಿ ಮಾಡಿವೆ.ಖಬರಸ್ಥಾನಕ್ಕೆ ಹೊರತು ಪಡಿಸಿ ವಖ್ಫ್ ಬೋರ್ಡ್ ಗೆ ಸರ್ಕಾರ ಜಮೀನು ಕೊಟ್ಟಿಲ್ಲ. ವ್ಯವಸ್ಥಿತ ವಾಗಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಹೋಗಬೇಡಿ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್‌ ಖಾನ್ ಹೇಳಿದ್ದಾರೆ.

ರಾಜ್‌ಕುಮಾರ್ ಮತ್ತು ಪುನೀತ್‌ಗೆ ಊಟ ಬಡಿಸಿದ್ದ ಸಚಿವ ಜಮೀರ್ ಅಹ್ಮದ್; ಫೋಟೋ ವೈರಲ್!

ವಕ್ಫ್‌ ಆಸ್ತಿಯ ಒತ್ತುವರಿ ತೆರವುಗೊಳಿಸಿ ಶಿಕ್ಷಣ ಮತ್ತು ಅರೋಗ್ಯ ಸೇವೆಗೆ ಬಳಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಇದಕ್ಕಾಗಗಿ ವಕ್ಫ್‌ ಅದಾಲತ್ ನಡೆಯುತ್ತಿದೆ. ವಿಜಯಪುರದಲ್ಲಿ 338 ಅರ್ಜಿ ಬಂದಿದ್ದು ಅದರಲ್ಲಿ 17 ಒತ್ತುವರಿ, 81 ಖಾತೆ, 77 ಖಬರಾಸ್ಥಾನ, 25 ಸರ್ವೆ ಸೇರಿದಂತೆ ಇತರೆ ಸಮಸ್ಯೆ ಗಳಿಗೆ ಸಂಬಂಧ ಪಟ್ಟಿದ್ದು ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ.

ರಾಜಕೀಯ ತೀರ್ಪು ಎಂದಿದ್ದ ಜಮೀರ್‌ಗೆ ಸಂಕಷ್ಟ: ನ್ಯಾಯಾಂಗ ನಿಂದನೆ ಕೇಸ್‌ಗೆ ಅಬ್ರಹಾಂ ಪತ್ರ