ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಘಟನೆಯ ಹಿಂದೆ ಎಸ್‌ಡಿಪಿಐ ಕೈವಾಡ: ಕಾಶಪ್ಪನವರ ಆರೋಪ
ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರವನ್ನು ಮಹಿಳೆ ಎಸೆದಿರುವುದರ ಹಿಂದೆ ಎಸ್‌ಡಿಪಿಐ ಸಂಘಟನೆಯ ಕೈವಾಡವಿದೆ ಎಂದು ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.16): ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರವನ್ನು ಮಹಿಳೆ ಎಸೆದಿರುವುದರ ಹಿಂದೆ ಎಸ್‌ಡಿಪಿಐ ಸಂಘಟನೆಯ ಕೈವಾಡವಿದೆ ಎಂದು ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು. ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನ ಮಹಿಳೆ ಎಸೆದ ಪ್ರಕರಣ ಹಿಂದೆ ಎಸ್‌ಡಿಪಿಐ ಸಂಘಟನೆಯವರೇ ಪ್ರಚೋದನೆ ಮಾಡಿ ಉದ್ದೇಶಪೂರ್ವಕವಾಗಿ ಮಾಡಿಸಿದ್ದು, ಎಸ್‌ಡಿಪಿಐ ಕುಮ್ಮಕ್ಕಿನಿಂದಲೇ ಮಹಿಳೆ ಹಣ ಎಸೆದಿದ್ದಾಳೆ ಎಂದರು.
ಇನ್ನು ಸಿದ್ದರಾಮಯ್ಯನವರು ಆಸ್ಪತ್ರೆಗೆ ಆಗಮಿಸಿದ ವೇಳೆಯೇ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ಸಹ ಬಂದಿದ್ದರು., ಈ ವೇಳೆ ಗಾಯಾಳುಗಳ ಸಂಭಂದಿಗಳಿಗೆ ಕುಮ್ಮಕ್ಕು ನೀಡಿದ್ರು, ಇದರಿಂದ ಮಹಿಳೆ ಹಣ ಎಸೆದಿದ್ದಾಳೆ. ಎಸ್‌ಡಿಪಿಐ ಅವರಿಗೆ ಬಿಜೆಪಿಯವರ ಪ್ರಚೋದನೆ ನೀಡಿ ಕಳಿಸಿದ್ದಾರೆ. ಇದರಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಯಾವುದೇ ತೊಂದರೆ ಇಲ್ಲದ ಅವರು, ಎಸ್‌ಡಿಪಿಐ ಮತ್ತು ಬಿಜೆಪಿಯವರಿಗೆ ಲಿಂಕ್ ಇದೆ. ಇನ್ನು ದೇಶದಲ್ಲಿ ಇವರು ಅಜಾನ್, ಹಿಜಾಬ್‌ನಂತಹ ಪ್ರಕರಣ ತಂದು ಗ್ರಾಮೀಣ ಮಟ್ಟದವರೆಗೂ ಅತ್ಯಂತ ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ. ಹಿಂದೂ ಮುಸ್ಲಿಂ ಭೇದಭಾವ ಹಚ್ಚಿ ಈ ದೇಶವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮತ್ತು ಆರ್.ಎಸ್.ಎಸ್.ನವರು ಮಾಡ್ತಿದ್ದಾರೆ.
ಸಿದ್ದರಾಮಯ್ಯ ಕೊಟ್ಟ ಹಣ ಎಸೆದಿದ್ದ ಮಹಿಳೆಯಿಂದ ಕ್ಷಮೆಯಾಚನೆ
ಹೀಗಾಗಿ ಅಲ್ಪಸಂಖ್ಯಾತರಲ್ಲಿ ಮನವಿ ಮಾಡ್ತೇನೆ, ಎಸ್‌ಡಿಪಿಐ ಸೇರಿದಂತೆ ಯಾವುದೇ ಸಂಘಟನೆಯಲ್ಲಿ ಸೇರಿದ್ರೂ ಇಂತಹದ್ದಕ್ಕೆ ಪ್ರಚೋದನೆ ಬೆಂಬಲ ಕೊಡಬಾರದು. ನಾವೆಲ್ಲಾ ಸಿದ್ದರಾಮಯ್ಯನವರ ಜೊತೆ ಆಸ್ಪತ್ರೆಗೆ ಬಂದಾಗ ಅಲ್ಲೊಬ್ಬ ಸ್ವತ: ವ್ಯಕ್ತಿ ಬಂದಿದ್ದು ನೋಡಿದ್ದೇನೆ. SDPI ಒಬ್ಬ ಜಿಲ್ಲಾ ಮುಖಂಡ ಬಂದಿದ್ದನ್ನು, ಮಾಡಿಸಿದ್ದನ್ನು ನೋಡಿದ್ದೀನಿ ಎಂದರು. ಪಾಪ, ಗಾಯಾಳುಗಳ ಸಂಭಂದಿಗಳು ಸಿದ್ದರಾಮಯ್ಯಗೆ ಸ್ಪಂದಿಸಿ ಅಳಲು ಹೇಳಿಕೊಂಡಿದ್ರು. ನ್ಯಾಯ ಕೊಡಿಸಿ ಅಂತ ಕೇಳಿಕೊಂಡರು, ಸಾಂತ್ವನಕ್ಕಾಗಿ ಸಹಾಯ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ..
ಬಿಜೆಪಿಯವವರಿಗೆ ತಾಕತ್ತಿದ್ದರೆ ಬಾದಾಮಿಗೆ ಬಂದು ಸಿದ್ದರಾಮಯ್ಯನ ವಿರುದ್ದ ನಿಂತು ಗೆಲ್ಲಲ್ಲಿ: ಬಿಜೆಪಿಯವವರಿಗೆ ತಾಕತ್ತಿದ್ದರೆ ಬಾದಾಮಿಗೆ ಬಂದು ಸಿದ್ದರಾಮಯ್ಯನ ವಿರುದ್ದ ನಿಂತು ಗೆಲ್ಲಲ್ಲಿ ನೋಡೋಣ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಗುಡುಗಿದ್ದಾರೆ. ಬೇಕಿದ್ದರೆ ಬಾದಾಮಿಗೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನ ಕರೆದುಕೊಂಡು ಬಂದು ನಿಲ್ಲಲ್ಲಿ. ನೋಡೋಣ ತಾಕತ್ತಿದ್ರೆ ಗೆಲ್ಲಲಿ, ನಾನು ಕೂಡ ಇದೇ ಜಿಲ್ಲೆಯಲ್ಲಿ ಹುಟ್ಟಿದ್ದೇನೆ ಇದೆ ಜಿಲ್ಲೆಯಲ್ಲಿ ಜೀವನ ಮಾಡಿದ್ದೇನೆ. ಯಡಿಯೂರಪ್ಪನ ಕರಕೊಂಡು ಬರ್ತಿರೋ ಯಾವ ದೊಣ್ಣೆ ನಾಯಕನ ಕರ್ಕೊಂಡು ಬರ್ತಿರೋ ಬಂದು ಗೆಲ್ಲು ಅಂತ ಹೇಳಿ ನೋಡೋಣ ಎಂದು ಸವಾಲ್ ಹಾಕಿದ್ದು, ಸಿದ್ದರಾಮಯ್ಯನವರನ್ನ 101% ಗೆದ್ದೆ ಗೆಲ್ಲಿಸುತ್ತೇನೆ ಎಂದುಬಿಜೆಪಿಗೆ ನೇರ ಸವಾಲು ಹಾಕಿದರು. ಇನ್ನು ಹಿಂದೂ ಕಾರ್ಯಕರ್ತ ಅರುಣ ಕಟ್ಟಿಮನಿ ಸಿದ್ದರಾಮಯ್ಯ ನೋಡೋಕೆ ಬರೋದು ಬೇಡ ಅಂತಾನೆ, ಅವನು ಯಾವ ದೊಣ್ಣೆ ನಾಯಕ ಮಾಜಿ ಸಿಎಂ ಬರ್ತಾರೆ ಅಂದ್ರೆ ಹೀಗೆ ಹೇಳೋದಾ ಎಂದು ಕಾಶಪ್ಪನವರ ಕಿಡಿಕಾರಿದರು.
ಅನುದಾನ ನೀಡದ ಬಿಜೆಪಿ ಸದಸ್ಯರ ವಿರುದ್ಧ ಅಸಮಾಧಾನ: ಇಲಕಲ್ ನಗರಸಭೆಯಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಅಧಿಕಾರದಲ್ಲಿರೋ ಬಿಜೆಪಿಗರು ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಅನುದಾನ ನೀಡಿಲ್ಲ, ಹೀಗಾಗಿ ಕಾಂಗ್ರೆಸ್ ಸದಸ್ಯರನ್ನು ಆಯ್ಕೆ ಮಾಡಿದ ವಾರ್ಡಗಳಿಗೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಈ ಸಂಬಂಧ ಕಾಂಗ್ರೆಸ್ ಪಕ್ಷದ ಇಲಕಲ್ ನಗರಸಭೆ ಸದಸ್ಯರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದರೂ ಸಹ ಯಾರೂ ಸ್ಪಂದಿಸುತ್ತಿಲ್ಲ. ಮೇಲಾಗಿ ಅನುದಾನ ಕೇಳಲು ಹೋದರೆ ಕರ್ತವ್ಯಕ್ಕೆ ಅಡ್ಡಿ ಅಂತ ಕೇಸ್ ದಾಖಲಿಸುತ್ತಾರೆ. ಇದರಿಂದ ಬಿಜೆಪಿಗರು ಇಲಕಲ್ ನಗರಸಭೆಯಲ್ಲಿ ಪಕ್ಷ ರಾಜಕಾರಣ ಮಾಡುತ್ತಿದ್ದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಸಿದ್ದರಾಮಯ್ಯನವರ ಹಣ ವಾಪಸ್ ಎಸೆದ ಮುಸ್ಲಿಂ ಮಹಿಳೆ, ಸ್ಪಷ್ಟನೆ ಕೊಟ್ಟ ಖಾದರ್
ನೇಕಾರರ ಹಿತ ಕಾಯದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ಕಾಶಪ್ಪನವರ ವಾಗ್ದಾಳಿ: ಇಲಕಲ್ ಪಟ್ಟಣ ನೇಕಾರಿಕೆಗೆ ಪ್ರಸಿದ್ಧಿ ಪಡೆದಿದ್ದು, ನೇಕಾರರು ಸೀರೆ ನೇಯ್ಗೆ ಉದ್ಯೋಗ ಮಾಡಬೇಕಾದರೆ ನಿಗದಿತ ಕೂಲಿ ಸಿಗುತ್ತಿಲ್ಲ, ಇವುಗಳ ಮಧ್ಯೆ ಕಾಂಗ್ರೆಸ್ ಸಕಾ೯ರದಲ್ಲಿ ನೀಡಿದ್ದ ವಿದ್ಯುತ್ ಸಬ್ಸಿಡಿಯನ್ನೂ ಸಹ ಬಿಜೆಪಿ ಸಕಾ೯ರ ರದ್ದು ಮಾಡಿದೆ. ಇದರಿಂದ ನೇಕಾರರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಈ ಸಂಬಂಧ ನೇಕಾರರ ನಿಯೋಗದೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಸಿದ್ದರಾಮಯ್ಯನವರು ಮತ್ತೇ ರಾಜ್ಯದಲ್ಲಿ ನಮ್ಮ ಸಕಾ೯ರ ಬಂದಲ್ಲಿ ರಾಜ್ಯದ ನೇಕಾರರಿಗೆ ಉಚಿತ ವಿದ್ಯುತ್ ಸೇರಿದಂತೆ ಸಾಲಮನ್ನಾ ಮಾಡಲಾಗುವುದು ಎಂದಿದ್ದಾರೆ ಎಂದರು.