Asianet Suvarna News Asianet Suvarna News

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ: ಉಡುಪಿಗೆ ಇಂದು Yellow Alert

*   ಪ್ರಾಕೃತಿಕ ಹಾನಿಯೊಂದಿಗೆ ಕೃಷಿಗೂ ಅಪಾರ ನಷ್ಟ
*   ಕರಾವಳಿಯಲ್ಲಿ ಯಲ್ಲೋ ಎಲರ್ಟ್‌
*   ಕಂದಾಯ ಅಧಿಕಾರಿಗಳಿಗೆ ಸ್ಥಳದಲ್ಲೇ ಮೊಕ್ಕಾಂ ಇರುವಂತೆ ಸೂಚನೆ 
 

Yellow Alert in Udupi District on Oct 18th in Karnataka grg
Author
Bengaluru, First Published Oct 18, 2021, 7:32 AM IST

ಬೆಂಗಳೂರು(ಅ.18): ಅರಬ್ಬಿ ಸಮುದ್ರದಲ್ಲಿ(Arabian Sea) ವಾಯುಭಾರ ಕುಸಿತವುಂಟಾಗಿರುವ(Airway Collapse) ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ(Coastal) ಮತ್ತು ಮಲೆನಾಡಿನ(Malenadu) ಕೆಲಭಾಗಗಳಲ್ಲಿ ಭಾನುವಾರವೂ ಮುಂದುವರಿದಿದ್ದು ಅಲ್ಲಲ್ಲಿ ಪ್ರಾಕೃತಿಕ ಹಾನಿಯೊಂದಿಗೆ ಕೃಷಿಗೂ ಅಪಾರ ನಷ್ಟವಾಗಿದೆ. 

ಮಂಗಳೂರು(Mangaluru) ತಾಲೂಕಿನಲ್ಲಿ ಐದು ಮನೆ ಸಂಪೂರ್ಣ ನಾಶವಾಗಿವೆ. ನಾಲ್ಕು ಮನೆ ಭಾಗಶಃ ಹಾನಿಗೀಡಾಗಿದೆ. ಇತರೆ 12 ಕಡೆಗಳಲ್ಲಿ ಆವರಣ ಗೋಡೆ ಕುಸಿದಿದೆ. ಮೂರು ಕಡೆ ಮನೆಗಳ ಗುಡ್ಡ ಕುಸಿದಿದೆ. ಮೂಲ್ಕಿಯಲ್ಲಿ ಭತ್ತದ ಗದ್ದೆಗೆ ನೀರು ನುಗ್ಗಿದೆ. ಗುರುಪುರ, ಕೊಳಂಬೆ, ಅದ್ಯಪಾಡಿಗಳಲ್ಲಿ ಕೃಷಿ(Agriculture) ತೋಟಕ್ಕೆ ನೀರು ಪ್ರವೇಶಿಸಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಸಂಭವಿಸಿದೆ. ಸೋಮವಾರ ಕರಾವಳಿಯ ಕೆಲವು ಭಾಗದಲ್ಲಿ ಭಾರಿ ಮಳೆಯಾಗಲಿದೆ(Rain) ಎಂದು ತಿಳಿಸಿರುವ ಹವಾಮಾನ ಇಲಾಖೆ(Department of Meteorology) ಉಡುಪಿ ಜಿಲ್ಲೆಗೆ ಯೆಲ್ಲೋ ಅಲರ್ಟ್‌(Yellow Alert) ಘೋಷಿಸಿದೆ.

ಬೆಂಗ್ಳೂರಲ್ಲಿ ವಾಡಿಕೆಗಿಂತ ಹೆಚ್ಚು ವರ್ಷಧಾರೆ..!

ಉಡುಪಿ(Udupi) ಜಿಲ್ಲಾದ್ಯಂತ ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಬಿಡದೇ ಲಘು ಮಳೆಯಾಗಿದೆ. ರಾತ್ರಿ ಮಳೆಯ ಪ್ರಭಾವ ಜೋರಿರದಿದ್ದರೂ, ಗುಡುಗು ಮತ್ತು ಮಿಂಚುಗಳು ಜನರ ಆತಂಕಕ್ಕೆ ಕಾರಣವಾಗಿತ್ತು. ಮೀನುಗಾರರಿಗೆ(Fishermen) ಸಮುದ್ರಕ್ಕೆ(Sea) ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕಡೂರು ಹಾಗೂ ಕೊಪ್ಪ ತಾಲೂಕುಗಳ ಕೆಲವೆಡೆ ಉತ್ತಮ ಮಳೆಯಾಗಿದೆ.
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡದ ಪಣಂಬೂರಿನಲ್ಲಿ 15 ಸೆಂ.ಮಿ. ಮಳೆಯಾಗಿದೆ. ದಕ್ಷಿಣ ಕನ್ನಡದ ಧರ್ಮಸ್ಥಳ, ಮಂಗಳೂರು, ಕೊಡಗಿನ ಪೊನ್ನಂಪೇಟೆ ತಲಾ 10 ಸೆಂಮೀ, ದಕ್ಷಿಣ ಕನ್ನಡದ ಸುಳ್ಯ, ಮೈಸೂರಿನ ಸರಗೂರು ತಲಾ 7 ಸೆಂಮೀ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 6 ಸೆಂಮೀ, ದಕ್ಷಿಣ ಕನ್ನಡದ ಸುಳ್ಯ, ವಿಟ್ಲ, ಉಡುಪಿಯ ಸಿದ್ದಾಪುರ, ಬೀದರ್‌ನ ಹುಮ್ನಾಬಾದ್‌, ರಾಮನಗರದ ಮಾಗಡಿ, ಮಂಡ್ಯದ ಕೆ. ಆರ್‌. ಪೇಟೆಯಲ್ಲಿ ತಲಾ 5 ಸೆಂಮೀ ಮಳೆಯಾಗಿದೆ.

ಕರಾವಳಿಯಲ್ಲಿ ಯಲ್ಲೋ ಎಲರ್ಟ್‌: 

ಸೋಮವಾರ ಕರಾವಳಿಯ ಕೆಲವು ಭಾಗದಲ್ಲಿ ಭಾರಿ ಮಳೆಯಾಗಲಿದೆ. ರಾಜ್ಯದ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಸ್ಥಳದಲ್ಲೇ ಮೊಕ್ಕಾಂ ಇರುವಂತೆ ಸೂಚನೆ ನೀಡಲಾಗಿದೆ.

Follow Us:
Download App:
  • android
  • ios