'ನನ್ನ ಹೆಸರು ದೇಶಕ್ಕೇ ಗೊತ್ತಾಗಬೇಕು!'

ನನ್ನ ಹೆಸರು ದೇಶಕ್ಕೇ ಗೊತ್ತಾಗಬೇಕು| ಆರೋಪಿ ಆದಿತ್ಯರಾವ್‌ ತಪ್ಪೊಪ್ಪಿಗೆ ಹೇಳಿಕೆ 

Whole Nation Should Know My Name Mangalore Bomber Aditya Rao Says During Investigation

ಬೆಂಗಳೂರು[ಜ.23]: ‘ದೇಶಕ್ಕೆ ನನ್ನ ಹೆಸರು ಗೊತ್ತಾಗಬೇಕು. ಅದಕ್ಕಾಗಿಯೇ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಡಲು ಯೋಜಿಸಿದೆ’ ಎಂದು ಆರೋಪಿ ಆದಿತ್ಯರಾವ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದ್ದರೂ ಪೊಲೀಸ್‌ ಮೂಲಗಳು ಅದನ್ನು ನಿರಾಕರಿಸಿವೆ.

ಮಂಗಳೂರು ಬಾಂಬ್‌ ಪತ್ತೆ ಪ್ರಕರಣದಲ್ಲಿ ಶರಣಾದ ಆರೋಪಿಯನ್ನು ವಶಕ್ಕೆ ಪಡೆದ ಹಲಸೂರು ಗೇಟ್‌ ಪೊಲೀಸರು, ಬಳಿಕ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಆ ವೇಳೆ ತನ್ನ ಕೃತ್ಯವನ್ನು ಆತ ಸಮರ್ಥಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಕೆಲಸಕ್ಕಿದ್ದ ಹೊಟೇಲ್‌ನಲ್ಲೇ ಬಾಂಬ್‌ ತಯಾರಿಸಿದ್ದನೇ ಆದಿತ್ಯ?

ಆದರೆ ಕೇಂದ್ರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಅವರು, ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಸಂಗತಿಯನ್ನು ಬಲವಾಗಿ ನಿರಾಕರಿಸಿದ್ದಾರೆ.

ಆದಿತ್ಯರಾವ್‌ ವಿರುದ್ಧ ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮ ಸರಹದ್ದಿನಲ್ಲಿ ನಗರದಲ್ಲಿ ಆತ ಪತ್ತೆಯಾಗಿದ್ದರಿಂದ ಸುಪರ್ದಿಗೆ ಪಡೆಲಾಯಿತು. ಬಳಿಕ ಆರೋಪಿಯ ವರ್ಗಾವಣೆ ಪ್ರಕ್ರಿಯೆ ನಡೆಸಿ ಸಂಜೆ ಹೊತ್ತಿಗೆ ಆತನನ್ನು ಮಂಗಳೂರು ಪೊಲೀಸರಿಗೊಪ್ಪಿಸಲಾಗಿದೆ. ನಾವು ತನಿಖೆ ನಡೆಸದ ಕಾರಣ ವಿಚಾರಣೆ ಅಗತ್ಯವಿಲ್ಲ ಎಂದು ಡಿಸಿಪಿ ಸ್ಪಷ್ಟಪಡಿಸಿದರು.

'ಬಾಂಬರ್‌ ಬೆಂಗಳೂರಿಗೆ ಬಂದು ಶರಣಾಗಿದ್ದೇಕೆ? ಇದೊಂದು ನಾಟಕ'

Latest Videos
Follow Us:
Download App:
  • android
  • ios