Weather forecast: ದಕ್ಷಿಣ ಕನ್ನಡ, ಕೊಡಗಿಗೆ ಬ್ರೇಕ್‌ ನೀಡಿದ ಮಳೆ

ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆ ಕೊಂಚ ವಿರಾಮ ಪಡೆದಿತ್ತು. ಬಿಸಿಲು ಮತ್ತು ಮೋಡ ಕವಿದ ವಾತಾವಣ ಜಿಲ್ಲೆಯಲ್ಲಿದ್ದು, ಅಲ್ಪ ಮಳೆಯಾಗಿದೆ.

Wheather forecast rainfall break in Dakshina Kannada, Kodagu rav

ಮಂಗಳೂರು (ಜು.10) : ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆ ಕೊಂಚ ವಿರಾಮ ಪಡೆದಿತ್ತು. ಬಿಸಿಲು ಮತ್ತು ಮೋಡ ಕವಿದ ವಾತಾವಣ ಜಿಲ್ಲೆಯಲ್ಲಿದ್ದು, ಅಲ್ಪ ಮಳೆಯಾಗಿದೆ.

ಬೆಳ್ತಂಗಡಿ, ಉಪ್ಪಿನಂಗಡಿ, ಕಡಬ, ಧರ್ಮಸ್ಥಳ ಸುತ್ತಮುತ್ತ ಸ್ವಲ್ಪ ಮಳೆಯಾಗಿದ್ದು, ಉಳಿದೆಡೆ ತುಂತುರು ಮಳೆಯಾಗಿದೆ. ಮಂಗಳೂರಿನಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ಬಿಸಿಲು ಆವರಿಸಿತ್ತು.

ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ 13.2 ಮಿ.ಮೀ. ಸರಾಸರಿ ಮಳೆಯಾಗಿದೆ. ಮೂಡುಬಿದಿರೆಯಲ್ಲಿ 21.6 ಮಿ.ಮೀ ಹಾಗೂ ಸುಳ್ಯದಲ್ಲಿ 9.6 ಮಿ.ಮೀ, ಪುತ್ತೂರಿನಲ್ಲಿ 9.8 ಮಿ.ಮೀ, ಮಂಗಳೂರು 6.7 ಮಿ.ಮೀ, ಬೆಳ್ತಂಗಡಿ 26.1 ಮಿ.ಮಿ, ಕಡಬ 1 ಮಿ.ಮೀ, ಬಂಟ್ವಾಳದಲ್ಲಿ 13.7 ಮಳೆ ದಾಖಲಾಗಿದೆ.

 

Dakshina kannada rains: ಮಳೆಗೆ ಗಡಿಯಾರ ಶಾಲೆ ಬಳಿ ಗುಡ್ಡಕುಸಿತ: ಶಾಲೆಗೆ ರಜೆ

ಮಂಗಳವಾರ ಕರಾವಳಿಯ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಡಗಿನಲ್ಲಿ ಕೊಂಚ ಬ್ರೇಕ್

ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಮಳೆ ಬಿಡುವು ನೀಡಿತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆ ಬಿಸಿಲು, ಮೋಡ ಕವಿದ ವಾತಾವರಣ ಕಂಡುಬಂತು.

ಕೊಡಗಿನಲ್ಲಿ ಕಾಡಾನೆ ಉಪಟಳ: ನಾಳೆ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆಗೆ ನಿರ್ಧಾರ

ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 9.60 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 21.65 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 1.73 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 5.43 ಮಿ.ಮೀ. ಸರಾಸರಿ ಮಳೆಯಾಗಿದೆ.

Latest Videos
Follow Us:
Download App:
  • android
  • ios