ಪ್ರಾಣಿಗಳ ಭವಿಷ್ಯ ನಿಜ ಆಗುತ್ತಂತೆ. ಫಿಫಾ ವಿಶ್ವ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಅಕ್ಟೋಪಸ್ ಸೂಚಿಸಿದ್ದ ಭವಿಷ್ಯ ನಿಜವಾಯಿತು. ಈಗ ಮಂಡ್ಯದಲ್ಲಿ ಶ್ವಾನವೊಂದು ಮುಂದಿನ ಸಿಎಂ ಯಾರು ಆಗಬಹುದು ಎಂದು ಭವಿಷ್ಯ ಹೇಳಿದೆ

ಮಂಡ್ಯ (ಏ.25): ಪ್ರಾಣಿಗಳ ಭವಿಷ್ಯ ನಿಜ ಆಗುತ್ತಂತೆ. ಫಿಫಾ ವಿಶ್ವ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಅಕ್ಟೋಪಸ್ ಸೂಚಿಸಿದ್ದ ಭವಿಷ್ಯ ನಿಜವಾಯಿತು. ಈಗ ಮಂಡ್ಯದಲ್ಲಿ ಶ್ವಾನವೊಂದು ಮುಂದಿನ ಮುಖ್ಯಮಂತ್ರಿ ಯಾರು ಆಗಬಹುದು ಎಂದು ಭವಿಷ್ಯ ಹೇಳಿದೆ. ಮಂಡ್ಯದ ಅಶೋಕನಗರದ ಗೋಪಿ ಮತ್ತು ಕುಟುಂಬ ಕಾಲ ಭೈರವೇಶ್ವರನ ಭಕ್ತರು. ಕಾಲ ಭೈರವೇಶ್ವರನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶ್ವಾನಕ್ಕೂ ಪೂಜೆ ಮಾಡಿದ್ದಾರೆ. ತರುವಾಯ ಶ್ವಾನದ ಮುಂದೆ ಮೂವರು ಮುಖ್ಯಮಂತ್ರಿ ಆಕಾಂಕ್ಷಿಗಳ ಫೋಟೋಗಳನ್ನು ಇಟ್ಟಿದ್ದಾರೆ. ಡಿ.ಕೆ.ಶಿವಕುಮಾರ್, ಬಸವರಾಜ ಬೊಮ್ಮಾಯಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಫೋಟೋ ಇಟ್ಟು ಯಾರಾಗಬಹುದು ಮುಂದಿನ ಸಿಎಂ ಎಂದು ಕೇಳಿದ್ದಾರೆ. ದೇವರತ್ತ ಒಂದು ಬಾರಿ ಮುಖ ಮಾಡಿದ ಶ್ವಾನ ಹೆಚ್.ಡಿ‌.ಕುಮಾರಸ್ವಾಮಿ ಫೋಟೋ ಹಿಡಿದಿದೆ. ಈ ಮೂಲಕ ಮುಂದಿನ ಮುಖ್ಯಮಂತ್ರಿ ಹೆಚ್ ಡಿಕೆ ಎಂದು ಶ್ವಾನ ಭವಿಷ್ಯ ನುಡಿದಿದೆ ಎನ್ನಲಾಗಿದೆ.

Party Rounds: ಕಾಂಗ್ರೆಸ್‌ಗೆ ಟಕ್ಕರ್‌, ಬಿಜೆಪಿಯಿಂದ MAY ಬ್ರಹ್ಮಾಸ್ತ್ರ!

ತಮ್ಮ ಪ್ರೀತಿಯ ನಾಯಿಗೆ ಗೋಪಿ ಕುಟುಂಬದವರು ಭೈರವ ಎಂದು ಹೆಸರಿಟ್ಟು ದೇವರಂತೆ ಪೂಜಿಸುತ್ತಾರೆ. ಪ್ರತಿವಾರ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ನಾಯಿಗೂ ಪೂಜೆ ಸಲ್ಲಿಸುತ್ತಾರೆ. ಈ ಹಿಂದೆ ಶ್ವಾನ ನೀಡಿದ ಸೂಚನೆಗಳು ನಿಜವಾಗುತ್ತಾ ಬಂದಿದೆ ಎಂದು ಈ ಕುಟುಂಬ ನಂಬಿದೆ. ತಾಯಿ, ಪುತ್ರ ಅನಾರೋಗ್ಯಕ್ಕೆ ತುತ್ತಾದಾಗಲೂ ಭೈರವನ ಕೃಪೆಯಿಂದ ಪಾರಾಗಿದ್ದರು. ಈ ನಾಯಿಗೆ ವಿಶೇಷ ಶಕ್ತಿ ಇದೆ, ಹಾಗಾಗಿ ಅದು ನೀಡುತ್ತಿರುವ ಸೂಚನೆಗಳು ನಿಜವಾಗ್ತಿದೆ ಅನ್ನುತ್ತಾರೆ ಗೋಪಿ.

PARTY ROUNDS: ಹುಬ್ಬಳ್ಳಿಯಲ್ಲಿ ಶೆಟ್ಟರ್‌ ಸೋಲಿಸಲು ರಾಜ್ಯ ನಾಯಕರಿಗೆ ಟಾಸ್ಕ್ ಕೊಟ್ಟ ಹೈಕಮಾಂಡ್!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.