ವಿಜಯಪುರ(ಆ.26): ಉತ್ತರ ಕರ್ನಾ​ಟ​ಕ ಭಾಗದ ಬಹು​ವ​ರ್ಷ​ಗಳ ಬೇಡಿ​ಕೆ​ಯಾದ ಆಲ​ಮಟ್ಟಿಜಲಾ​ಶ​ಯದ ಎತ್ತ​ರ​ವನ್ನು ಹೆಚ್ಚಿ​ಸ​ಬೇ​ಕೆಂಬ ಆಗ್ರ​ಹ​ದ ಈಡೇ​ರಿ​ಕೆಗೆ ರಾಜ್ಯ ಬಿಜೆಪಿ ಸರ್ಕಾರ ಬದ್ಧ​ವಾ​ಗಿದೆ ಎಂದು ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಹೇಳಿ​ದ್ದಾರೆ. ಜತೆ​ಗೆ, ಸಾಲ ಮಾಡಿಯಾದರೂ ಆಲಮಟ್ಟಿಅಣೆಕಟ್ಟೆಯನ್ನು ಎತ್ತ​ರಿ​ಸ​ಲಾ​ಗು​ವುದು ಎಂದೂ ಭರ​ವಸೆ ನೀಡಿ​ದ್ದಾ​ರೆ.

ಮಂಗಳವಾರ ಆಲಮಟ್ಟಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಲಮಟ್ಟಿಅಣೆಕಟ್ಟೆಎತ್ತರವನ್ನು 524.256 ಮೀಟರ್‌ವರೆಗೆ ಹೆಚ್ಚಿ​ಸಲು ಸರ್ಕಾರ ಬದ್ಧವಿದೆ. ನ್ಯಾಯಾಧಿಕರಣದ ತೀರ್ಪಿನ ಅನ್ವಯ ರಾಜ್ಯಕ್ಕೆ ದೊರೆತಿರುವ 130 ಟಿಎಂಸಿ ನೀರಿನ ಸದ್ಬಳಕೆಗೆ ಸರ್ಕಾ​ರ ಆದ್ಯತೆ ನೀಡಲಿದೆ ಎಂದು ಹೇಳಿದರು.

ಈಗಾಗಲೇ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಸಭೆಯಲ್ಲಿ ಆಲಮಟ್ಟಿ ಅಣೆಕಟ್ಟೆಎತ್ತರ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸುವ ಕುರಿತು ಗಮನ ಸೆಳೆದಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ(ಯು​ಕೆ​ಪಿ​)ಯ 3ನೇ ಹಂತದ ಯೋಜನಾ ಕಾಮಗಾರಿಗಳು ಹಾಗೂ ಆಲಮಟ್ಟಿಅಣೆಕಟ್ಟೆಎತ್ತರ ಹೆಚ್ಚ​ಳಕ್ಕೆ ಸಂಬಂಧಿಸಿ ಸದ್ಯ​ದಲ್ಲೇ ನಾನೂ ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದರು.