Asianet Suvarna News Asianet Suvarna News

ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಕಿರಿಕ್‌ ಕೊಟ್ಟ ಕುಡುಕ: ಬೇಕಂತಲೇ ಕುಡಿಸಿ ಕಳಿಸ್ತಾರೆ ಎಂದು ಆಕ್ರೋಶ

ಸಿದ್ದರಾಮಯ್ಯ ಬಡವರಿಗಾಗಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾರೆ- ಹೆಚ್.ಎಂ. ರೇವಣ್ಣ
ಸಿದ್ರಾಮಣ್ಣ ಏನ್‌ ಸಹಾಯ ಮಾಡಿದ್ದಾರೆ ಎಂದು ಕೌಂಟರ್‌ ಪ್ರಶ್ನೆ ಮಾಡಿದ ಕುಡುಕ
ಹೇ ಪೊಲೀಸ್‌ ಅವನನ್ನು ಕಳುಹಿಸಿ ಆ ಕಡೆ ಎಂದ ಸಿದ್ದರಾಮಯ್ಯ

Drunk man who interrupted former CM siddaramaiah speech Outrage that he got drunk sat
Author
First Published Jan 15, 2023, 3:22 PM IST

ಬೆಂಗಳೂರು (ಜ.15): ಭಾಷಣ ವೇಳೆ ಕುಡುಕನೊರ್ವ ವೇದಿಕೆ ಮುಂಭಾಗ ಬಂದು ನಿಂತು ಅಡ್ಡಿ ಪಡಿಸಿದ್ದಾನೆ. ಮೊದಲು ಅವನನ್ನು ಕಳಿಸಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗದರಿದ್ದಾರೆ. ಕೆಲವರು ಈ ಕಾರ್ಯಕ್ರಮಕ್ಕೆ ಕುಡಿದು ಬರುತ್ತಾರೆ. ಇನ್ನು ಕೆಲವರಿಗೆ ಬೇಕಂತಲೇ ಕುಡಿಸಿ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಈ ಘಟನೆ ನಡೆದಿದ್ದು ಸಿಲಿಕಾನ್‌ ಸಿಟಿ ಬೆಂಗಳೂರಿನ ದೊಮ್ಮಲೂರಿನಲ್ಲಿ ನಿರ್ಮಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ವೇಳೆ ನಡೆದಿದೆ. ಇನ್ನು ಕಂಚಿನ ಪ್ರತಿಮೆ ಉದ್ಘಾಟನೆ ನೆರವೇರಿಸಿ ಭಾಷಣ ಆರಂಭಿಸಿದ ಸಿದ್ದರಾಮಯ್ಯನಿಗೆ ಆರಂಭದಿಂದಲೇ ಕಿರಿಕಿರಿ ಉಂಟಾಗಿದೆ. ಭಾಷಣ ಮಾಡುವ ವೇಳೆ ಅಡ್ಡಬಂದ ಕುಡುಕನನ್ನು ಮೊದಲು ಕಳಸ್ರಿ ಎಂದು ಗದರಿದ್ದಾರೆ. ಹೇ ಪೊಲೀಸ್ ಅವರನ್ನ ಕಳುಹಿಸಿ ಆ ಕಡೆ. ಇಂಥವರು ಇರ್ತಾರೆ ಇದಕ್ಕೆ ತಲೆಕಡಸಿಕೊಳ್ಳಬೇಡಿ. ಕೆಲವುರು ಕುಡಿದು ಬಂದಿರ್ತಾರೆ ಇನ್ನೂ ಕೆಲವರಿಗೆ ಕುಡಿಸಿ ಕಳುಹಿಸುತ್ತಾರೆ ಎಂದು ಸಿದ್ದರಾಮಯ್ಯ ಕೋಪಿಸಿಕೊಂಡರು.

ಸಿದ್ದರಾಮಯ್ಯ 25 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲಲ್ಲ: ಕೆ.ಎಸ್‌.ಈಶ್ವರಪ್ಪ

ಪೊಲೀಸರೊಂದಿಗೆ ಕೈ- ಕೈ ಮಿಲಾಯಿಸಿದ ಕಾರ್ಯಕರ್ತರು: ಇನ್ನು ಪ್ರತಿಮೆ ಅನಾವರಣಕ್ಕೂ ಮುನ್ನ ಸಿದ್ದರಾಮಯ್ಯ ಅವರ ಬಳಿ ಬರಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಕಾರ್ಯಕರ್ತರು ಕೈ- ಕೈ ಮಿಲಾಯಿಸುವ ಮಟ್ಟಿಗೆ ಜಗಳ ಮಾಡಿದ್ದಾರೆ. ಈ ವೇಳೆ ಅದನ್ನು ಬಗೆಹರಿಸುವಂತೆ ಸಿದ್ದರಾಮಯ್ಯ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ, ಪ್ರತಿಮೆ ಅನಾವರಣ ಮಾಡಿ ಭಾಷಣ ಮಾಡುವಾಗ ವೇದಿಕೆ ಬಳಿ ಮಾತನಾಡುತ್ತಿದ್ದ ಕಾರ್ಯಕರ್ತರ ವಿರುದ್ಧ ಗರಂ ಆಗಿದ್ದರು. ಇಲ್ಲಿ ಭಾಷಣ ಕೇಳೋದಕ್ಕೆ ಆಗಲಿಲ್ಲ ಎಂದರೆ ವೇದಿಕೆಯಿಂದ ಆ ಕಡೆ ಹೋಗಿ. ಇಲ್ಲಿ ಮುಂದೆ ಬಂದು ನಿಂತುಕೊಂಡರೆ ಹಿಂದೆ ನಿಂತವರೆಗೆ ಕಾಣೋದಿಲ್ಲ ಆ ಕಡೆ ಹೋಗಿ. ನಿಮ್ಗೆ ಡಿಸಪ್ಲಿನ್ ಇಲ್ಲ. ಇಂಥ ದೊಡ್ಡ ಕಾರ್ಯಕ್ರಮ ಮಾಡ್ತೀರಾ ಆದರೆ ಶಿಸ್ತು ಇರಲ್ಲ ಎಂದು ಗದರಿದರು.

ಸಿದ್ರಾಮಣ್ಣ ಏನ್‌ ಸಹಾಯ ಮಾಡಿದ್ದಾರೆ ಎಂದ ಕುಡುಕ: ಇನ್ನು ಸಿದ್ದರಾಮಯ್ಯ ಭಾಷಣದ ವೇಳೆ ತೊಂದರೆ ಕೊಟ್ಟ ಕುಡುಕನನ್ನು ಪೊಲೀಸರು ಹೊರಗೆ ಕಳುಹಿಸಿದ್ದಾರೆ. ನಂತರ, ಶಾಸಕ ಎಚ್.ಎಂ. ರೇವಣ್ಣನ ಭಾಷಣದ ವೇಳೆಯೂ ವೇದಿಕೆಯ ಬಳಿ ಆಗಮಿಸಿದ ಕುಡುಕ ಕಿರಿಕ್‌ ಮಾಡಿದ್ದಾನೆ. ಹೆಚ್.ಎಂ. ರೆವಣ್ಣ ಅವರು ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಬಡವರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಕೌಂಟರ್‌ ಎನ್ನುವಂತೆ ಸಿದ್ರಾಮಣ್ಣ ಏನು ಸಹಾಯ ಮಾಡಿದ್ದಾರೆ ಎಂದು ಕುಡುಕ ಪ್ರಶ್ನೆ ಮಾಡಿದ್ದಾನೆ. ಆಗ ಕುಡುಕನ ಪ್ರಶ್ನೆಗೆ ರೇವಣ್ಣ ಕೂಡ ಗರಂ ಆಗಿದ್ದಾರೆ. ಪುನಃ ಆ ಕುಡುಕನನ್ನೂ ಪೊಲೀಸರು ವೇದಿಕೆ ಬಳಿಯಿಂದ ಹೊರಗಡೆ ಕರೆದೊಯ್ದಿದ್ದಾರೆ.

ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು 4 ದಶಕದಲ್ಲೇ ನೋಡಿಲ್ಲ: ಸಿದ್ದರಾಮಯ್ಯ ಕಿಡಿ

ರಾಜ್ಯದ ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ:  ಸಿಲಿಕಾನ್‌ ಸಿಟಿ ಬೆಂಗಳೂರಿನ  ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರಿನಲ್ಲಿ ರಾಜ್ಯದಲ್ಲಿಯೇ ಅತ್ಯಂತ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ದೊಮ್ಮಲೂರಿನಲ್ಲಿ ನಿರ್ಮಿಸಲಾದ 15 ಅಡಿ ಎತ್ತರದ ಕಂಚಿನ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಮೆ ಅನಾವರಣಕ್ಕೂ ಮುನ್ನ  ದೊಮ್ಮಲೂರಿನಲ್ಲಿ ಭರ್ಜರಿ ರೋಡ್ ಶೋ ಮೂಲಕ ಸಿದ್ದರಾಮಯ್ಯ ಅವರನ್ನು ವೇದಿಕೆಗೆ ಕರೆತರಲಾಗಿತ್ತು. ಈ ವೇಳೆ ಶಾಸಕ ಎನ್.ಎ. ಹ್ಯಾರೀಸ್ ಮತ್ತು ಹೆಚ್.ಎಂ. ರೇವಣ್ಣ ಉಪಸ್ಥಿತರಿದ್ದರು. 

ತಿರುವಳ್ಳುವರ್‌ ಪ್ರತಿಮೆಗೆ ಮಾಲಾರ್ಪಣೆ: ತಿರುವಳ್ಳುವರ್ ಜಯಂತಿ ಹಿನ್ನೆಲೆಯಲ್ಲಿ ಹಲಸೂರಿನಲ್ಲಿರುವ ತಿರುವಳ್ಳುವರ್ ಪುತ್ಥಳಿಗೆ ಮಾರ್ಪಣೆ ಮಾಡಿದರು. ಶಾಸಕರಾದ ಎನ್.ಎ. ಹ್ಯಾರಿಸ್, ರಿಜ್ವಾನ್ ಅರ್ಷದ್, ಅಖಂಡ ಶ್ರೀನಿವಾಸ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಹಿರಿಯ ಕಾರ್ಯಕರ್ತರನ್ನು ಸಿದ್ದರಾಮಯ್ಯ ಅವರ ಬಳಿ ಬಿಡಲಿಲ್ಲ ಎಂದು ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಪೊಲೀಸರೊಂದಿಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೊಗಿತ್ತು. ನಂತರದ ಅಲ್ಲಿದ ಹಿರಿಯ ನಾಯಕರು ಮಧ್ಯಪ್ರವೇಶಿ ಜಗಳವನ್ನು ತಿಳಿಗೊಳಿಸಿದರು. ನಂತರ ತಿರುವಳ್ಳುವರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹಲಸೂರಿನಿಂದ ದೊಮ್ಮಲೂರಿಗೆ ಆಗಮಿಸಿದರು.

Follow Us:
Download App:
  • android
  • ios