ವ್ಯಕ್ತಿಯೊಬ್ಬ ಚುನಾವಣೆಗೆ ಸ್ಪರ್ಧಿಸಿದ್ದ ತನ್ನ ಹೆಂಡತಿಯ ಗೆಲುವಿಗಾಗಿ ಮನೆ ಮನೆಗೆ ತೆರಳಿ ಹಣ ಹಂಚಿದ್ದಾನೆ. ಅದರೆ ತನ್ನ ಕನಸಿನಂತೆ ಹೆಂಡತಿ ಗೆಲ್ಲದಿದ್ದಾಗ ಮಾತ್ರ ಕೋಪಗೊಂಡ ಆತ ಆ ಹಣವನ್ನು ವಸೂಲಿ ಮಾಡಿದ್ದಾನೆ.

ಹೈದರಾಬಾದ್[ಫೆ.04]: ತೆಲಂಗಾಣದಲ್ಲಿ ಪತಿಯೊಬ್ಬ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ತನ್ನ ಹೆಂಡತಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡುತ್ತಾ ಗ್ರಾಮದ ಪ್ರತಿಯೊಂದು ಮನಗೆ ತೆರಳಿ ಹಣ ಹಂಚಿದ್ದಾನೆ. ಹಣ ಪಡೆದವರು ತನ್ನ ಹೆಂಡತಿಗೇ ಮತ ಹಾಕುತ್ತಾರೆ ಎಂದು ನಂಬಿದ್ದ ಆತ ತನ್ನ ಹೆಂಡತಿ ಗ್ರಾಮದ ಅಧ್ಯಕ್ಷೆಯಾಗುತ್ತಾಳೆಂದು ಕನಸು ಕಂಡಿದ್ದ. ಆದರೆ ಗ್ರಾಮಸ್ಥರು ಮಾತ್ರ ಬಹಳ ಬುದ್ಧಿವಂತರು, ಹೀಗಾಗಿ ಹಣ ಜೇಬಿಗೆ ಹಾಕಿ ಮತ ನೀಡದೆ ಸುಮ್ಮನಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ತೆಲಂಗಾಣದ ಸೂರ್ಯಪೆಟ ಜಿಲ್ಲೆಯ ಜಜಿರೆಡ್ಡಿಗುಡೇಂನಲ್ಲಿ ಈ ಘಟನೆ ನಡೆದಿದೆ. ವರದಿಗಳ ಅನ್ವಯ ತನ್ನ ಹೆಂಡತಿಯನ್ನು ಚುನಾವಣಾ ಕಣಕ್ಕಿಳಿಸಿದ ಗಂಡ ಆಕೆಯ ಗೆಲುವಿಗಾಗಿ ಗ್ರಾಮದ 630 ಮತದಾರರಿಗೆ 300 ರಿಂದ 600 ರೂಪಾಯಿಗಳನ್ನು ಹಂಚಿದ್ದರೆನ್ನಲಾಗಿದೆ. ಇಷ್ಟಾದರೂ ಆತನ ಹೆಂತಿಗೆ ಸಿಕ್ಕಿದ್ದು ಮಾತ್ರ ಕೇವಲ 24 ಮತಗಳು.

ಇದರಿಂದ ಕುಪಿತನಾದ ಆತ ಜನರ ಮನೆಗೆ ತೆರಳಿ ಹಣ ವಸೂಲಿ ಮಾಡಿದ್ದಾನೆ. ಕೆಲವರು ಈತನ ಬೆದರಿಕೆಗೆ ಹೆದರಿ ಹಣ ಮರಳಿಸಿದ್ದರೆ, ಇನ್ನು ಕೆಲವರು ಕೆಲ ದಿನಗಳ ಬಳಿಕ ಮರಳಿಸುವುದಾಗಿ ಮಾತು ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.