ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವೆ : ದರ್ಶನಾಪುರ್
ನನ್ನ ಮುಂದಿನ 5 ವರ್ಷದ ಅವಧಿ ಕ್ಷೇತ್ರ ಹಾಗೂ ಜನರ ಅಭಿವೃದ್ಧಿಗೆ ಮೀಸಲಾಗಿರುತ್ತದೆ. ಜನರು ಕೊಟ್ಟತೀರ್ಪಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಸಣ್ಣ ಕೈಗಾರಿಕೆಗಳ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಹೇಳಿದರು.
ಶಹಾಪುರ (ಆ.26) : ನನ್ನ ಮುಂದಿನ 5 ವರ್ಷದ ಅವಧಿ ಕ್ಷೇತ್ರ ಹಾಗೂ ಜನರ ಅಭಿವೃದ್ಧಿಗೆ ಮೀಸಲಾಗಿರುತ್ತದೆ. ಜನರು ಕೊಟ್ಟತೀರ್ಪಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಸಣ್ಣ ಕೈಗಾರಿಕೆಗಳ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಹೇಳಿದರು.
ನಗರದ ಕುಂಬಾರಗೇರಿಯ ಹಿರೇಮಠದಲ್ಲಿ ತಾಲೂಕು ಕುಂಬಾರ ಸಮಾಜದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜನರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನನ್ನು ಭೇಟಿಯಾಗಲು ಮುಕ್ತ ಅವಕಾಶವಿರುತ್ತದೆ. ನಮ್ಮ ತಂದೆ ಕಾಲದಿಂದಲೂ ಅನೇಕ ಚುನಾವಣೆ ಮುಗಿದಿವೆ. ಪರ-ವಿರೋಧಗಳು ಅಂದಿಗೆ ಕೊನೆಯಾಗಿದೆ. ಮುಂದೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಉದ್ದೇಶವಾಗಿದೆ ಎಂದರು.
ಯಾದಗಿರಿ: ಬಸವಸಾಗರ ಜಲಾಶಯ ಭರ್ತಿ, ಸಚಿವ ದರ್ಶನಾಪುರ್ ಬಾಗಿನ ಅರ್ಪಣೆ
ಯುವಕರು ಹಾಗೂ ಸ್ವ ಉದ್ಯೋಗ ಕೈಗೊಳ್ಳುವ ವ್ಯಕ್ತಿಗಳು ಸರ್ಕಾರದ ಸೌಲಭ್ಯ ಪಡೆದು ಸ್ವಾವಲಂಬಿ ಬದುಕು ಸಾಗಿಸಬೇಕಾಗಿದೆ. ಕುಂಬಾರ ಸಮಾಜದ ವತಿಯಿಂದ ಸನ್ಮಾನಿಸುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋುಣಿಯಾಗಿರುವೆ ಎಂದು ತಿಳಿಸಿದರು.
ಕುಂಬಾರ ಗಿರಿಯ ಹಿರೇಮಠದ ಪೀಠಾಧಿಪತಿ ಸೂಗುರೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಕ್ಷೇತ್ರದಲ್ಲಿ ದರ್ಶನಾಪೂರ್ ಅವರು ಶಾಸಕರಾಗಿದ್ದಾಗಲೂ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜತೆಗೆ ಅತಿ ಜರೂರಾಗಿದ್ದ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದರು.
ಕುಮಾರಸ್ವಾಮಿ ಏನ್ ‘ಸತ್ಯ ಹರಿಶ್ಚಂದ್ರನೇ’: ಸಚಿವ ದರ್ಶನಾಪುರ ವಾಗ್ದಾಳಿ
ಕುಂಬಾರ ಸಮಾಜದ ತಾಲೂಕಾಧ್ಯಕ್ಷ ಸಿದ್ದರಾಮಪ್ಪ ಕೆರವಟಿಗಿ, ವೀರಶೈವ ಸಮಾಜದ ಮುಖಂಡ ಬಸವರಾಜ್ ಹೇರುಂಡಿ, ದೇವಿಂದ್ರಪ್ಪ ಕರಡಕಲ್, ಹಿರಿಯ ಸಾಹಿತಿ ಶಿವಣ್ಣ ಇಜೇರಿ, ಸಿದ್ದರಾಮಪ್ಪ ಯಾಳಗಿ, ಅಯ್ಯಪ್ಪ ಮುಂಮಟಿಗಿ, ಡಾ. ಬಿಎಸ್. ಹಾದಿಮನಿ, ಪ್ರಭು ಗೋಲ್ ಪಲ್ಲಿ, ವಿರೂಪಾಕ್ಷಿ, ಈಶಣ್ಣ ಕುಂಬಾರ್, ಸೂಗಣ್ಣ ಗೋಗಿ, ಚಂದ್ರಶೇಖರ್ ಯಾಳಗಿ, ನಾಗರಾಜು ಹುಣಸಿಗಿ ಸೇರಿದಂತೆ ಇತರರಿದ್ದರು. ಬಸವರಾಜ್ ಹಯ್ಯಾಳ ಪ್ರಾರ್ಥಿಸಿದರು. ಡಾ. ಬಸವರಾಜ್ ಇಜೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿವಾಗಿ ಮಾತನಾಡಿದರು.