Asianet Suvarna News Asianet Suvarna News

Udupi: ಗುಜರಿ ಅಂಗಡಿಯಲ್ಲಿ ಸಿಲಿಂಡರ್‌ ಸ್ಫೋಟಕ್ಕೆ ಕಾರಣವೇನು?

*   ಹತ್ ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ
*  ಘಟನೆಗೆ ನಿಜವಾದ ಕಾರಣ ಏನು?
*  ಘಟನೆಯಿಂದ ಸುಮಾರು 10 ಲಕ್ಷ ರೂ. ನಷ್ಟ
 

What Was The Reason Behind the LPG Cylinder Exploded in udupi grg
Author
Bengaluru, First Published Mar 22, 2022, 9:16 AM IST

ಉಡುಪಿ(ಮಾ.22):  ಜಿಲ್ಲೆಯ(Udupi) ಮಲ್ಲಾರಿನ ಮಸೀದಿಯೊಂದರ ಸಮೀಪದಲ್ಲಿದ್ದ ಬೃಹತ್ ಗುಜರಿ ಅಂಗಡಿಯಲ್ಲಿ ನಿನ್ನೆ(ಸೋಮವಾರ) ಸಿಲಿಂಡರ್ ಸ್ಫೋಟಗೊಂಡ(Explosion) ಪರಿಣಾಮ ಇಬ್ಬರು ಸ್ಥಳದಲ್ಲೇ ಸಜೀವ ದಹನಗೊಂಡಿದ್ದರು(Death). ಮೃತರನ್ನು ರಜಬ್ ಚಂದ್ರನಗರ ಮತ್ತು ರಜಬ್ ಮಲ್ಲಾರು ಎಂದು ಗುರುತಿಸಲಾಗಿದೆ. ಆದರೆ, ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. 

ಘಟನೆಗೆ ಕಾರಣ?

ಗುಜರಿ ಅಂಗಡಿಯಲ್ಲಿದ್ದ ಬೋಟ್‌ನ ಹೈಡ್ರಾಲಿಕ್‌ ಕಂಪ್ರೈಸರ್‌ನ್ನು ಗ್ಯಾಸ್‌ ಸಿಲಿಂಡರ್‌ ಮೂಲಕ ತುಂಡರಿಸುವ ವೇಳೆ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಸುಮಾರು 10 ಲಕ್ಷ ರೂ. ಹಾನಿ ಉಂಟಾಗಿರುವ ಸಾಧ್ಯತೆ ಇದೆ. 

Udupi Cylinder Blast: ಸ್ಫೋಟಕ್ಕೆ 2 ಬಲಿ, ಮೃತರೊಬ್ಬರ ಪತ್ನಿ 6 ತಿಂಗಳ ಗರ್ಭಿಣಿ

ಘಟನೆಯಲ್ಲು ಮೃತಪಟ್ಟವರನ್ನು ರಜಬ್ ಚಂದ್ರನಗರ ಮತ್ತು ರಜಬ್ ಮಲ್ಲಾರು ಎಂದು ಗುರುತಿಸಲಾಗಿದೆ. ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ ಮತ್ತೋರ್ವ ವ್ಯಕ್ತಿ ನಿಯಾಜ್ ಪರಿಸ್ಥಿತಿ ಗಂಭೀರವಾಗಿದೆ. ನಿಯಾಜ್ ಮೂಲತಃ ಸಾಗರದವರು ಎಂದು ತಿಳಿದುಬಂದಿತ್ತು. 

ಮೃತರಲ್ಲಿ ರಜಬ್ ಮಲ್ಲಾರು ಎಂಬವರ ಪತ್ನಿ 6 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಮೊದಲ ಮಗುವನ್ನು ಹಡೆದು 15 ವರ್ಷಗಳ ಬಳಿಕ ಈಕೆ ಗರ್ಭಿಣಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಿಯಾಜ್ ಅವರ ಪತ್ನಿ ಬಾಣಂತಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಗುಜರಿ ಅಂಗಡಿಯಲ್ಲಿ, ಕಬ್ಬಿಣದ ಪರಿಕರಗಳನ್ನು ತುಂಡರಿಸಲು ಕಟ್ಟಿಂಗ್ ಮಿಷನ್ ಇರಿಸಲಾಗಿದ್ದು, ಇದಕ್ಕೆ ಬಳಸುವ  ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಈ ಗುಜರಿ ಅಂಗಡಿಯಲ್ಲಿ ಮೀನುಗಾರಿಕಾ ಬೋಟ್ ಗಳ ಅವಶೇಷಗಳಿದ್ದು, ಅದರಿಂದಲೂ ಗ್ಯಾಸ್ ಹೊರಹೊಮ್ಮುವ ಸಾಧ್ಯತೆಗಳಿವೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ, ಅಂಗಡಿಯೊಳಗೆ ಇದ್ದಕ್ಕಿದ್ದಂತೆ ಬೆಂಕಿ ಸ್ಫೋಟಗೊಂಡಿದೆ. ಬೆಂಕಿಯ ಕೆನ್ನಾಲಿಗೆ ಯಲ್ಲಿ ಇಬ್ಬರು ಸುಟ್ಟು ಕರಕಲಾಗಿದ್ದಾರೆ. ಉಳಿದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರಿಗೆ ಅಗ್ನಿಶಾಮಕದಳದ ಪೈಪ್ ನಿಂದ ಚಿಮ್ಮಿದ ನೀರು ಮುಖಕ್ಕೆ ತಗುಲಿ ಗಂಭೀರ ಗಾಯಗಳಾಗಿವೆ.

ಗುಜರಿ ಅಂಗಡಿಯಲ್ಲಿ ನಡೆದ ದುರಂತದಲ್ಲಿ  ಮಡಿದವರ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್‌ ಕಾಪು ವರ್ತುಲ ಸಂತಾಪ ವ್ಯಕ್ತಪಡಿಸಿದೆ. ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಅಂತ ಸ್ಥಾನಿಕ ಅಧ್ಯಕ್ಷ ಅನ್ವರ್‌ ಅಲಿ ಕಾಪು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ. 

ಕಳೆದ ಹಲವು ವರ್ಷಗಳಿಂದ ಈ ಗುಜರಿ ಅಂಗಡಿಯನ್ನು ರಜಬ್‌, ರಜಬ್‌ ಮಲ್ಲಾರ್‌ ಹಾಗೂ ಹಾಸನಬ್ಬ ಪಾಲುದಾರಿಕೆಯಲ್ಲಿ ನಡೆಸಿಕೊಂಡು ಬರುತ್ತಿದ್ದರು. ಬೆಳಿಗ್ಗೆ ಅಂಗಡಿಯಲ್ಲಿ ದಿಢೀರ್‌ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಅಂಗಡಿಯ ಒಳಗಡೆ ಮೂವರು ಪಾಲುದಾರರು ಸೇರಿದಂತೆ ಒಟ್ಟು ಏಳು ಮಂದಿ ಕೆಲಸ ಮಾಡುತ್ತಿದ್ದರು. 

Udupi: ನಿಷೇಧಿತ ಪಚ್ಚಿಲೆ ಅಜೀರ್ ಮೀನುಗಾರಿಕೆ: ಏಳು ಮಂದಿ ಬಂಧನ

ಕೆಲಸಕ್ಕೆ ಬಂದ ದಿನವೇ ಸಾವು

ಅದರಲ್ಲಿ ಈರಪ್ಪ ಹಾಗೂ ವಿರೇಶ್‌ ದಿನಗೂಲಿ ಕೆಲಸಕ್ಕೆಂದು ನಿನ್ನೆಯಷ್ಟೇ ಬಂದಿದ್ದರು. ವಿಧಿಯಾಟಕ್ಕೆ ಕೆಲಸಕ್ಕೆ ಬಂದ ದಿನೇ ಮೃತಪಟ್ಟಿದ್ದಾರೆ. ವಾಹನದಿಂದ ಸಾಮಗ್ರಿ ಅನ್‌ಲೋಡ್‌ ಮಾಡುತ್ತಿದ್ದ ಶಂಸುದ್ದಿನ್‌ ಹೊರಗೆ ಓಡಿ ಹೋಗುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಳಗೆ ಇದ್ದ ರಜಬ್‌, ಹಾಗೂ ರಜಬ್‌ ಮಲ್ಲಾರ್‌ ಸುಟ್ಟುಕರಕಲಾಗಿದ್ದಾರೆ. 

ಗುಜರಿ ಅಂಗಡಿಯಲ್ಲಿದ್ದ ಹಳೆಯ ಸಾಮಗ್ರಿಗಳು ಬೆಂಕಿಯ ಕೆನ್ನಾಲಿಗೆಗೆ ಸ್ಫೋಟಿಸುತ್ತಿದ್ದವು. ಈ ಸದ್ದು ಸುತ್ತಮುತ್ತಲಿನ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಅಕ್ಕಪಕ್ಕದಲ್ಲಿದ್ದ ಹತ್ತಾರು ಮನೆಗಳಿದ್ದು ಅಗ್ನಿಶಾಮಕದಳದ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದೆ. ಇಲ್ಲವಾದಲ್ಲಿ ಅಕ್ಕಪಕ್ಕದ ಮನಗಳಿಗೆ ಬೆಂಕಿ ಹಬ್ಬುವ ಸಾಧ್ಯತೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios