Asianet Suvarna News Asianet Suvarna News

ಮರಗಳ್ಳತನ ಪ್ರಕರಣ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರಣ್ಯಾಧಿಕಾರಿಗಳ ವಶಕ್ಕೆ!

ಕೋಟ್ಯಂತರ ರೂ.ಮೌಲ್ಯದ ಮರಗಳನ್ನು ಕಡಿದು ಮಾರಾಟ ಮಾಡಿರುವ ಆರೋಪ ಹಿನ್ನೆಲೆ ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು.

Wood smuggling Case MP Pratap simha brother Vikram simha arrested Hassan rav
Author
First Published Dec 30, 2023, 7:49 PM IST

ಹಾಸನ (ಡಿ.30): ಕೋಟ್ಯಂತರ ರೂ.ಮೌಲ್ಯದ ಮರಗಳನ್ನು ಕಡಿದು ಮಾರಾಟ ಮಾಡಿರುವ ಆರೋಪ ಹಿನ್ನೆಲೆ ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು.

ಹಾಸನ ಭಾಗದಲ್ಲಿ 126 ಮರಗಳನ್ನ ಕಡಿದು ಅಕ್ರಮವಾಗಿ ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಂ ಸಿಂಹ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಹೇಳಿಕೆ ಪಡೆಯಲು ವಿಕ್ರಂ ಸಿಂಹರನ್ನು ಸಂಪರ್ಕಿಸಲು ಯತ್ನಿಸಿದ್ದ ಅರಣ್ಯಾಧಿಕಾರಿಗಳು. ಆದರೆ ತನಿಖಾಧಿಕಾರಿಗಳಿಗೆ ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದ ವಿಕ್ರಂ ಸಿಂಹ. ಹೀಗಾಗಿ ವಿಕ್ರಂ ಸಿಂಹರ ಹುಡುಕಾಟ ನಡೆಸಿದ್ದ ಅರಣ್ಯಾಧಿಕಾರಿಗಳು. 

ಚುನಾವಣೆಯಲ್ಲಿ ನನ್ನ ಸೋಲಿಸಲು ಆಗದ್ದಕ್ಕೆ ವೈಯಕ್ತಿಕ ದಾಳಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ

ಹಾಸನದಿಂದ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡ ಬಗ್ಗೆ ಮಾಹಿತಿ ಕಲೆಹಾಕಿದ್ದ ಅರಣ್ಯಾಧಿಕಾರಿಗಳು. ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿಗಳನ್ನು ಸಹಕಾರ ಕೇಳಿದ್ದರು. ಅದರಂತೆ ಕಾರ್ಯಾಚರಣೆಗೆ ಇಳಿದಿದ್ದ ಸಿಸಿಬಿ ಸಂಘಟಿಕ ಅಪರಾಧ ವಿಭಾಗ ಸಿಬ್ಬಂದಿ. ಪೊಲೀಸ್ ಸಿಬ್ಬಂದಿ  ಸಹಾಯ ಪಡೆದು ವಿಕ್ರಂ ಸಿಂಹ ಬಂಧಿಸಲಾಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ ಸಿಸಿಬಿ ಪೊಲೀಸರು. ಸದ್ಯ ಹಾಸನ ಅರಣ್ಯಾಧಿಕಾರಿಗಳ ಬಂಧನದಲ್ಲಿರೋ ವಿಕ್ರಂ ಸಿಂಹ 

ಸಹೋದರನ ಮೇಲೆ ನೂರಾರು ಮರ ಕಡಿದ ಆರೋಪ: ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

Follow Us:
Download App:
  • android
  • ios