Asianet Suvarna News Asianet Suvarna News

ಪಿಎಸ್‌ಐ ಪರಶುರಾಮ ಸಾವು ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

Yadgir PSI Parashuram death case Chalavadi narayanaswamy stats in koppal rav
Author
First Published Aug 6, 2024, 5:04 PM IST | Last Updated Aug 6, 2024, 5:15 PM IST

ಕೊಪ್ಪಳ (ಆ.6): ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ಇಂದು ಕೊಪ್ಪಳ ಜಿಲ್ಲೆ ಸೋಮನಾಳ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಿಮ್ಮ(ರಾಜ್ಯ ಸರ್ಕಾರ) ಎಸ್‌ಐಟಿ ತನಿಖೆಯಿಂದ ನ್ಯಾಯ ಸಿಗುವುದಿಲ್ಲ, ಸಂತ್ರಸ್ತರಿಗೆ ರಕ್ಷಣೆ ಸಿಗುವುದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣವನ್ನು ಎಸ್ಐಟಿಗೆ ಕೊಡಲಾಗಿತ್ತು. ಆದರೆ ಆರೋಪ ಬಂದ ಇಬ್ಬರ ಹೆಸರು ಚಾರ್ಜ್‌ಶೀಟ್‌ನಲ್ಲೇ ಇಲ್ಲ. ಅದು ಎಸ್‌ಐಟಿ ಅಲ್ಲ, ಎಸ್‌ಎಸ್‌ಐಟಿ ಅಂದರೆ ಸಿದ್ದರಾಮಯ್ಯ, ಶಿವಕುಮಾರ್ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಂ ಆಗಿದೆ. ಹೀಗಾಗಿ ಪರಶುರಾಮ ಸಾವು ಪ್ರಕರಣದ ತನಿಖೆ ಎಸ್‌ಐಟಿಗೆ ವಹಿಸಿದರೆ ನ್ಯಾಯ ಸಿಗುವ ಯಾವ ಭರವಸೆಯೂ ಇಲ್ಲ. ಅನ್ಯಾಯವನ್ನು ಮಾಡಿದವರನ್ನ ರಕ್ಷಣೆ ಮಾಡಲು ಎಸ್‌ಎಸ್‌ಐಟಿ ಇರುವುದು. ಸಿಬಿಐ ತನಿಖೆ ನಡೆಸಬೇಕು ಎಂಬುದು ಕುಟುಂಬಸ್ಥರು, ಎಲ್ಲರ ಆಗ್ರಹವಾಗಿದೆ ಎಂದರು.

ಸಿದ್ದರಾಮಯ್ಯನವರೇ ಆರೋಪಿ ನಂಬರ್ 1- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ!

ಇನ್ನು ಗೃಹಸಚಿವ ಜಿ ಪರಮೇಶ್ವರ್ ಸೋಮನಾಳ ಗ್ರಾಮಕ್ಕೆ ಭೇಟಿ ನೀಡದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ತಕ್ಷಣವೇ ಶಾಸಕ ಹಾಗೂ ಆತನ ಮಗನನ್ನು ಅರೆಸ್ಟ್ ಮಾಡಬೇಕು. ಮೊದಲು ಜೈಲಿಗೆ ಕಳುಹಿಸಿ ಆಮೇಲೆ ಪರಶುರಾಮ ಪತ್ನಿಗೆ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ನೌಕರಿ ಕೊಡಲಿ. ಇಲ್ಲವಾದಲ್ಲಿ ಅವರು ನಿಮ್ಮನ್ನು ಗೌರವಿಸುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ. ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸದಿದ್ರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. 

ಮೃತ ಪರಶುರಾಮ ಪ್ರತಿಭಾನ್ವಿತ ಹುಡುಗ. ನನ್ನ ಜೊತೆ ಸಂಪರ್ಕದಲ್ಲಿದ್ದ. ಆದರೆ ಈ ರೀತಿ. ಪರಶುರಾಮ ಸಾವಿನಿಂದ ನನಗೆ ಒಬ್ಬ ತಮ್ಮನನ್ನು ಕಳೆದುಕೊಂಡಷ್ಟು ದುಃಖವಾಗಿದೆ. ಆತನ ಸಾವಿಗೆ ಕಾರಣರಾದವರನ್ನು ಈ ಸರ್ಕಾರ ಇದುವರೆಗೆ ಅರೆಸ್ಟ್ ಮಾಡಿಲ್ಲ. ಬಂಧಿಸುವ ಬದಲು ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಹೋರಾಟ ಮಾಡಲು ಸಿದ್ದ: ಸಿಎಂ ಸಿದ್ದರಾಮಯ್ಯ

ಯಾದಗಿರಿ ಶಾಸಕನಿಗೆ ಟಿಕೆಟ್ ಕೊಟ್ಟಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾದಗಿರಿ ಎಂಎಲ್‌ಎ ಎಐಸಿಸಿ ಅಧ್ಯಕ್ಷ ಶಿಷ್ಯನಾಗಿದ್ದು ಹಣ ಕೊಡದವರನ್ನು ನಿಂದಿಸುವುದು, ಕಿರುಕುಳ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ. ಹೀಗಾಗಿ ಇವರ ಕಿರುಕುಳಕ್ಕೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತವರನ್ನು ಸಿಎಂ ಪಕ್ಕದಲ್ಲಿ ಕೂರಿಸಿಕೊಂಡು ನಾವೆಲ್ಲ ಇದ್ದೇವೆ ಧೈರ್ಯವಾಗಿ ಇರಿ ಎಂದು ಅಭಯ ಕೊಡುವುದರಿಂದ ರಾಜಾರೋಷವಾಗಿ ಭ್ರಷ್ಟಾಚಾರಕ್ಕಿಳಿದಿದ್ದಾರೆ. ಹೀಗಿರುವಾಗ ಎಸ್‌ಐಟಿ ತನಿಖೆಗೆ ವಹಿಸಿ ನೀವು ಅವರಿಗೆ ನ್ಯಾಯ ಕೊಡಿಸುತ್ತೀರಿ ಅನ್ನೋ ಗ್ಯಾರಂಟಿ ಇದೆನಾ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios