ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ: ಸಚಿವ ದಿನೇಶ್ ಗುಂಡೂರಾವ್

ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ. ಸಾವಿರ ವರ್ಷಗಳ ಹಿಂದೇಯೆ ನಮ್ಮ ಪೂರ್ವಜರು ಬಿಟ್ಟುಹೋಗಿದ್ದಾರೆ. ಇಡೀ ವಿಶ್ವಕ್ಕೆ ಭಾರತ ಕೊಟ್ಟಿರುವ ಕೊಡುಗೆ ಇದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

Yoga is our countrys culture and ancestral contribution Says Minister Dinesh Gundu Rao gvd

ಬೆಂಗಳೂರು (ಜೂ.21): ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ. ಸಾವಿರ ವರ್ಷಗಳ ಹಿಂದೇಯೆ ನಮ್ಮ ಪೂರ್ವಜರು ಬಿಟ್ಟುಹೋಗಿದ್ದಾರೆ. ಇಡೀ ವಿಶ್ವಕ್ಕೆ ಭಾರತ ಕೊಟ್ಟಿರುವ ಕೊಡುಗೆ ಇದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇಡೀ ವಿಶ್ವದಲ್ಲೇ ಎಲ್ಲಾ ಕಡೆ ಯೋಗ ದಿನ ಆಚರಣೆ ಮಾಡ್ತಾರೆ. ಯೋಗಭ್ಯಾಸ ಚುರುಕು ಉತ್ಸಹ, ದೈಹಿಕ ಮಾನಸಿಕ ಶುದ್ದಿಕರಣ ಯೋಗದಿಂದ ಸಿಗಲಿದೆ. ಇವತ್ತಿನ ದಿನಗಳಲ್ಲಿ ಖಾಯಿಲೆ ಹೆಚ್ಚಾಗಿವೆ ಎಂದರು.

ಮಧುಮೇಹ, ಬಿಪಿ, ಕ್ಯಾನ್ಸರ್, ಹಾರ್ಟ್ ಅಟ್ಯಾಕ್ ಹೆಚ್ಚಾಗಿದೆ.ಇದಕ್ಕೆ ಕಾರಣ ನಮ್ಮ ಲೈಫ್ ಸ್ಟೈಲ್. ಯಾರು ಯೋಗ ಅಭ್ಯಾಸ ಮಾಡ್ತಾರೆ ಅವರಿಗೆ ಆರೋಗ್ಯ ಅನುಕೂಲ ಹೆಚ್ಚಾಗಲಿದೆ. ನಮ್ಮ ಸರ್ಕಾರದಿಂದ ಯೋಗಕ್ಕೆ ಸಹಕಾರ ಪ್ರೋತ್ಸಾಹ ಮಾಡ್ತೀವೆ. ಶಾಲೆಗಳಿಂದಲೇ ಎಲ್ಲಾ ಕಡೆ ಯೋಗಭ್ಯಾಸಕ್ಕೆ ಪ್ರೋತ್ತಾಹವನ್ನು ಸರ್ಕಾರದ ವತಿಯಿಂದಲೂ ನೀಡುತ್ತೇವೆ ಎಂದರು.

ವಿಚಾರಣೆಗೆ ಅಮೆರಿಕದಿಂದ ಬರುವ ಪತಿಗೆ ಪತ್ನಿ ಹಣ ಕೋಡಬೇಕಿಲ್ಲ: ಹೈಕೋರ್ಟ್‌

ನಮ್ಮದೇ ಯೋಗಾಭ್ಯಾಸವನ್ನು ವಿಶ್ವಮಟ್ಟದಲ್ಲಿ ಕಲಿಯುತ್ತಿದ್ದಾರೆ: ನಾನು ಮೊದಲ ಬಾರಿಗೆ ಯೋಗ ಮಾಡಿದ್ದೇನೆ. ಈ ಅಭ್ಯಾಸವನ್ನ ಮುಂದುವರೆಸಬೇಕು ಅನಿಸಿದೆ. ಯೋಗ ಯಾರದ್ದು ಅಂದ್ರೆ ನಮ್ಮದು, ನಮ್ಮ ದೇಶದ್ದು. ನಮ್ಮದೇ ಯೋಗಾಭ್ಯಾಸವನ್ನು ವಿಶ್ವಮಟ್ಟದಲ್ಲಿ ಕಲಿಯುತ್ತಿದ್ದಾರೆ. ಯಾವುದೋ ಸರ್ಕಾರ ಅಥವಾ ರಾಜಕಾಣಿಗಳಿಂದ ಯೋಗ ಬಂದಿರೋದಲ್ಲ ಎಂದು ಶಾಸಕ ರಿಜ್ವಾನ್ ಹರ್ಷದ್ ಹೇಳಿದರು.ಇದು ಸಾವಿರಾರು ವರ್ಷಗಳಿಂದ ಇರುವ ಅಭ್ಯಾಸವಾಗಿದೆ. ಖುಷಿ ಮುನಿಗಳು ನಮಗೆ ಕೊಟ್ಟ ಕೊಡುಗೆ ಇದಾಗಿದೆ. ಯೋಗ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಇದೆ. ಯೋಗ  ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ ಎಂದರು.

9ನೇ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ ಔಷಧಿ ಸಸ್ಯಕ್ಕೆ ನೀರೆರುಯುವ ಮೂಲಕ  ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಉದ್ಘಾಟಿಸಿದರು.ಜೊತೆಗೆ ಆಯ್ಯುಷ್ ಇಲಾಖೆಯ ಅಂತಾರಾಷ್ಟ್ರೀಯ ಯೋಗಾದಿನ ಪೊಸ್ಟರ್ ಬಿಡುಗಡೆ ಮಾಡಿದರು. 9ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿಧಾನಸೌಧದ ಮುಂಭಾಗ ನಡೆಯುತ್ತಿರುವ ಗಣ್ಯರ ಶಿಷ್ಟಾಚಾರ ಯೋಗಾಭ್ಯಾಸ ಮುಕ್ತಾಯವಾಗಿದೆ. ವೇದಿಕೆ ಕಾರ್ಯಕ್ರಮ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್, ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯುಟಿ ಖಾದರ್, ಶಾಸಕ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಆಯುಷ್ ಇಲಾಖೆ ಆಯುಕ್ತ ಮಂಜುನಾಥ್, ವಿಧಾನಪರಿಷತ್ ಸದಸ್ಯ ಶರವಣ, ಅಂತಾರಾಷ್ಟ್ರೀಯ ಅಥ್ಲೀಟ್ ಅಂಜು ಬಾಬಿ ಜಾರ್ಜ್, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ನಟಿ ಭಾವನ ರಾಮಣ್ಣ ಉಪಸ್ಥಿತರಿದ್ದರು.

10 ಕೆಜಿ ಉಚಿತ ಅಕ್ಕಿ ಜುಲೈನಲ್ಲಿ ಜಾರಿ ಅನುಮಾನ: ಸಿಎಂ ಸಿದ್ದರಾಮಯ್ಯ

ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮಕ್ಕೆ ಗೈರಾದ ಕೈ ಸಚಿವರು ಶಾಸಕರು: ಮೈಸೂರು ಅರಮನೆಯಲ್ಲಿ ನಡೆಯುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿರುವ 8 ಶಾಸಕರು ಗೈರಾಗಿದ್ದಾರೆ. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ ಗೈರಾಗಿದ್ದು, ಯೋಗ ಕಾರ್ಯಕ್ರಮದಲ್ಲಿ ಸರ್ವಧರ್ಮ ಗುರುಗಳು, ಹಿಂದೂ ಮುಸ್ಲಿಂ ಕ್ರೈಸ್ತ ಗುರುಗಳು ಭಾಗಿಯಾಗಿದ್ದರು. ಇನ್ನು ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಯೋಗಾಭ್ಯಾಸದಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios